For the best experience, open
https://m.hosakannada.com
on your mobile browser.
Advertisement

Akrama-Sakrama Scheme: ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್ - ಕೃಷಿ ಸಚಿವರಿಂದ ಹೊಸ ಆದೇಶ !!

.
09:24 AM Nov 08, 2023 IST | ಕಾವ್ಯ ವಾಣಿ
UpdateAt: 05:00 PM Apr 03, 2024 IST
akrama sakrama scheme  ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್   ಕೃಷಿ ಸಚಿವರಿಂದ ಹೊಸ ಆದೇಶ
Advertisement

Akrama-Sakrama Scheme: ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಸಾಗುವಳಿ ಚೀಟಿ ನೀಡುವ ಬಗ್ಗೆ ಮಹತ್ವ ಮಾಹಿತಿ ನೀಡಿದ್ದಾರೆ.

Advertisement

ಈಗಾಗಲೇ ಬಗರ್ ಹುಕುಂ ಅರ್ಜಿಗಳ ತ್ವರಿತ ವಿಲೇವಾರಿಗೆ ಆಪ್ ಸಿದ್ದಪಡಿಸುತ್ತಿದ್ದು, ಆಪ್ ಮೂಲಕವೇ ಅರ್ಜಿ ವಿಲೇವಾರಿ ಮಾಡಿ ನಂತರ ಅರ್ಹ ಫಲಾನುಭವಿಗಳಿಗೆ ಇ- ಸಾಗುವಳಿ ಚೀಟಿ ಒದಗಿಸಬಹುದಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಜೊತೆಗೆ ಅರ್ಜಿ ನಮೂನೆ 50, 53, 57 ರಲ್ಲಿ ಅಕ್ರಮ- ಸಕ್ರಮ ಯೋಜನೆ (Akrama-Sakrama Scheme) ಅಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಅದರಲ್ಲೂ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಸಾಗುವಳಿ ಚೀಟಿ ನೀಡುವುದು ಅಸಾಧ್ಯ ಎಂದು ತಿಳಿಸಿದ್ದಾರೆ.

Advertisement

Physical Relationship: ಲೈಂಗಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಹೇಗೆ : ಲೈಂಗಿಕ ಆರೋಗ್ಯ ಸುಧಾರಣೆಗೆ…

ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಅಧಿಕಾರಿಗಳು ಬಗರ್ ಹುಕುಂ ತಂತ್ರಾಂಶದ ಮೂಲಕ ಕೃಷಿ ಚಟುವಟಿಕೆ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಬೇರೆ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದ್ದಾರೆ.

ಮುಖ್ಯವಾಗಿ ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ ರೈತರಿಗೆ ಮುಂದಿನ ಆರು ತಿಂಗಳ ಒಳಗೆ ಸಾಗುವಳಿ ಚೀಟಿ ಕೊಡಬೇಕು. ಕೃಷಿ ಜಮೀನುಗಳಿಗೆ ತೆರಳಲು ರಸ್ತೆ ವ್ಯವಸ್ಥೆ ಮಾಡಬೇಕು ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: Whatsapp new rule : ವಾಟ್ಸಪ್ ಬಳಕೆದಾರರಿಗೆ ಇನ್ಮುಂದೆ ಬಂತು ಹೊಸ ರೂಲ್ಸ್- ಸುಪ್ರೀಂ ನಿಂದ ಖಡಕ್ ಎಚ್ಚರಿಕೆ !!

Advertisement
Advertisement
Advertisement