For the best experience, open
https://m.hosakannada.com
on your mobile browser.
Advertisement

Tallest statues: ವಿಶ್ವದ ಅತಿ ಎತ್ತರದ ಪ್ರತಿಮೆಗಳು ಎಲ್ಲಿವೆ? ಇಲ್ಲಿದೆ ಮಾಹಿತಿ

03:05 PM Feb 05, 2023 IST | ಅಶ್ವಿನಿ ಹೆಬ್ಬಾರ್
UpdateAt: 03:08 PM Feb 05, 2023 IST
tallest statues  ವಿಶ್ವದ ಅತಿ ಎತ್ತರದ ಪ್ರತಿಮೆಗಳು ಎಲ್ಲಿವೆ  ಇಲ್ಲಿದೆ ಮಾಹಿತಿ
Advertisement

ಭಾರತ ತನ್ನ ಇತಿಹಾಸ, ಪರಂಪರೆಯ ಮೂಲಕ ಜಗತ್ತಿನಲ್ಲಿ ತನ್ನದೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರತಿಮೆಗಳು ಒಂದು ಸಂಸ್ಕೃತಿಯ ಇತಿಹಾಸ ನಡೆದುಕೊಂಡು ಬಂದ ಗತಕಾಲದ ನೆನಪುಗಳನ್ನೂ ಪ್ರತಿಬಿಂಬಿಸಲು ನೆರವಾಗುತ್ತವೆ.

Advertisement

ಪ್ರಪಂಚದಾದ್ಯಂತ ಸಾಧನೆ ಮಾಡಿದ ಮಹಾತ್ಮರು, ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಸ್ಥಾನ ಪಡೆದ ಕೆಲವೊಂದು ಪ್ರಮುಖ ನಾಯಕರು, ದೇವರ ಪ್ರತಿಮೆಗಳು ಹೀಗೆ ವಿಭಿನ್ನ ಪ್ರತಿಮೆಗಳನ್ನು ನೋಡಬಹುದು. ನಮ್ಮ ಭಾರತದಲ್ಲಿಯೂ ಕೂಡ ನಾವು ಪ್ರತಿಮೆಗಳನ್ನು ನೋಡಬಹುದು. ಆದರೆ, ಭಾರತದಲ್ಲಿ ಇರುವ ಪ್ರಮುಖ ಪ್ರತಿಮೆಗಳ ಬಗ್ಗೆ ತಿಳಿದಿರುವುದು ಅವಶ್ಯಕ. ಜಗತ್ತಿನ ಆಗುಹೋಗುಗಳ ಕುರಿತು ನಮಗೆ ಕೊಂಚಮಟ್ಟಿಗಾದರು ಅರಿವಿರಬೇಕಾಗುತ್ತದೆ.

ಪ್ರಪಂಚದಾದ್ಯಂತ ಇರುವ ಪ್ರಮುಖ ಪ್ರತಿಮೆಗಳು ಮಹಾನ್ ವ್ಯಕ್ತಿಗಳ ಅಥವಾ ಇತಿಹಾಸದ ಕೆಲ ಪ್ರಮುಖ ಘಟನೆಗಳಿಗೆ ಸಮ್ಮಿಲಿತಗೊಂಡಿರುತ್ತವೆ. ವಿಶ್ವದ ಐದು ಅತಿ ಎತ್ತರದ ಪ್ರತಿಮೆಗಳ ಪೈಕಿ ಭಾರತದ ಎರಡು ಪ್ರತಿಮೆಗಳು ಸ್ಥಾನಗಳನ್ನು ಪಡೆದಿವೆ. ಹಾಗಾದರೆ, ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧ ಪ್ರಸ್ತುತ ಅಗ್ರ ಐದು ಸ್ಥಾನದಲ್ಲಿರುವ ಅತಿ ಎತ್ತರದ ಪ್ರತಿಮೆಗಳು ಯಾವುವು??

