ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Arecanut Price: ಏಕಾಏಕಿ ಗಗನಕ್ಕೇರಿದ ಅಡಿಕೆ ಬೆಲೆ - 53,856ಕ್ಕೆ ತಲುಪಿದ ರಾಶಿ ಅಡಿಕೆ !!

Arecanut price: ಅಡಿಕೆಯ (Areca Price) ಎಲ್ಲಾ ವೆರೈಟಿಗಳ ಧಾರಣೆಯ ಬೆಲೆಗಳು ಏರಿಕೆಯಾಗುತ್ತಿದ್ದು ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. 
06:52 AM Apr 25, 2024 IST | ಸುದರ್ಶನ್
UpdateAt: 08:47 AM Apr 25, 2024 IST
Advertisement

Arecanut Price: ಕಳೆದ ಕೆಲವು ದಿನಗಳಿಂದ ಅಡಿಕೆಯ (Areca Price) ಎಲ್ಲಾ ವೆರೈಟಿಗಳ ಧಾರಣೆಯ ಬೆಲೆಗಳು ಏರಿಕೆಯಾಗುತ್ತಿದ್ದು ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಕಾಣುತ್ತಿದೆ.

Advertisement

ಇದನ್ನೂ ಓದಿ:  BJP MP Dies : ಹೃದಯಾಘಾತಕ್ಕೆ ಬಿಜೆಪಿ ಸಂಸದ ಸಾವು !!

ಹೌದು, ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ರೀತಿ 47,000-48,000 ನಡೆಯುತ್ತಿದ್ದ ರಾಶಿ ಅಡಿಕೆ ಧಾರಣೆ, ಕಳೆದ ವಾರ 50,000 ರೂ. ದಾಟಿ, ಈಗ 53,856ಕ್ಕೆ ತಲುಪಿದೆ. ಇನ್ನೂ ಏರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ. ಒಮ್ಮೆಲೆ ಅಡಿಕೆ ಬೆಲೆ ಹೆಚ್ಚುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ.

Advertisement

ಇದನ್ನೂ ಓದಿ:  Gujarath: ನಿಮ್ಮ ಹೆಂಡತಿ-ಮಗಳನ್ನು ರಾಹುಲ್ ಗಾಂಧಿ ಜೊತೆ ಮಲಗಿಸಿ, ನಪುಂಸಕ ಹೌದೋ, ಅಲ್ವೋ ಗೊತ್ತಾಗತ್ತೆ !! ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ

ಬಿರು ಬೇಸಿಗೆಯಲ್ಲಿ ಅಂತರ್ಜಲ ಕುಸಿತ ರೈತರ ನಿದ್ದೆಗೆಡಿಸಿತ್ತು. ಎಲ್ಲೆಂದರಲ್ಲಿ ಬೋರ್ವೆಲ್ ಗಳ ನೀರು ನಿಲ್ಲುತ್ತಿದೆ. 1000 ಅಡಿ ಕೊರೆಸಿದರೂ ನೀರು ಬರುತ್ತಿಲ್ಲ. ಕೆರೆ, ಕಟ್ಟೆಗಳಲ್ಲೂ ನೀರು ಕಾಲಿ ಆಗಿದೆ. ಆದರೂ ಇತ್ತೀಚೆಗೆ ಸುರಿದ ಮಳೆ ರೈತರಿಗೆ ನಿರಾಳ ಎನಿಸಿತ್ತು. ಆದರೀಗ ಇದೇ ಸಮಯದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿರುವ ಆವಕವೂ ಏರುತ್ತಿದ್ದು, ಅಡಿಕೆ ಆವಕ ಏರಿದರೂ ಅಡಿಕೆ ಧಾರಣೆ ಏರುತ್ತಿರುವುದು ವಿಶೇಷವಾಗಿದೆ. ರೈತರಿಗೆ ಭಾರೀ ನೆಮ್ಮದಿ ಉಂಟುಮಾಡಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ:

• ಶಿವಮೊಗ್ಗ(Shivamogga) ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಲ್‌ಗೆ ಕನಿಷ್ಠ ₹30,006 ಇದ್ದರೆ ಗರಿಷ್ಠ ಧಾರಣೆ ₹53,869 ತಲುಪಿದೆ.

• ಸಾಗರ(Sagara) ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹42,399 ಇದ್ದರೆ ಗರಿಷ್ಠ ₹51,299 ಆಗಿತ್ತು.

• ಯಲ್ಲಾಪುರ(Yallapura) ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಗರಿಷ್ಠ ಇದ್ದರೆ ₹44,899 ಗರಿಷ್ಠ ₹55,609 ಬೆಲೆಗೆ ಮಾರಾಟವಾಗಿದೆ.

 

ಚುನಾವಣೆ ಬಳಿಕ ಇನ್ನೂ ಏರಿಕೆ?

ವೆರೈಟಿ ಅಡಿಕೆಗಳಾದ ಹಸ, ಬೆಟ್ಟೆ, ಇಡಿ, ಗೊರಬಲು, ಸಿಪ್ಪೆ ಗೋಟುಗಳ ದೊಡ್ಡ ಮಟ್ಟದ ಓಪನ್ ನಗದು ವ್ಯವಹಾರಕ್ಕೆ ಒಂದಿಷ್ಟು ಚುನಾವಣೆ ನೀತಿ ಸಂಹಿತೆ ನಿರ್ಬಂಧ ಇರುವುದರಿಂದ, ಎಲೆಕ್ಷನ್ ಮುಗಿದ ಮೇಲೆ ಅಡಿಕೆ ನಗದು ವ್ಯವಹಾರ ಇನ್ನಷ್ಟು ತೀವ್ರತೆ ಪಡೆದ ಮೇಲೆ ಧಾರಣೆ ಏರಿಕೆಯ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯ ಇದೆ.

Advertisement
Advertisement