For the best experience, open
https://m.hosakannada.com
on your mobile browser.
Advertisement

Rent Girl: ಬಾಡಿಗೆಗೆ ಸಿಗ್ತೇನೆ, ಡೇಟ್ ಗೂ ಸೈ, ವೀಕೆಂಡ್ ಗೂ ಜೈ' ಎಂದು ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿದ ಭಾರತದ ಯುವತಿ !!

Rent Girl: ನಾನು ಬಾಡಿಗೆಗೆ ಸಿಗುತ್ತೇನೆ ಎಂದು ಎಲ್ಲದಕ್ಕೂ ಡೇಟ್ ಫಿಕ್ಸ್ ಮಾಡಿ ಪೋಸ್ಟ್ ಒಂದನ್ನು ಮಾಡಿದ್ದು, ಇದು ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ.
08:16 AM May 31, 2024 IST | ಸುದರ್ಶನ್
UpdateAt: 08:52 AM May 31, 2024 IST
rent girl  ಬಾಡಿಗೆಗೆ ಸಿಗ್ತೇನೆ  ಡೇಟ್ ಗೂ ಸೈ  ವೀಕೆಂಡ್ ಗೂ ಜೈ  ಎಂದು ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿದ ಭಾರತದ ಯುವತಿ
Advertisement

Rent Girl: ಪಾಶ್ಚಾತ್ಯ ಸಂಸ್ಕೃತಿ ಭಾರತವನ್ನು ದಿನೇ ದಿನೇ ಆಕ್ರಮಿಸುತ್ತಿದೆ. ಇದು ಎಷ್ಟರ ಮಟ್ಟಿಗೆ ಮಿತಿಮೀರಿದೆ ಎಂದರೆ ವಿದೇಶದಲ್ಲಿ ತುಂಬಾ ಟ್ರೆಂಡ್ ಇರೋ ಬಾಡಿಗೆ ಹುಡುಗಿ ಸಂಸ್ಕೃತಿ ನಮ್ಮ ಭಾರತಕ್ಕೂ ವಕ್ಕರಿಸಿದೆ. ಇನ್ಸ್ಟಾಗ್ರಾಮ್(Instagram)ನಲ್ಲಿ ಭಾರತೀಯ ನಾರಿಯೊಬ್ಬಳು ನಾನು ಬಾಡಿಗೆಗೆ ಸಿಗುತ್ತೇನೆ ಎಂದು ಎಲ್ಲದಕ್ಕೂ ಡೇಟ್ ಫಿಕ್ಸ್ ಮಾಡಿ ಪೋಸ್ಟ್ ಒಂದನ್ನು ಮಾಡಿದ್ದು, ಇದು ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ.

Advertisement

https://www.instagram.com/reel/C7b0NwEJQZu/?igsh=NnR2ZmtocnZnaGk0

ಜಪಾನ್, ಚೀನಾ ದೇಶಗಳಲ್ಲಿ ಬಾಡಿಗೆ ಸಂಬಂಧಗಳು ಜನಪ್ರಿಯವಾಗಿವೆ. ಹಣ ನೀಡಿದರೆ ಸಾಕು ಬಾಡಿಗೆಗೆ ಜನರು ಸಿಗುತ್ತಾರೆ. ಡಿನ್ನರ್ ಮಾಡಲು, ಓಡಾಡಲು, ಸಿನಿಮಾ ನೋಡಲು ಸಿಗುತ್ತಾರೆ. ಆದರೀಗ ಅದರದ್ದೇ ಭಾಗವಾಗಿರೋ ಡೇಟಿಂಗ್ ಸಂಸ್ಕೃತಿ ಭಾರತಕ್ಕೆ ಲಗ್ಗೆ ಇಟ್ಟಿದೆ. ಭಾರತೀಯ ಯುವತಿಯೊಬ್ಬಳು ತಾನು ಬಾಡಿಗೆ ಸಿಗುತ್ತೇನೆ(Rent Girl) ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಜೊತೆಗೆ ಬಾಡಿಗೆ ಪಡೆಯುವುದಕ್ಕೂ ಮುನ್ನ ಆಕೆಗೆ ಹಣವನ್ನು ನೀಡಬೇಕಾಗಿದೆ. ಅದಕ್ಕೆಂದೇ ಲಿಸ್ಟ್ ತಯಾರಿಸಿಕೊಂಡಿದ್ದಾಳೆ.

