ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Andhra Pradesh Election: ಕರ್ನಾಟಕ ಮಾದರಿ ಗ್ಯಾರಂಟಿ ಘೋಷಣೆ ಮಾಡಿದ ಆಂಧ್ರಪ್ರದೇಶ; ರೈತರಿಗೆ 20 ಸಾವಿರ, ನಿರುದ್ಯೋಗಿಗಳಿಗೆ 3 ಸಾವಿರ, ಮಹಿಳೆಯರಿಗೆ ರೂ. 1500 ಪಿಂಚಣಿ

Andhra Pradesh Election: ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯನ್ನು ಎನ್‌ಡಿಎ ಬಿಡುಗಡೆ ಮಾಡಿದೆ.
12:34 PM May 01, 2024 IST | ಸುದರ್ಶನ್
UpdateAt: 12:38 PM May 01, 2024 IST
Advertisement

Andhra Pradesh Election: ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯನ್ನು ಎನ್‌ಡಿಎ ಬಿಡುಗಡೆ ಮಾಡಿದೆ. ಇದರಲ್ಲಿ ಮಹಿಳೆಯರಿಗೆ ತಿಂಗಳಿಗೆ 1500 ರೂಪಾಯಿ ಪಿಂಚಣಿ ನೀಡುವ ಬಗ್ಗೆ ಮೈತ್ರಿಕೂಟ ಹೇಳಿದೆ. ನಿರುದ್ಯೋಗಿ ಯುವಕರಿಗೆ ಪ್ರಣಾಳಿಕೆಯಲ್ಲಿ ದೊಡ್ಡ ಘೋಷಣೆಯನ್ನೂ ಮಾಡಲಾಗಿದೆ. ನಿರುದ್ಯೋಗ ಭತ್ಯೆಯನ್ನು ಪ್ರತಿ ತಿಂಗಳು 3,000 ರೂ.ಗಳ ಆರ್ಥಿಕ ನೆರವಿನ ರೂಪದಲ್ಲಿ ಖಾತ್ರಿಪಡಿಸುವ ಭರವಸೆ ಪ್ರಕಟಣೆಯಲ್ಲಿದೆ.

Advertisement

ಇದನ್ನೂ ಓದಿ:  Lucknow: ಸೋಷಿಯಲ್‌ ಮೀಡಿಯಾ ಲವ್‌; ಯುವತಿ ಎಂದು 45 ರ ಆಂಟಿ ಜೊತೆ 20 ರ ಯುವಕನ ಲವ್‌

ಮಂಗಳವಾರ, ಏಪ್ರಿಲ್ 30 ರಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್, ಪ್ರಣಾಳಿಕೆಯು ಟಿಡಿಪಿಯ 'ಸೂಪರ್ ಸಿಕ್ಸ್' ಮತ್ತು ತಮ್ಮ ಪಕ್ಷದ 'ಷಣ್ಮುಖ ವಾಯುಹಂ' ಅನ್ನು ಒಳಗೊಂಡಿದೆ ಎಂದು ಹೇಳಿದರು. ಟಿಡಿಪಿ ಈಗಾಗಲೇ 'ಸೂಪರ್ ಸಿಕ್ಸ್' ಬಗ್ಗೆ ಘೋಷಿಸಿದೆ. ಪಕ್ಷವು ತನ್ನ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ, ಪ್ರತಿ ವರ್ಷ ಪ್ರತಿ ಮನೆಗೆ ಮೂರು ಉಚಿತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಪ್ರತಿ ಶಾಲೆಗೆ ಹೋಗುವ ಮಗುವಿಗೆ ವರ್ಷಕ್ಕೆ 15,000 ರೂ.ಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ. ಇದರೊಂದಿಗೆ ರೈತರಿಗೆ 20 ಸಾವಿರ ರೂ.ಗಳ ಭರವಸೆ ನೀಡಲಾಗಿದೆ.

Advertisement

ಇದನ್ನೂ ಓದಿ:  Viral News: ಉಸಿರಾಟದ ವೇಳೆ ಶ್ವಾಸಕೋಶ ಹೊಕ್ಕ ಮೂಗುಬೊಟ್ಟು; ಶಸ್ತ್ರಚಿಕಿತ್ಸೆಯ ಮೊರೆ ಹೋದ ಮಹಿಳೆ

ಎನ್‌ಡಿಎ ಈ ಪ್ರಣಾಳಿಕೆಗೆ ‘ಪ್ರಜಾ ಗಲಂ’ ಎಂದು ಹೆಸರಿಟ್ಟಿದೆ. ಪ್ರಣಾಳಿಕೆ ಬಿಡುಗಡೆ ವೇಳೆ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಮತ್ತು ಬಿಜೆಪಿಯ ಹಿರಿಯ ನಾಯಕರು ಭಾಗವಹಿಸಿದ್ದರು. ಈ ಪ್ರಣಾಳಿಕೆಯನ್ನು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಮನೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಆಂಧ್ರ ಪ್ರದೇಶ ಬಿಜೆಪಿ ಉಸ್ತುವಾರಿ ಸಿದ್ಧಾರ್ಥ್ ಸಿಂಗ್ ಕೂಡ ಉಪಸ್ಥಿತರಿದ್ದರು.

ಜನಸೇನಾ, ಟಿಡಿಪಿ ಮತ್ತು ಬಿಜೆಪಿ ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ. ಮೈತ್ರಿಯ ಪ್ರಕಾರ, ಟಿಡಿಪಿ 17 ಲೋಕಸಭಾ ಸ್ಥಾನಗಳು ಮತ್ತು 144 ವಿಧಾನಸಭಾ ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಆದರೆ, ಬಿಜೆಪಿ 6 ಲೋಕಸಭೆ ಮತ್ತು 10 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸಲಿದೆ. ಪವನ್ ಕಲ್ಯಾಣ್ ಅವರ ಪಕ್ಷವಾದ ಜನಸೇನಾ 21 ವಿಧಾನಸಭೆ ಮತ್ತು 2 ಲೋಕಸಭೆ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸರ್ಕಾರವಿರುದ ಆಂಧ್ರಪ್ರದೇಶದಲ್ಲಿ ಒಟ್ಟು 175 ವಿಧಾನಸಭಾ ಸ್ಥಾನಗಳು ಮತ್ತು 25 ಲೋಕಸಭಾ ಸ್ಥಾನಗಳಿವೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮೇ 13 ರಂದು ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

Advertisement
Advertisement