Allu Arjun Fans Attack: ನಟ ಅಲ್ಲು ಅರ್ಜುನ್ ಮತ್ತು ನಟ ಪ್ರಭಾಸ್ ಫ್ಯಾನ್ ವಾರ್; ವ್ಯಕ್ತಿಗೆ ಬಾಯಿಯಲ್ಲಿ ರಕ್ತ ಬರುವಂತೆ ಹೊಡೆದ ಅಲ್ಲು ಅರ್ಜುನ್ ಅಭಿಮಾನಿಗಳು
Allu Arjun Fans Attack: ಬೆಂಗಳೂರಿನಲ್ಲಿ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅಭಿಮಾನಿಗಳು ಯಾವುದೋ ಒಂದು ಸಣ್ಣ ವಿಚಾರಕ್ಕೆ ಪ್ರಭಾಸ್ ಅಭಿಮಾನಿ ಒಬ್ಬನಿಗೆ ರಕ್ತ ಬರುವಂತೆ ಹೊಡೆದಿದ್ದಾರೆ.
ಹೀಗೆ ತಮ್ಮ ನಟರ ಪರವಾಗಿ ಮಾತನಾಡಿಕೊಳ್ಳುವಾಗ ಸಣ್ಣ ವಿಚಾರವೊಂದಕ್ಕೆ ಆರಂಭವಾದ ಜಗಳ ಹೊಡೆದಾಟದಲ್ಲಿ ಮುಕ್ತಾಯವಾಗಿದೆ. ಹೀಗೆ ಹೊಡೆದಾಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.
ಎಕ್ಸ್ ನಲ್ಲಿ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, "ಯಾವ ನಟನು ಸಹ ನಿಮ್ಮ ಜೀವನವನ್ನು ಉದ್ಧಾರ ಮಾಡುವುದಿಲ್ಲ, ನೀವು ಸತ್ತರೆ ನಿಮ್ಮ ತಂದೆ ತಾಯಿ ನಿಮ್ಮ ಕುಟುಂಬದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ, ನೀವು ನಿಜವಾಗಲೂ ಅಭಿಮಾನಿಯಾಗುವುದಿದ್ದರೆ ದೇಶದ ಸೈನಿಕರ ಅಭಿಮಾನಿಯಾಗಿ" ಎಂದು ಎಕ್ಸ್ ನಲ್ಲಿ ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.
ಇನ್ನೊಬ್ಬ ಎಕ್ಸ್ ಬಳಕೆದಾರರು ಇಡೀ ಬೆಂಗಳೂರು ನೀರಿಗಾಗಿ ಹೋರಾಡುತ್ತಿದೆ, ಇಡೀ ದೇಶವು ಚುನಾವಣೆ ಮತ್ತು ಅಭಿವೃದ್ಧಿಯಲ್ಲಿ ನಿರತವಾಗಿದೆ. ಈ ಹುಡುಗರು ತಮ್ಮ ಹೀರೋಗಳಿಗಾಗಿ ಹೋರಾಡುತ್ತಿದ್ದಾರೆ ಇದು ನಿಜಕ್ಕೂ ದುರಂತ ಎಂದು ಬರೆದುಕೊಂಡಿದ್ದಾರೆ.
. @BlrCityPolice you should take action on this kind of people, just for online far wars this is not acceptable, kindly take proper action. pic.twitter.com/kfn4GlxmiO
— Bhairava J3👦 (@Jack_JackParr) March 10, 2024