UAE Arrested 45 Beggars: ರಂಜಾನ್ ಸಮಯದಲ್ಲಿ ಯುಎಇಯಲ್ಲಿ 45 ಭಿಕ್ಷುಕರ ಬಂಧನ
UAE Arrested 45 Beggars: ಯುಎಇಯಲ್ಲಿ ಭಿಕ್ಷುಕರ ಸಮಸ್ಯೆಯನ್ನು ಕಡಿಮೆ ಮಾಡಲು, ಅಜ್ಮಾನ್ ಪೊಲೀಸರು ರಂಜಾನ್ ಮೊದಲ ವಾರದಲ್ಲಿ 45 ಭಿಕ್ಷುಕರನ್ನು ಬಂಧಿಸಿದ್ದಾರೆ. ಸ್ಥಳೀಯ ನಾಗರಿಕರ ಸಹಾಯದಿಂದ ಮಾತ್ರವಲ್ಲದೇ, ಯುಎಇಯಲ್ಲಿ ಭಿಕ್ಷುಕರ ಸಂಖ್ಯೆಯನ್ನು ಕಡಿಮೆ ಗೊಳಿಸಲು ಪೊಲೀಸರು ವಿವಿಧ ಸಂಸ್ಥೆಗಳಿಂದ ಬೆಂಬಲವನ್ನು ಪಡೆಯುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಯುಎಇ ಸರ್ಕಾರ ತನಿಖಾ ತಂಡವನ್ನು ರಚಿಸಿದೆ. ಹಾಗಾಗಿ ಮಸೀದಿ, ಬ್ಯಾಂಕ್, ಮಾರುಕಟ್ಟೆ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಕಣ್ಗಾವಲು ಬಿಗಿಗೊಳಿಸಿದ್ದಾರೆ.
ಬಡವರಿಗೆ ಸೌಲಭ್ಯಗಳನ್ನು ಒದಗಿಸುವ ಹಲವು ಸಂಸ್ಥೆಗಳು ಅಜ್ಮಾನ್‌ನಲ್ಲಿವೆ. ಬಡವರು, ಅನಾರೋಗ್ಯ ಅಥವಾ ನಿರ್ಗತಿಕರಿಗೆ ಮಾತ್ರ ಲಭ್ಯವಿದೆ. ಇದು ನಿರ್ಗತಿಕರನ್ನು ಪೊಲೀಸ್ ಶಿಕ್ಷೆ ಮತ್ತು ದಂಡದಿಂದ ರಕ್ಷಿಸುತ್ತವೆ ಮತ್ತು ಭಿಕ್ಷೆ ಬೇಡದಂತೆ ಪ್ರೋತ್ಸಾಹಿಸುತ್ತವೆ. ಅಜ್ಮಾನ್‌ನಲ್ಲಿ ಇಂತಹ ಅನೇಕ ಸಂಸ್ಥೆಗಳು ಮತ್ತು ಸಂಘಗಳು ಇದ್ದು, ಇವುಗಳು ಭಿಕ್ಷುಕರ ವರದಿಗಳನ್ನು ಸ್ವೀಕರಿಸಿ ಅವರಿಗೆ ಆಶ್ರಯ ನೀಡುತ್ತವೆ.
ಪ್ರಪಂಚದಾದ್ಯಂತದ ಮುಸ್ಲಿಮರು ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತಾರೆ. ರಂಜಾನ್ ಸಮಯದಲ್ಲಿ, ಮಸೀದಿಗಳು, ಮಾರುಕಟ್ಟೆಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ಭಿಕ್ಷುಕರ ಸಂಖ್ಯೆಯು ಹೆಚ್ಚಾಗುತ್ತದೆ. ಆದರೆ ಅರಬ್ ರಾಷ್ಟ್ರ ಯುಎಇಯಲ್ಲಿ ಭಿಕ್ಷೆ ಬೇಡುವುದು ಅಪರಾಧ. ಇದೇ ಕಾರಣಕ್ಕೆ ಅಲ್ಲಿನ ಪೊಲೀಸರು ಪ್ರತಿ ವರ್ಷ ಭಿಕ್ಷುಕರ ವಿರುದ್ಧ ಶೋಧ ಕಾರ್ಯ ನಡೆಸುತ್ತಾರೆ.
ಇದನ್ನೂ ಓದಿ: Sumalatha Ambrish: ಬಿಜೆಪಿಗೆ ಆಘಾತ- ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಸ್ಪರ್ಧೆ ಫಿಕ್ಸ್?!
ಯುಎಇಯಲ್ಲಿ ಭಿಕ್ಷುಕರಿಗಾಗಿ ಕಠಿಣ ಕಾನೂನು ಮಾಡಲಾಗಿದೆ. ಕಾನೂನಿನ ಪ್ರಕಾರ ಭಿಕ್ಷಾಟನೆಯಲ್ಲಿ ಸಿಕ್ಕಿಬಿದ್ದರೆ 5 ಸಾವಿರ ದಿರ್ಹಮ್ ದಂಡ ಹಾಗೂ 3 ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಇದಲ್ಲದೇ ಭಿಕ್ಷುಕರ ಗುಂಪು ನಡೆಸುತ್ತಿರುವ ತಂಡದ ವಿರುದ್ಧ 6 ತಿಂಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ಕೂಡಾ ಇದೆ.