ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

2nd PUC Migration Certificate: ದ್ವಿತೀಯ ಪಿಯುಸಿ ಪಾಸಾದವರು ತಮ್ಮ ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಈ ರೀತಿ ಆನ್‌ಲೈನ್‌ ಅರ್ಜಿ ಹಾಕಿ!

2nd PUC Migration Certificate: ಯಾವುದೇ ಶಿಕ್ಷಣಕ್ಕೆ ಪ್ರವೇಶ ಪಡೆಯಲು ತಾವು ಓದಿದ ಕಾಲೇಜಿನಿಂದ ಕಡ್ಡಾಯವಾಗಿ ವರ್ಗಾವಣೆ ಪ್ರಮಾಣ ಪತ್ರ (ವಲಸೆ ಪ್ರಮಾಣ ಪತ್ರ) ಪಡೆಯಬೇಕಿರುತ್ತದೆ
12:45 PM May 20, 2024 IST | ಕಾವ್ಯ ವಾಣಿ
UpdateAt: 12:46 PM May 20, 2024 IST
Advertisement

2nd PUC Migration Certificate: ಯಾವುದೇ ಶಿಕ್ಷಣಕ್ಕೆ ಪ್ರವೇಶ ಪಡೆಯಲು ತಾವು ಓದಿದ ಕಾಲೇಜಿನಿಂದ ಕಡ್ಡಾಯವಾಗಿ ವರ್ಗಾವಣೆ ಪ್ರಮಾಣ ಪತ್ರ (ವಲಸೆ ಪ್ರಮಾಣ ಪತ್ರ) ಪಡೆಯಬೇಕಿರುತ್ತದೆ. ಸದ್ಯ ವಿದ್ಯಾರ್ಥಿಗಳು ಈಗ ಕಾಲೇಜಿಗೆ ಟಿಸಿ (ವರ್ಗಾವಣೆ ಪ್ರಮಾಣ ಪತ್ರ) ಗಾಗಿ ಅಲೆಯುವ ಅಗತ್ಯವಿಲ್ಲ.

Advertisement

ಇದನ್ನೂ ಓದಿ: Liquid Nitrogen Paan: ಮದುವೆ ಸಮಾರಂಭದಲ್ಲಿ ಲಿಕ್ವಿಡ್‌ ನೈಟ್ರೋಜನ್‌ ಪಾನ್‌ ತಿಂದು 12 ವರ್ಷದ ಹುಡುಗಿಯ ಹೊಟ್ಟೆಯಲ್ಲಿ ರಂಧ್ರ

ಈಗಾಗಲೇ ದ್ವಿತೀಯ ಪಿಯುಸಿ ಪಾಸ್‌ ಮಾಡಿರುವ ವಿದ್ಯಾರ್ಥಿಗಳು ಮುಂದಿನ ಶಿಕ್ಷಣದ ಪ್ರವೇಶ ವೇಳೆ ತಾವು ಓದಿದ ಕಾಲೇಜಿನಿಂದ ಪಡೆದ ವರ್ಗಾವಣೆ ಪ್ರಮಾಣ ಪತ್ರ (TC) ಸಲ್ಲಿಸುವುದು ಕಡ್ಡಾಯ. ಇದನ್ನು ಪಡೆಯಲು ಈಗ ಓದಿದ ಕಾಲೇಜಿಗೆ ಹೋಗುವ ಅಗತ್ಯವಿಲ್ಲ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಇದನ್ನೂ ಓದಿ: IPL-2024: ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು : ಅಸಲಿಗೆ ಡೆಸ್ಟಿನಿ ಅಂದರೆ ಇದೇನಾ?

ಹೌದು, ವರ್ಗಾವಣೆ ಪ್ರಮಾಣ ಪತ್ರ ಈ ಸೌಲಭ್ಯವನ್ನು ಆನ್‌ಲೈನ್‌ ಮೂಲಕವೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯೇ ನೀಡುತ್ತಿದೆ. ಅದಕ್ಕಾಗಿ ನಿಮ್ಮ ಮನೆಯಿಂದ ಮೊಬೈಲ್‌ನಲ್ಲೇ, ಲ್ಯಾಪ್‌ಟಾಪ್‌ನಲ್ಲೇ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಅರ್ಜಿ ಹಾಕಿ, ನಿಮಿಷಗಳಲ್ಲೇ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ನೀವು ಡೌನ್‌ಲೋಡ್‌ ಮಾಡಿದ ಈ ವರ್ಗಾವಣೆ ಪ್ರಮಾಣ ಪತ್ರವನ್ನು ನಂತರ ಡಿಟಿಪಿ ಸೆಂಟರ್‌ಗಳಲ್ಲಿ ಪ್ರಿಂಟ್ ತೆಗೆಸಿಕೊಳ್ಳಬಹುದಾಗಿದೆ.

