ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Arecanut Farming: ಅಡಿಕೆಯ ಮೊಳಕೆಗಳನ್ನು ಬೆಳಸುವ ಸುಲಭ ವಿಧಾನ!! ಹೀಗೆ ಮಾಡಿ!!

04:58 PM Feb 05, 2024 IST | ಹೊಸ ಕನ್ನಡ
UpdateAt: 05:43 PM Feb 05, 2024 IST
Advertisement

ಮೊಳಕೆಯನ್ನು ತುಂಬ ಸುಲಭವಾಗಿ ಹೇಗೆ ತಯಾರಿಸಬಹುದು ಎಂದು ಈ ಮೂಲಕ ತಿಳಿಯೋಣ.

Advertisement

 

ಇತ್ತೀಚಿಗೆ ನಮ್ಮ ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಟ್ಟಿರುವಂತೆ ಕಾಣುತ್ತಿದೆ . ರೋಗ-ರುಜಿನ ಗಳಲ್ಲಿ ಹತೋಟಿ ಮತ್ತು ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ಕೆಲ ಸಮಸ್ಯೆಗಳಿಗೆ ಪರಿಹಾರ ದೊರೆತಿದೆ. ನಮ್ಮ ಕೃಷಿಕರು ಅಡಿಕೆ ಮೊಳಕೆಗಳನ್ನು ಬೆಳೆಸುವ ಸಲುವಾಗಿ ಅನೇಕ ಪ್ರಯೋಗಗಳನ್ನು ನಡೆಸಿ ಅವುಗಳಲ್ಲಿ ಸೂಕ್ತ ವಿಧಾನವನ್ನು ಆರಿಸಿಕೊಂಡಿದ್ದಾರೆ, ಮಣ್ಣಿನಲ್ಲಿ ಸೂಕ್ತ ರೀತಿಯಲ್ಲಿ ಬೀಜದ ಅಡಿಕೆ ಮೊಳಕೆಗಳನ್ನು ಸಿದ್ಧಪಡಿಸುವ ಕ್ರಮ ಸಹ ಒಂದಾಗಿದೆ. ಮಣ್ಣಿನಲ್ಲಿ ಬೀಜದ ಗೋಟುಗಳನ್ನು ಇಟ್ಟು ಮೊಳಕೆ ಸಸಿಗಳನ್ನು ಪಡೆಯುವ ಸೂಕ್ತ ವಿಧಾನದ ಬಗ್ಗೆ ತಿಳಿಯೋಣ.

Advertisement

ಇದನ್ನೂ ಓದಿ: Dakshina kannada: ಕರಾವಳಿಯಲ್ಲಿ ಕುತೂಹಲ ಕೆರಳಿಸಿದ 'ಕಮಲ' ಪಡೆ - ಕಟೀಲ್ ಬದಲಿಗೆ ಇವರಿಗೆ ಬಿಜೆಪಿ ಟಿಕೆಟ್?!

ಸಹಜವಾಗಿ ಒಂದು ಬೀಜ ಮೊಳಕೆ ಹೊಡೆಯಬೇಕಾದರೆ ಅದು ಮಣ್ಣಿನಲ್ಲಿ ಮುಚ್ಚಲ್ಪಟ್ಟ ಬೇಕು. ಇದು ಸಾಮಾನ್ಯವಾದ ವಿಷಯ ಆದರೆ ಅಡಿಕೆಯ ವಿಷಯದಲ್ಲಿ ಇದು ಸಾಮಾನ್ಯ ವಿಷಯ ಅನಿಸುವುದಿಲ್ಲ. ಏಕೆಂದರೆ ಅಡಿಕೆಗೆ ತನ್ನದೇ ಆದ ವಿಶೇಷ ಗುಣಲಕ್ಷಣಗಳನ್ನು ಹೊಂದಿದೆ. ತಾಯಿ ಮರದಿಂದ ಮತ್ತೊಂದು ಸಸಿಯನ್ನು ರೂಪಿಸುವುದು ಸುಲಭದ ಕೆಲಸವಲ್ಲ., ಸ್ವಲ್ಪ ಎಚ್ಚರ ತಪ್ಪಿದರೂ ನಾವು ಆರಿಸಿದ ಬೀಜದ ಗೋಟುಗಳು ಮೊಳಕೆ ಹೊಡೆಯದೆ ಭೂಮಿಯಲ್ಲಿ ಗೊಬ್ಬರವಾಗಿ ಬಿಡುತ್ತವೆ .

 