Advertisement

ಇದನ್ನೂ ಓದಿ: Marriage: ಹಿಂದೂ-ಮುಸ್ಲಿಂ ಮದುವೆ ಮಾನ್ಯವಲ್ಲ- ಹೈಕೋರ್ಟ್ ಮಹತ್ವದ ತೀರ್ಪು

ಹೌದು, ನನ್ನನ್ನು ಒಂದು ದಿನದ ಮಟ್ಟಿಗೆ ನಿಮ್ಮ ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಪಡೆಯಿರಿ” ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾಳೆ. ಆಕೆಯ ವಿಡಿಯೊ ಈಗ ಭಾರಿ ವೈರಲ್‌ (Viral Video) ಆಗಿದೆ. ದಿವ್ಯಾ ಗಿರಿ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ 'ನಾನು ಒಂದು ದಿನದ ಮಟ್ಟಿಗೆ ನಿಮ್ಮ ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಇರಬಲ್ಲೆ. ಯಾರು ಬೇಕಾದರೂ ನನ್ನನ್ನು ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಪಡೆಯಬಹುದು. ಆ ಮೂಲಕ ಸ್ಮರಣೀಯ ದಿನವನ್ನು, ಅತ್ಯುತ್ತಮ ನೆನಪುಗಳನ್ನು ಸೃಷ್ಟಿಸಿಕೊಳ್ಳಬಹುದು” ಎಂಬುದಾಗಿ ಪೋಸ್ಟ್‌ ಮಾಡಲಾಗಿದೆ.

ಇದನ್ನೂ ಓದಿ: Prajwal Revanna: ಪೆನ್ ಡ್ರೈವ್ ಪ್ರಜ್ವಲ್ ಅರೆಸ್ಟ್, ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಆದ ಸಂಸದ !

ಯುವತಿಯ ‘ದರ’ಪಟ್ಟಿ ಹೀಗಿದೆ…

ಒಂದು ದಿನದ ಮಟ್ಟಿಗೆ ಡೇಟ್‌ಗೆ ಕರೆದುಕೊಂಡು ಹೋಗುವುದು ಸೇರಿ ಹಲವು ಚಟುವಟಿಕೆಗಳಿಗೆ ಯುವತಿಯು ರೇಟ್‌ ಫಿಕ್ಸ್‌ ಮಾಡಿದ್ದಾಳೆ.

* ಸುಮ್ಮನೆ ಹೋಗಿ ಕಾಫಿ ಕುಡಿದುಕೊಂಡು ಬರಲು 1,500 ರೂ.

* ಸಿನಿಮಾ ನೋಡಿ, ಊಟ ಮಾಡಿಕೊಂಡು ಬರುವುದಾದರೆ 2 ಸಾವಿರ ರೂ.

* ಕುಟುಂಬಸ್ಥರನ್ನು ಭೇಟಿ ಮಾಡಿಸಲು 3 ಸಾವಿರ ರೂ.,

* ಬೈಕ್‌ನಲ್ಲಿ ಸುತ್ತಾಡುವುದಾದರೆ 4 ಸಾವಿರ ರೂ.,

* ಡೇಟಿಂಗ್‌ ಬಗ್ಗೆ ಸಾರ್ವಜನಿಕವಾಗಿ ಪೋಸ್ಟ್‌ ಮಾಡುವುದಾದರೆ 6 ಸಾವಿರ ರೂ.,

* ಎರಡು ದಿನ ವೀಕೆಂಡ್‌ನಲ್ಲಿ ಸುತ್ತಾಡಲು 10 ಸಾವಿರ ರೂ. ಸೇರಿ ಹಲವು ಚಟುವಟಿಕೆಗಳಿಗೆ ವಿವಿಧ ಮೊತ್ತ ನಿಗದಿಪಡಿಸಿದ್ದಾಳೆ.

ಯುವತಿಯ ಪೋಸ್ಟ್‌ ನೋಡಿದ ಒಂದಷ್ಟು ಜನ ಕಂಗಾಲಾಗಿದ್ದರೆ, ಇನ್ನೊಂದಿಷ್ಟು ಜನ ತಮಾಷೆಯಾಗಿ ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಯುವತಿಯ ಈ ಪೋಸ್ಟ್ ಅಂತೂ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ.

Advertisement
Advertisement
Advertisement