ಮುಖ್ಯವಾಗಿ 2008 ರ ನಂತರದಲ್ಲಿ ಪಾಸಾದವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ 2008 ಕ್ಕೂ ಹಿಂದಿನ ವರ್ಷಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಶಾಲೆಗೆ ಭೇಟಿ ನೀಡಿ ಭೌತಿಕವಾಗಿ ಅರ್ಜಿ ಹಾಕುವ ಮೂಲಕ ವಲಸೆ (ವರ್ಗಾವಣೆ) ಪ್ರಮಾಣ ಪತ್ರವನ್ನು ಪಡೆಯಬಹುದು.

ವರ್ಗಾವಣೆ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕುವ ವಿಧಾನ ಇಲ್ಲಿದೆ:

2008 ರ ನಂತರದಲ್ಲಿ ದ್ವಿತೀಯ ಪಿಯುಸಿ ಪಾಸಾದವರು ವರ್ಗಾವಣೆ ಪ್ರಮಾಣ ಪತ್ರಕ್ಕಾಗಿ ಆನ್‌ಲೈನ್‌ ಅರ್ಜಿ ಹಾಕುವ ವಿಧಾನ:

- ಕೆಎಸ್‌ಇಎಬಿ ಮಂಡಲಿಯ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಗೆ ಭೇಟಿ ನೀಡಿ.

- 'ಆನ್‌ಲೈನ್‌ ಸೇವೆಗಳು' ಎಂದಿರುವಲ್ಲಿ 'ದ್ವಿತೀಯ ಪಿಯುಸಿ' ಕ್ಲಿಕ್ ಮಾಡಿ. ಹಲವು ಆಯ್ಕೆಗಳು ಕಾಣುತ್ತವೆ. ಅಲ್ಲಿ ದ್ವಿತೀಯ ಪಿಯುಸಿ ಪಾಸಾದವರು ' ಪಿಯುಸಿ ವಲಸೆ ಪ್ರಮಾಣ ಪತ್ರ ಪಡೆಯುವುದು' ಎಂದಿರುವಲ್ಲಿ ಕ್ಲಿಕ್ ಮಾಡಿ.

- ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. ಈ ವೆಬ್‌ಪುಟದಲ್ಲಿ 'Apply for Migration Certificate' ಎಂದಿರುವಲ್ಲಿ ಕ್ಲಿಕ್ ಮಾಡಿ.

- ನಂತರ ದ್ವಿತೀಯ ಪಿಯುಸಿ ನೋಂದಣಿ ಸಂಖ್ಯೆ, ವರ್ಷ, ತಿಂಗಳು ಮಾಹಿತಿ ನೀಡಿ. 'View' ಬಟನ್ ಮೇಲೆ ಕ್ಲಿಕ್ ಮಾಡಿ.

- ನಿಮ್ಮ ಎಲ್ಲ ಮಾಹಿತಿಗಳು ತೋರಿಸುತ್ತದೆ. ಸರಿಯಾಗಿದ್ದರೆ ಮುಂದುವರೆದು ಕೇಳಲಾದ ಮಾಹಿತಿ ನಮೂದಿಸಿ. ನಂತರ 'Generate OTP' ಕ್ಲಿಕ್ ಮಾಡಿ.

- ನೀವು ನೀಡಿರುವ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. ಅದನ್ನು ನೀಡಿ ವಿವರಗಳನ್ನು ಸೇವ್‌ ಮಾಡಿ .

- ನಂತರ 'Make Payment' ಮೆನುವಿನ ಮೇಲೆ ಕ್ಲಿಕ್ ಮಾಡಿ. ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಿ.

- ಶುಲ್ಕ ಪಾವತಿಸಿದ ನಂತರದ ಕ್ಷಣದಲ್ಲೇ ವಲಸೆ ಪ್ರಮಾಣ ಪತ್ರವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಒಂದು ವೇಳೆ ನಿಗದಿತ ಶುಲ್ಕ ಪಾವತಿಯ ನಂತರವೂ Payment Not Done ಎಂದು ಬರುತ್ತಿದ್ದಲ್ಲಿ, ತಮ್ಮ ಶುಲ್ಕ ಸಂದಾಯ ವಿವರಗಳನ್ನು - PGI reference number, ಅರ್ಜಿ ಸಂಖ್ಯೆ, ಅಭ್ಯರ್ಥಿಯ ಹೆಸರು ವಿವರಗಳನ್ನು - computer.dpue@karnataka.gov.in ಗೆ ಇ-ಮೇಲ್‌ ಮಾಡಲು ಸೂಚಿಸಲಾಗಿದೆ.

Related News

Advertisement
Advertisement