ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Andrapradesh: ಸುಟ್ಟು ಕರಕಲಾದ ಹೆಣ - ಪೋಸ್ಟ್ ಮಾರ್ಟಂ ಆಗುತ್ತಿದ್ದಂತೆ ಸತ್ತ ವ್ಯಕ್ತಿಂದಲೇ ಬಂತು ಫೋನ್ ಕಾಲ್..!!

01:18 PM Jan 29, 2024 IST | ಹೊಸ ಕನ್ನಡ
UpdateAt: 01:23 PM Jan 29, 2024 IST
Advertisement

Andrapradesh: ವ್ಯಕ್ತಿಯೊಬ್ಬನ ದೇಹವು ಸುಟ್ಟು ಕರಕಲಾಗಿದ್ದು, ಪೋಲೀಸರು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು. ಆದರೆ ಇದಾದ ಕೆಲವೇ ಗಂಟೆಗಳ ನಂತರ 'ಮೃತ' ವ್ಯಕ್ತಿಯಿಂದ ಫೋನ್ ಕಾಲ್ ಬಂದಿದೆ.

Advertisement

ಇದನ್ನೂ ಓದಿ: Sleeping Tips: ಬೆಳ್ಳಂಬೆಳಗ್ಗೆ ಎಳ್ತಾ ಇದ್ದೀರಾ? ಹುಷಾರ್, ಆರೋಗ್ಯ ಕೆಡಬಹುದು

ಹೌದು, ಆಂಧ್ರಪ್ರದೇಶದ(Andra pradesh) ಪೂರ್ವ ಗೋದಾವರಿ ಜಿಲ್ಲೆಯ ರಂಗಂಪೇಟೆ ಮಂಡಲದ ವೀರಂಪಲೆಮ್‌ ಗದ್ದೆಯಲ್ಲಿ ವ್ಯಕ್ತಿಯ ಸುಟ್ಟ ದೇಹ ಪತ್ತೆಯಾಗಿತ್ತು. ಜನವರಿ 26 ರಂದು ಬೆಳಿಗ್ಗೆ ಗ್ರಾಮಸ್ಥರು ಧಾನ್ಯದ ವ್ಯಾಪಾರಿ ಕೇತಮಲ್ಲ ಪೂಸಯ್ಯ ಎಂಬುವವರ ಒಡೆತನದ ಕೃಷಿ ಕ್ಷೇತ್ರದ ವಿದ್ಯುತ್ ಟ್ರಾನ್ಸ್‌ ಫಾರ್ಮರ್ ಬಳಿ ಸಂಪೂರ್ಣವಾಗಿ ಸುಟ್ಟ ಶವ ಕಂಡು ಮಾಹಿತಿ ನೀಡಿದ್ದಾರೆ. ಮೃತದೇಹದ ಬಳಿ ಪೂಸಯ್ಯನ ಪಾದರಕ್ಷೆಗಳು ಇದ್ದ ಕಾರಣ, ಗ್ರಾಮಸ್ಥರು ಅವರನ್ನು ಕೊಲೆ ಮಾಡಲಾಗಿದೆ ಎಂದು ಭಾವಿಸಿ ಪೊಲೀಸರಿಗೆ ಹಾಗೂ ಪೂಸಯ್ಯನ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಕುಟುಂಬದವರು ಕಣ್ಣೀರಿಟ್ಟಿದ್ದಾರೆ.

Advertisement

ಮರಣೋತ್ತರ ಪರೀಕ್ಷೆ ನಡೆಯುತ್ತಿರುವಾಗ, ಪೂಸಯ್ಯನ ಕುಟುಂಬದವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಸ್ವತಃ ಪೂಸಯ್ಯ ಅವರೇ ಮಾತನಾಡಿ, ಜೀವಂತವಾಗಿದ್ದೇನೆ ಎಂದು ತಿಳಿಸಿ, ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾರೆ ಎಂದು ರಂಗಂಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ ಪೆಕ್ಟರ್ ಪಿ. ವಿಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪೂಸಯ್ಯನ ಫೋನು ಬಂದ ತಕ್ಷಣ ವಿಳಾಸ ಪಡೆದ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಕೆತಮಲ್ಲ ಪೂಸಯ್ಯನಿಗೆ ಯಾರೋ ಚೆನ್ನಾಗಿ ಥಳಿಸಿ ಆತನನ್ನು ಬಿಸಾಕಿ ಹೋಗಿದ್ದರು. ಬಳಿಕ ಚಿಕಿತ್ಸೆ ಅವನಿಗೆ ಕೊಡಿಸಿದ್ದಾರೆ. ಪೂಸಯ್ಯ ನಡದೆ ಘಟನೆಯ್ನು ಪೊಲೀಸರಿಗೆ ವಿವರಿಸಿದ್ದಾನೆ.

ಪೂಸಯ್ಯ ಹೇಳಿದ್ದೇನು?

ಗುರುವಾರ ರಾತ್ರಿ ತನ್ನ ಜಮೀನಿನಲ್ಲಿ ಮೂರು ಅಪರಿಚಿತ ಯುವಕರು ವ್ಯಕ್ತಿಯೊಬ್ಬನ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದನ್ನು ನೋಡಿದೆ. ಅವರನ್ನು ತಡೆಯಲು ಮುಂದಾದಾಗ ಹಿಡಿದು ಹಲ್ಲೆ ನಡೆಸಿದ್ದಾರೆ. ಮೂವರು ಆತನ ಪಾದರಕ್ಷೆಗಳನ್ನು ಶವದ ಬಳಿ ಇಟ್ಟು ಆಟೋದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು. ಅವರು ಥಳಿಸುವಾಗ ಪ್ರಜ್ಞೆ ಕಳೆದುಕೊಂಡರು. ನಂತರ ಎಚ್ಚರಗೊಂಡು ನೋಡಿದಾಗ ರಾಜಮಹೇಂದ್ರವರಂ ಗ್ರಾಮಾಂತರ ಮಂಡಲದ ಪಿಡಿಂಗೊಯ್ಯ ಸಮೀಪದ ಕೃಷಿ ಗದ್ದೆಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೂಸಯ್ಯ ಹೇಳಿದ್ದಾರೆ.

Advertisement
Advertisement