ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Hibiscus: ಕೂದಲಿನ ಯಾವುದೇ ಸಮಸ್ಯೆಗೆ ಇದೊಂದೇ ರಾಮಬಾಣ! ದಾಸವಾಳದ ಹೂವಿನ ಪುಡಿಯನ್ನು ಹೀಗೊಮ್ಮೆ ಬಳಸಿ ನೋಡಿ!

Hibiscus: ದಾಸವಾಳದ ಹೂವಿನ ಪುಡಿಯನ್ನು ಹೀಗೊಮ್ಮೆ ಹೇರ್ ಮಾಸ್ಕ್ ಮಾಡಿ ಬಳಸಿ ನೋಡಿ, ನಿಮಗೆ ಖಂಡಿತಾ ಉತ್ತಮ ಫಲಿತಾಂಶ ದೊರೆಯುತ್ತೆ.
10:13 AM Jun 11, 2024 IST | ಕಾವ್ಯ ವಾಣಿ
UpdateAt: 10:13 AM Jun 11, 2024 IST
Advertisement

Hibiscus: ಕೂದಲಿನ ಯಾವುದೇ ಸಮಸ್ಯೆ ಇದ್ದರೂ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ ಕೂದಲಿನ ಉದುರುವಿಕೆ, ಕೂದಲು ಬಿಳಿಯಾಗುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೌದು, ತಲೆ ಕೂದಲು ಉದುರುವಿಕೆಯನ್ನು ತಡೆಯುವುದರಿಂದ ಹಿಡಿದು ಕೂದಲಿಗೆ ಉತ್ತಮ ಹೊಳಪು ನೀಡುವಲ್ಲಿ ದಾಸವಾಳ (Hibiscus) ಪಾತ್ರ ತುಂಬಾ ಮಹತ್ವ ಆಗಿದೆ. ಅದಕ್ಕಾಗಿ ದಾಸವಾಳದ ಹೂವಿನ ಪುಡಿಯನ್ನು ಹೀಗೊಮ್ಮೆ ಹೇರ್ ಮಾಸ್ಕ್ ಮಾಡಿ ಬಳಸಿ ನೋಡಿದರೆ ನಿಮಗೆ ಖಂಡಿತಾ ಉತ್ತಮ ಫಲಿತಾಂಶ ದೊರೆಯುತ್ತೆ.

Advertisement

Lokasaba Speaker: ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಲೋಕಸಭೆಯ ಸ್ಪೀಕರ್ - ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ಪ್ಲಾನ್ ಮಾಡಿದ ಬಿಜೆಪಿ !!

ಹೌದು, ದಾಸವಾಳವು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುವ ಪೋಷಕಾಂಶಗಳಿಂದ ತುಂಬಿದ್ದು, ದಾಸವಾಳದ ಹೂವನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ, ನಯವಾಗಿ ಪುಡಿ ಮಾಡಿ ಕೂದಲಿಗೆ ಈ ರೀತಿಯಲ್ಲಿ ಬಳಸುವುದರಿಂದ ಪ್ರಯೋಜನಗಳು ಹಲವಿದೆ.

Advertisement

ಅದಕ್ಕಾಗಿ ಹೇರ್ ಮಾಸ್ಕ್ ತಯಾರಿಸುವ ವಿಧಾನ: ಬೇಕಾಗುವ ಸಾಮಗ್ರಿಗಳು - ತೆಂಗಿನ ಎಣ್ಣೆ, ಮೊಸರು ಹಾಗೂ ದಾಸವಾಳದ ಹೂವಿನ ಪುಡಿ.

ಒಂದು ಬೌಲಿಗೆ ತೆಂಗಿನ ಎಣ್ಣೆ, ಮೊಸರು ಹಾಗೂ ದಾಸವಾಳದ ಹೂವಿನ ಪುಡಿಯನ್ನು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ನೆತ್ತಿಯ ತುದಿಗೆ ಹಾಗೂ ಬೇರಿಗೆ ಚೆನ್ನಾಗಿ ಹಚ್ಚಬೇಕು. ನಂತರ ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು.

ಹೀಗೆ ಮಾಡುವುದರಿಂದ ಮುಖ್ಯವಾಗಿ ದಾಸವಾಳದಲ್ಲಿ ಅಮೈನೋ ಆಮ್ಲಗಳಿರುವ ಕಾರಣ ಇದು ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯನ್ನು ತಡೆಯುತ್ತದೆ.

ಇನ್ನು ಇದು ಕೂದಲಿನ ಹೊರಪೊರೆಗಳನ್ನು ಮುಚ್ಚಲು ಸಹಾಯ ಮಾಡುತ್ತದೆ, ನಿಮ್ಮ ಕೂದಲನ್ನು ಸುಗಮವಾಗಿ ಮತ್ತು ಹೆಚ್ಚು ಪ್ರತಿಫಲಿಸುತ್ತದೆ, ಇದರ ಪರಿಣಾಮವಾಗಿ ಹೊಳಪನ್ನು ಹೆಚ್ಚಿಸುತ್ತದೆ.

ದಾಸವಾಳ ಆಂಟಿಬ್ಯಾಕ್ಟಿರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ತಲೆಹೊಟ್ಟು ಮತ್ತು ತುರಿಕೆಯಂತಹ ನೆತ್ತಿಯ ಸೋಂಕನ್ನು ಎದುರಿಸಲು ಸಹಾಯ ಮಾಡುತ್ತದೆ.

ದಾಸವಾಳ ಪೋಷಣೆಯ ಗುಣಲಕ್ಷಣಗಳು ಹಾನಿಗೊಳಗಾದ ತುದಿಗಳನ್ನು ಸರಿಪಡಿಸುತ್ತದೆ, ಮತ್ತಷ್ಟು ಕೂದಲ ವಿಭಜನೆಯನ್ನು ತಡೆಯುತ್ತದೆ.

ದಾಸವಾಳದ ನೈಸರ್ಗಿಕ ಗುಣಲಕ್ಷಣಗಳು ಕೂದಲು ಕಿರುಚೀಲಗಳನ್ನು ಪೋಷಿಸಲು ಸಹಾಯ ಮಾಡುತ್ತದೆ, ಮತ್ತು ಕೂದಲು ಬಿಳಿಯಾಗದ ಹಾಗೆ ತಡೆಯುತ್ತದೆ.

Dakshina Kannada: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ; ಕಾರ್ಯಕರ್ತರ ವಿರುದ್ಧವೇ ಎಫ್‌ಐಆರ್‌ ದಾಖಲು

Advertisement
Advertisement