Miracle in Storm: ಸುಂಟರಗಾಳಿಯ ಹೊಡೆತಕ್ಕೆ ತೊಟ್ಟಿಲ ಸಮೇತ ಹಾರಿಹೋದ ಪುಟ್ಟ ಕಂದ; ಪತ್ತೆಯಾಗಿದ್ದೆಲ್ಲಿ ಗೊತ್ತೇ? ಇದೊಂದು ಪವಾಡವೇ ಸರಿ!
Miracle in storm: ಪವಾಡಸದೃಶವೆಂಬಂತೆ ಸುಂಟರಗಾಳಿಗೆ ಸಿಲುಕಿದ ನಾಲ್ಕುತಿಂಗಳ ಹಸುಗೂಸೊಂದು ಯಾವುದೇ ಹಾನಿಗೊಳಗಾದರೆ ಸುರಕ್ಷಿತವಾಗಿ ಮರವೊಂದರಲ್ಲಿ ಪತ್ತೆಯಾಗಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಟೆನ್ನೆಸ್ಸೀಯಲ್ಲಿ ನಾಲ್ಕು ತಿಂಗಳ ಮಗುವೊಂದು ಸುಂಟರಗಾಳಿಗೆ ಹಾರಿಹೋಗಿತ್ತು. ಇದೀಗ ಮಗು ಪತ್ತೆಯಾಗಿರುವುದು ಪೋಷಕರು ನಿಟ್ಟಿಸಿರು ಬಿಟ್ಟಿದ್ದಾರೆ. ಟೆಂಟ್ ನ ತಾತ್ಕಾಲಿಕ ಮನೆಯೊಳಗಿನ ಮೂಲಕ ಬಂದಂತಹ ಸುಂಟರಗಾಳಿ ತೊಟ್ಟಿಲ ಸಮೇತ ಮಗುವನ್ನು ಹೊತ್ತುಕೊಂಡು ಹೋಗಿತ್ತು.
ಇದನ್ನು ಓದಿ: Gas KYC: ಗ್ಯಾಸ್ ಸಬ್ಸಿಡಿ ಕುರಿತು ಈ ರೀತಿ ಮೆಸೇಜ್ ಬಂದಿದ್ಯಾ?! ಹಾಗಿದ್ರೆ ತಕ್ಷಣ ಈ ಕೆಲಸ ಮಾಡಿ !!
ಇತ್ತ ಕಡೆ ತಂದೆ ಮಗು ರಕ್ಷಣೆಗೆ ಹರಸಾಹಸ ಪಟ್ಟರೂ, ಫಲಕೊಡಲಲ್ಲ. ಇತ್ತ ಕಡೆ ತಾಯಿ ಕೂಡಾ ಸುಂಟರಗಾಳಿಗೆ ಸಿಲುಕಿದ್ದಾರೆ. ಇನ್ನೊಬ್ಬ ಮಗನನ್ನು ರಕ್ಷಿಸುವ ಪ್ರಯತ್ನ ಮಾಡುವಾಗ ಗೋಡೆ ಕುಸಿದು ಬಿದ್ದಿದೆ. ಆಮೇಲೆ ಸುಂಟರಗಾಳಿ ಹಾದುಹೋದ ದಾರಿಯಲ್ಲೇ ಹುಡುಕುತ್ತಾ ಹೋದ ಪೋಷಕರು ಮಗು ಕಾಣದೆ ಆತಂಕಕ್ಕೀಡಾದರು. ನಂತರ ಅವರು ಸುಮಾರು 25 ಅಡಿ ದೂರದಲ್ಲಿರುವ ಮರದಲ್ಲಿ ತಮ್ಮ ಮಗುವನ್ನು ಕಂಡು ಖುಷಿಪಟ್ಟಿದ್ದಾರೆ.
ಈ ಸುಂಟರಗಾಳಿಯಿಂದ ಮೂವರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿರುವ ಕುರಿತು ವರದಿಯಾಗಿದೆ.