ಮೊದಲಿಗೆ ನಾವು ತಾಯಿಮರದಿಂದ ಆರಿಸಿದ ಬೀಜದ ಗೋಟುಗಳನ್ನು ಸಿದ್ಧಪಡಿಸಿಕೊಳ್ಳಬೇಕು. ನಂತರ ಭೂಮಿಯನ್ನು ನಮ್ಮ ಗೋಟುಗಳ ಲೆಕ್ಕದ ಆಧಾರದ ಮೇಲೆ ಜಾಗ ಸಾಕಾಗುವಷ್ಟು ಭೂಮಿಯನ್ನು 3 ಅಥವಾ 4 ಇಂಚು ಆಳವಾಗಿ ಹಗೆದು ಸ್ವಚ್ಛತೆ ಮಾಡಬೇಕಾಗುತ್ತದೆ. ಈ ಹಂತದಲ್ಲಿ ಕೆಲ ರೈತರು ತಪ್ಪು ಮಾಡುತ್ತಾರೆ, ಗುಂಡಿಯನ್ನು 4 ಇಂಚಿಗಿಂತ ಹೆಚ್ಚು ಹಗೆದು ಬಿಡ್ತಾರೆ. ಇದರಿಂದಾಗಿ ಗೋಟುಗಳು ಮೊಳಕೆ ಹೊಡೆದು ಹೊರ ಬರಲು ಕಷ್ಟವಾಗುತ್ತದೆ. ನಂತರ 1 ಇಂಚು ಮರಳನ್ನು ಗುಂಡಿಯೊಳಗೆ ಕಲ್ಲುಗಳನ್ನು ಬೇರ್ಪಡಿಸಿ ಸಮತಟ್ಟಾಗಿ ಮಾಡಬೇಕಾಗುತ್ತದೆ. ಅವಶ್ಯಕತೆ ಇದ್ದರೆ ನುಣ್ಣನೆಯ ಕಾಂಪೋಸ್ಟ್ ಗೊಬ್ಬರವನ್ನು ಸ್ವಲ್ಪಮಟ್ಟಿಗೆ ಸೇರಿಸಬಹುದು. ಕೆಲವರಿಗೆ ಮರಳನ್ನು ಬಳಸುವುದು ಏಕೆ ಎಂಬ ಪ್ರಶ್ನೆ ಇರಬಹುದು ? ಕಾರಣ, ಭೂಮಿಯಲ್ಲಿ ಸಾವಯವ ವಸ್ತುಗಳು ಮಣ್ಣಿನ ಮೇಲೆ ಬಿದ್ದ ಕೆಲ ದಿನಗಳಲ್ಲಿ ಗೆದ್ದಲು ಅಥವಾ ಕೊಳೆತು ಹೋಗುತ್ತದೆ. ಆದರೆ ಮರಳಿನ ಮೇಲೆ ಗೆದ್ದಲು ಬರುವುದಿಲ್ಲ. ಈ ಕಾರಣದಿಂದ ಬೀಜದ ಗೋಟುಗಳನ್ನು ರಕ್ಷಿಸಲು ಮರಳನ್ನು ಬಳಸಲಾಗುತ್ತದೆ. ಜೊತೆಗೆ ಮೊಳಕೆ ಒಡೆದ ಸಸಿಗಳನ್ನು ಸುಲಭವಾಗಿ ಬೇರ್ಪಡಿಸಲು ಸಹಾಯವಾಗುತ್ತದೆ. ಮರಳಿನಲ್ಲಿ ಅಥವಾ ಕಾಂಪೋಸ್ಟ್ ಗೊಬ್ಬರದಲ್ಲಿ ಗೆದ್ದಲು ಬರುವ ವಸ್ತುಗಳು ಅಂದರೆ ಕಡ್ಡಿಗಳು, ಎಲೆಗಳು, ನಾರುಗಳು ಮತ್ತು ಪ್ಲಾಸ್ಟಿಕ್ ಸಂಬಂಧಪಟ್ಟ ವಸ್ತುಗಳು ಇಲ್ಲದಾಗೆ ಎಚ್ಚರವಹಿಸಿ ನೋಡಿಕೊಳ್ಳಬೇಕು.

 

ತದನಂತರ ಬೀಜದ ಗೋಟುಗಳನ್ನು ಒಂದು ಕಡೆಯಿಂದ ಸಾಲಾಗಿ ಪಕ್ಕ ಪಕ್ಷಕ್ಕೆ ಗೋಟುಗಳ ಟೋಪಿ ಮೇಲಿರುವಂತೆ ಗೋಟುಗಳು ವಾಲದಂತೆ ನೇರವಾಗಿ ನಿಲ್ಲಿಸಿಕೊಂಡು ಅಚ್ಚುಕಟ್ಟಾಗಿ ಜೋಡಿಸಬೇಕು. ನಂತರ ಬೀಜದ ಅಡಿಕೆ ಗೋಟಿನ ಮೇಲೆ 1 ಅಂಗುಲ ಮರಳನ್ನು ಅರಡಬೇಕು, ಸ್ವಚ್ಛತೆ ಬಹುಮುಖ್ಯ. ನಂತರ ಮರಳಿನ ಮೇಲೆ ಅರ್ಧ ಅಂಗುಲ ಅಥವಾ 1 ಅಂಗುಲ ಮಣ್ಣನ್ನು ಹೊದಿಕೆಯಾಗಿ ಮುಚ್ಚಬೇಕು. ಹವಾಮಾನ ನೋಡಿಕೊಂಡು ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ನೀರನ್ನು ಕೊಡಬೇಕು . ಎರಡು ಅಥವಾ ಎರಡೂವರೆ ತಿಂಗಳಿನಲ್ಲಿ ಬೀಜದ ಗೋಟುಗಳು ಭೂಮಿಯ ಮೇಲ್ಪದರವನ್ನು ಸ್ಪರ್ಶಿಸಿ ಮೇಲೆ ಬರುತ್ತವೆ...

 

ಸೂಚನೆ.

ಅಧಿಕ ನೀರು ನಿಲ್ಲುವ ಪ್ರದೇಶದಲ್ಲಿ ಸ್ವಲ್ಪ ಎಚ್ಚರವಹಿಸಿ ನಿರ್ವಹಿಸಬೇಕು.

ಕಸಕಡ್ಡಿಗಳು ಗುಂಡಿಯೋಳಗೆ ಬೇರೆಯದಂತೆ ನೋಡಿಕೊಳ್ಳುವುದು.

ಕೆಲ ಚಿಕ್ಕ ಕೀಟಗಳಿಂದ ಹಾನಿಯಾಗುವ ಸಾಧ್ಯತೆ.

Advertisement
Advertisement