Advertisement

ಏಕತೆಯ ಪ್ರತಿಮೆ (Statue of Unity):
ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಯನ್ನು ಭಾರತದ ಗುಜರಾತ್ನ ಕೆವಾಡಿಯಾ ಬಳಿ ಇರುವ 182 ಮೀಟರ್​ ಎತ್ತರವಿದ್ದು, ಈ ಏಕತೆಯ ಪ್ರತಿಮೆಯನ್ನು 'ಭಾರತದ ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಮರ್ಪಿಸಲಾಗಿದ್ದು, ಈ ಪ್ರತಿಮೆಯು ಗುಜರಾತಿನ ಕೇವಾಡಿಯಾ ಕಾಲೋನಿಯ ನರ್ಮದಾ ನದಿ ತಟದಲ್ಲಿ ನಿರ್ಮಾಣ ಮಾಡಲಾಗಿದೆ.

ಬರ್ತ್ ಆಫ್ ದಿ ನ್ಯೂ ವರ್ಲ್ಡ್:
ಕ್ರಿಸ್ಟೋಫರ್ ಕೊಲಂಬಸ್​ ಅನ್ನು ಚಿತ್ರಿಸುವ 360-ಅಡಿ (110 ಮೀ) ಕಂಚಿನ ಶಿಲ್ಪ ಇದಾಗಿದ್ದು, ಇದು ಪೋರ್ಟೊ ರಿಕೊದ ಅರೆಸಿಬೊದ ಅಟ್ಲಾಂಟಿಕ್ ಕರಾವಳಿಯಲ್ಲಿದೆ.

ಲೆಕ್ಯುನ್ ಸೆಕ್ಯಾ, ಮ್ಯಾನ್ಮಾರ್:
ನಿಂತಿರುವ ಬುದ್ಧನ ಪ್ರತಿಮೆಯು 115 ಮೀ ಎತ್ತರದ ವಿಶ್ವದ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದೆ. ಇದು ಮ್ಯಾನ್ಮಾರ್ ನ ಮೊನಿವಾ ಬಳಿಯ ಖಟಕನ್ ಟೌಂಗ್ ಗ್ರಾಮದಲ್ಲಿದೆ.

ಸ್ಪ್ರಿಂಗ್ ಟೆಂಪಲ್ ಬುದ್ಧ:
ಇದು ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆ ಎಂಬ ಬಿರುದು ಹೊಂದಿರುವ ಈ ಪ್ರತಿಮೆ ಚೀನಾದ ಹೆನಾನ್‌ನ ಲುಶನ್ ಕೌಂಟಿಯ ಝೌಕುನ್ ಟೌನ್‌ಶಿಪ್‌ನಲ್ಲಿ ನೆಲೆಗೊಂಡಿದ್ದು ವೈರೋಕಾನಾ ಬುದ್ಧನನ್ನು ಚಿತ್ರಿಸುವ ಬೃಹತ್ ಪ್ರತಿಮೆಯಾಗಿದೆ. ಇದರ ಎತ್ತರ 128 ಮೀಟರ್​ ಆಗಿದ್ದು,ಇದನ್ನು 1997 ರಿಂದ 2008 ರವರೆಗೆ ನಿರ್ಮಿಸಲಾಗಿದೆ.

ವಿಶ್ವಾಸ್ ಸ್ವರೂಪ್ ಪ್ರತಿಮೆ:
ವಿಶ್ವದ ಐದನೇ ಅತಿ ಎತ್ತರದ ಪ್ರತಿಮೆ ಮತ್ತು ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಎಂಬ ಹೆಗ್ಗಳಿಕೆ ಹೊಂದಿರುವ ನಂಬಿಕೆಯ ಪ್ರತಿಮೆ (Statue of Belief) ಭಾರತದ ರಾಜಸ್ಥಾನದ ನಾಥದ್ವಾರದಲ್ಲಿ ನೆಲೆಗೊಂಡಿದೆ. ಇದು ಹಿಂದೂ ದೇವರಾದ ಶಿವನ ಪ್ರತಿಮೆಯಾಗಿದ್ದು, ಈ ಪ್ರತಿಮೆಯನ್ನು ನಂಬಿಕೆಯ ಪ್ರತಿಮೆ ಅಥವಾ ವಿಶ್ವಾಸ ಸ್ವರೂಪಂ ಎಂದು ಕರೆಯಲಾಗುತ್ತದೆ.

Advertisement
Advertisement
Advertisement