For the best experience, open
https://m.hosakannada.com
on your mobile browser.
Advertisement

Bengaluru Kambala: ಬೆಂಗಳೂರು ಕಂಬಳದ ಅತಿಥಿ ಹೆಸರು ಘೋಷಣೆ - ಹೆಸರು ಕೇಳುತ್ತಿದ್ದಂತೆ ಹೆಚ್ಚಿದ ಭಾರೀ ಆಕ್ರೋಶ !!

03:50 PM Nov 21, 2023 IST | ಕಾವ್ಯ ವಾಣಿ
UpdateAt: 06:50 PM Nov 21, 2023 IST
bengaluru kambala  ಬೆಂಗಳೂರು ಕಂಬಳದ ಅತಿಥಿ ಹೆಸರು ಘೋಷಣೆ   ಹೆಸರು ಕೇಳುತ್ತಿದ್ದಂತೆ ಹೆಚ್ಚಿದ ಭಾರೀ ಆಕ್ರೋಶ
Advertisement

Bengaluru Kambala: ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಹಾಗೂ 26 ರಂದು ಅದ್ದೂರಿಯಾಗಿ ನಡೆಯಲಿರುವ ಕಂಬಳದ (Bengaluru Kambala) ಸುದ್ದಿ ಎಲ್ಲೆಡೆ ಚರ್ಚೆ ಆಗುತ್ತಿದ್ದು, ಈ ಹಿನ್ನೆಲೆ ಭಾನುವಾರದ ಸಭಾ ಕಾರ್ಯಕ್ರಮಕ್ಕೆ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಆಹ್ವಾನ ಮಾಡಿರುವುದಕ್ಕೆ ಜನರಿಂದ ಭಾರೀ ವಿರೋಧಗಳು ವ್ಯಕ್ತವಾಗುತ್ತಿವೆ.

Advertisement

ಹೌದು, ಈಗಾಗಲೇ ಭಾರತೀಯ ಕುಸ್ತಿ ಪಟುಗಳ ಒಕ್ಕೂಟದ ಮುಖ್ಯಸ್ಥರಾಗಿದ್ದ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು. ಜೊತೆಗೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಪೊಲೀಸರು ತೆರವುಗೊಳಿಸಿದ್ದ ಕ್ರಮಕ್ಕೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆ ನಂತರ ಲೈಂಗಿಕ ಪ್ರಕರಣದ ಆರೋಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಬಂಧನಕ್ಕೆ ಒಳಪಡಿಸಬೇಕು ಎಂದು ಆಗ್ರಹವೂ ಹೆಚ್ಚಾಗಿತ್ತು. ಈ ನಡುವೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳ ಆಧಾರದ ಮೇಲೆ 2 ಎಫ್ಐಆರ್ ಮತ್ತು 10 ದೂರುಗಳನ್ನು ದಾಖಲಿಸಿದ್ದಾರೆ. ದೂರಿನಲ್ಲಿ ಕುಸ್ತಿಪಟುಗಳ ಎದೆಯ ಮೇಲೆ ಕೈ ಹಾಕುವುದು, ಬೆನ್ನು ಸವರುವುದು ಮತ್ತು ಅವರನ್ನು ಹಿಂಬಾಲಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಐಪಿಸಿ ಸೆಕ್ಷನ್ 354 ಎ, 354 ಡಿ ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಚಾರ್ಜ್ ಶೀಟ್ ಕೂಡಾ ಸಲ್ಲಿಕೆಯಾಗಿದೆ.

ಆದರೆ ಇದೀಗ ಬೆಂಗಳೂರು ಕಂಬಳಕ್ಕೆ ಬ್ರಿಜ್ ಭೂಷಣ್ ಅವರಿಗೆ ಆಹ್ವಾನ ನೀಡಿರುವುದಕ್ಕೆ ವ್ಯಾಪಕ ವಿರೋಧ ಎದುರಾಗಿದೆ. ಕಾಂಗ್ರೆಸ್ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಈ ಕಂಬಳ ನಡೆಯುತ್ತಿದ್ದು, ರಾಜ್ಯ ಸರ್ಕಾರ ಒಂದು ಕೋಟಿ ಅನುದಾನವನ್ನು ನೀಡಿದೆ. ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಸರ್ಕಾರದ ಸಚಿವರು ಮತ್ತು ವಿರೋಧ ಪಕ್ಷದ ಪ್ರಮುಖರು ಭಾಗಿಯಾಗಲಿದ್ದಾರೆ. ಹೀಗಿರುವಾಗ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಆರೋಪಿಯನ್ನು ಕಂಬಳಕ್ಕೆ ಅಥಿತಿಯಾಗಿ ಆಹ್ವಾನ ನೀಡಿರುವುದಕ್ಕೆ ಟೀಕೆಗಳು ವ್ಯಕ್ತವಾಗಿದೆ.

Advertisement

ಈ ಕುರಿತಾಗಿ ಮಾತನಾಡಿದ ಬೆಂಗಳೂರು ಕಂಬಳ ಸಮಿತಿಯ ಸಂಚಾಲಕರು ಮತ್ತು ಪುತ್ತೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಅಶೋಕ್ ರೈ, ‘ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಅವರನ್ನು ಕಂಬಳಕ್ಕೆ ಆಹ್ವಾನ ಮಾಡಬೇಕು ಎಂಬ ಬೇಡಿಕೆಯನ್ನು ಸಿದ್ದಿ ಜನಾಂಗ ಹಾಗೂ ಕುಸ್ತಿಪಟುಗಳ ಸಂಘಟನೆ ಇಟ್ಟಿತ್ತು. ಈ ಕಾರಣಕ್ಕಾಗಿ ಅವರನ್ನು ಆಹ್ವಾನ ಮಾಡಲಾಗಿದೆ. ಆದರೆ ಅವರು ಕಂಬಳದಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ ಇದೆ. ಅವರ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಆರೋಪ ಇದೆ. ಈ ಹಿನ್ನೆಲೆಯಲ್ಲಿ ವಿರೋಧ ಇದ್ದರೆ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರನ್ನು ಕೈಬಿಡಲು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನು ಓದಿ: BBK Season 10: ಬಿಗ್ ಬಾಸ್ ಕಾರ್ತಿಕ್'ಗೆ ಎರಡು ಮದುವೆ ಯೋಗ- ಹೇಳಿದ್ಯಾರು? ಹೆಣ್ಣುಗಳ್ಯಾರು ಗೊತ್ತಾ ?!

Advertisement
Advertisement
Advertisement