For the best experience, open
https://m.hosakannada.com
on your mobile browser.
Advertisement

Aravind Kejriwal: ಬಿಜೆಪಿ ಗೆದ್ದರೆ ಅಮಿತ್ ಶಾ ಪ್ರಧಾನ ಮಂತ್ರಿ - ಅರವಿಂದ್ ಕೇಜ್ರಿವಾಲ್ !!

Aravind Kejriwal: ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ(Narendra Modi) ಬದಲು ಅಮಿತ್ ಶಾ(Amith Shah) ಅವರು ದೇಶದ ಪ್ರಧಾನಮಂತ್ರಿಯಾಗುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್(Aravind Kejriwal) ಹೊಸ ಬಾಂಬ್ ಸಿಡಿಸಿದ್ದಾರೆ.
11:11 AM May 12, 2024 IST | ಸುದರ್ಶನ್
UpdateAt: 11:11 AM May 12, 2024 IST
aravind kejriwal  ಬಿಜೆಪಿ ಗೆದ್ದರೆ ಅಮಿತ್ ಶಾ ಪ್ರಧಾನ ಮಂತ್ರಿ   ಅರವಿಂದ್ ಕೇಜ್ರಿವಾಲ್
Advertisement

Aravind Kejriwal: ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ(Narendra Modi) ಬದಲು ಅಮಿತ್ ಶಾ(Amith Shah) ಅವರು ದೇಶದ ಪ್ರಧಾನಮಂತ್ರಿಯಾಗುತ್ತಾರೆ ಎಂದು ಅರವಿಂದ್ ಕೇಜ್ರಿವಾಲ್(Aravind Kejriwal) ಹೊಸ ಬಾಂಬ್ ಸಿಡಿಸಿದ್ದಾರೆ.

Advertisement

ಅಬಕಾರಿ ಹಗರಣದಿಂದಾಗಿ ಜೈಲು ಪಾಲಾಗಿ, ಶತಾಯ ಗತಾಯ ಪ್ರಯತ್ನದ ಬಳಿಕ ಸುಪ್ರೀಂ ಕೋರ್ಟ್(Supreme Court) ಷರತ್ತುಗಳ ಮೇಲೆ ಹೊರ ಬಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದು, ಮುಂದಿನ ಪ್ರಧಾನಿ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.

ಇದನ್ನೂ ಓದಿ: Suicide: KAS ಅಧಿಕಾರಿ ಪತ್ನಿ, ಹೈಕೋರ್ಟ್‌ ವಕೀಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Advertisement

ಬಿಜೆಪಿಯವರು ಇಂಡಿಯಾ ಮೈತ್ರಿಕೂಟ ಗೆದ್ದರೆ ಯಾರನ್ನು ಪ್ರಧಾನಿ ಮಾಡುತ್ತೀರಿ ಎಂದು ನಮ್ಮನ್ನು ಕೇಳ್ತಾರೆ. ಆದ್ರೆ, ನನ್ನ ಪ್ರಶ್ನೆ, ಬಿಜೆಪಿ ಗೆಲುವು ಸಾಧಿಸಿದರೆ, ಯಾರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡುತ್ತದೆ? ಯಾಕೆಂದರೆ ಇದೇ ಸೆ.17 ಬಂದ್ರೆ ನರೇಂದ್ರ ಮೋದಿ ಅವರಿಗೆ 75 ವರ್ಷ ಆಗುತ್ತದೆ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ನೀಡುವುದಿಲ್ಲ ಎಂಬ ನಿಯಮವಿದೆ. ಅಂದಮೇಲೆ ಮೋದಿ ಮುಂದಿನ ಬಾರಿಯೂ ಪ್ರಧಾನಿ ಆಗೋದಿಲ್ಲ. ಹಾಗಿದ್ರೆ, ಅವರ ಬದಲಿಗೆ ಅಮಿತ್ ಶಾ ಆಗ್ತಾರೆ ಅನಿಸುತ್ತದೆ ಎಂದು ಬಾಂಬ್ ಸಿಡಿಸಿ ಲೇವಡಿ ಮಾಡಿದ್ದಾರೆ.

ಅಲ್ಲದೆ ಇವರ ನಿಯಮದಂತೆ ಈ ವರೆಗೂ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ಮತ್ತು ಯಶ್ವಂತ್ ಸಿನ್ಹಾ ಇವರೆಲ್ಲರೂ ನಿವೃತ್ತಿ ಪಡೆದರು. ಈಗ ಮೋದಿ ಸರದಿ. ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚನೆ ಆದರೆ, ಬಿಜೆಪಿ ಮೊದಲು ಯೋಗಿ ಆದಿತ್ಯನಾಥ್‌ರನ್ನು ತೆಗೆದುಹಾಕಿ, ಆನಂತರ ಅಮಿತ್ ಶಾ ಅವರನ್ನು ದೇಶದ ಪ್ರಧಾನಿಯಾಗಿ ಮಾಡುತ್ತದೆ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಇತಿಹಾಸದ ಪುಟ ಸೇರಿದ ರೈಡರ್ಗಳ ನೆಚ್ಚಿನ ಬೈಕ್ ಕವಾಸಕಿ ನಿಂಜಾ 400; ಭಾರತ ಸೇರಿದಂತೆ ವಿಶ್ವದಾದ್ಯಂತ ಮಾರಾಟ ನಿಲ್ಲಿಸಿದ ಕಂಪನಿ

Advertisement
Advertisement
Advertisement