For the best experience, open
https://m.hosakannada.com
on your mobile browser.
Advertisement

Yuva Nidhi Scheme: ಯುವಕರೇ ಗಮನಿಸಿ! ಪ್ರತಿ ತಿಂಗಳು ಈ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ, ಇಲ್ಲದಿದ್ದರೆ ಹಣ ಜಮೆ ಇಲ್ಲ - ಸರಕಾರದಿಂದ ಆದೇಶ

08:01 AM Jan 24, 2024 IST | ಹೊಸ ಕನ್ನಡ
UpdateAt: 08:01 AM Jan 24, 2024 IST
yuva nidhi scheme  ಯುವಕರೇ ಗಮನಿಸಿ  ಪ್ರತಿ ತಿಂಗಳು ಈ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ  ಇಲ್ಲದಿದ್ದರೆ ಹಣ ಜಮೆ ಇಲ್ಲ   ಸರಕಾರದಿಂದ ಆದೇಶ
Advertisement

Yuva Nidhi Scheme: ರಾಜ್ಯ ಕಾಂಗ್ರೆಸ್‌ ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವ ನಿಧಿ (Yuva Nidhi Scheme) ಚಾಲನೆ ದೊರಕಿದ್ದು, ಮಾರ್ಚ್‌ ಅಂತ್ಯದೊಳಗೆ ನಾಲ್ಕು ಲಕ್ಷ ನೋಂದಣಿ ಮಾಡಿಸುವ ಗುರಿಯನ್ನು ರಾಜ್ಯ ಸರಕಾರ ಹೊಂದಿದೆ. ಹಾಗೆನೇ ಪ್ರತಿ ತಿಂಗಳು ಹಣ ಪಡೆಯಬೇಕಾದರೆ ಪ್ರತಿ ತಿಂಗಳಲ್ಲೂ ತಮಗೆ ಕೆಲಸ ಸಿಕ್ಕಿಲ್ಲ, ಉನ್ನತ ಶಿಕ್ಷಣಕ್ಕೆ ದಾಖಲಾಗಿಲ್ಲ ಎಂಬ ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್ಲೋಡ್‌ ಮಾಡಬೇಕಿದೆ.

Advertisement

ಈ ಮಾಹಿತಿಯನ್ನು ಅಪ್ಲೋಡ್‌ ಮಾಡದೇ ಇದ್ದರೆ ಅಂಥವರಿಗೆ ಆ ತಿಂಗಳ ಹಣ ಜಮೆ ಆಗುವುದಿಲ್ಲ. ಪ್ರತಿ ತಿಂಗಳು ಅಪ್ಡೇಡ್‌ ಮಾಡುವುದು ಕಡ್ಡಾಯವಾಗಿದೆ, ಹಾಗೆನೇ ಸುಳ್ಳು ಮಾಹಿತಿ ನೀಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು, ಪಡೆದ ಹಣ ವಸೂಲಿ ಮಾಡಲಾಗುವುದು ಎಂಬುವುದಾಗಿ ಸರಕಾರ ಹೇಳಿದೆ.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವೀಧರರ ಪ್ರಮಾಣ ಪತ್ರವು ನ್ಯಾಷನಲ್‌ ಅಕಾಡೆಮಿಕ್‌ ಡಿಪಾಸಿಟರಿಯಲ್ಲಿ ಪ್ರಮಾಣ ಪತ್ರಗಳಿರುತ್ತದೆ. ಸರಕಾರವು ಅಲ್ಲಿಂದ ಮಾಹಿತಿ ಪಡೆಯಬಹುದು. ಒಂದು ವೇಳೆ ದಾಖಲೆ ಹೊಂದಾಣಿಕೆಯಾಗಿ ಫಲಿತಾಂಶ ಬಂದು ಆರು ತಿಂಗಳು ಆದ ಅಭ್ಯರ್ಥಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ.

Advertisement

Advertisement
Advertisement
Advertisement