ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

KSRTC ಗೆ 'ಶಕ್ತಿ' ತುಂಬಿದ ರಾಜ್ಯದ ನಾರಿಯರು - ಇಲಾಖೆಗೆ 3,349 ಕೋಟಿ ರೂ. ಭರ್ಜರಿ ಲಾಭ !!

KSRTC: 'ಶಕ್ತಿ ಯೋಜನೆಗೆ' ಇದೀಗ ಒಂದು ವರ್ಷದ ಸಂಭ್ರಮ. ಈ ಸಂಭ್ರಮದೊಂದಿಗೆ KSRTC ಭರ್ಜರಿ ಲಾಭ ಗಳಿಸಿದ್ದು ಇಲಾಖೆಗೆ 3,349 ಕೋಟಿಯ ದಾಖಲೆಯ ಆದಾಯ ಹರಿದು ಬಂದಿದೆ.
11:25 PM Jun 11, 2024 IST | ಸುದರ್ಶನ್
UpdateAt: 11:25 PM Jun 11, 2024 IST
Advertisement

KSRTC: ರಾಜ್ಯದಲ್ಲಿ ಸರ್ಕಾರ ಜಾರಿಗೊಳಿಸಿದ ಮಹಿಳೆಯರ ಉಚಿತ ಪ್ರಯಾಣದ 'ಶಕ್ತಿ ಯೋಜನೆಗೆ' ಇದೀಗ ಒಂದು ವರ್ಷದ ಸಂಭ್ರಮ. ಈ ಸಂಭ್ರಮದೊಂದಿಗೆ KSRTC ಭರ್ಜರಿ ಲಾಭ ಗಳಿಸಿದ್ದು ಇಲಾಖೆಗೆ 3,349 ಕೋಟಿಯ ದಾಖಲೆಯ ಆದಾಯ ಹರಿದು ಬಂದಿದೆ.

Advertisement

ಕರ್ನಾಟಕ ವಿಧಾನಸಭೆ ಚುನಾವಣೆಗೆ(Assembly Election) ಮುನ್ನ ಕಾಂಗ್ರೆಸ್‌ ಪಕ್ಷ ನೀಡಿದ್ದ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ (Shakti scheme) ಒಂದಾಗಿದ್ಧು ಈ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡಲಾಗುತ್ತಿದೆ. ಆರಂಭದಲ್ಲಿ ಈ ಯೋಜನೆಗೆ ಭಾರೀ ಟೀಕೆಗಳು ಎದುರಾದರೂ ನಂತರದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಅಂತೆಯೇ ಇದೀಗ ಈ ಯೋಜನೆ ಜಾರಿಯಾಗಿ ಭರ್ತಿ ಒಂದು ವರ್ಷವಾಗಿದೆ. ಅಲ್ಲದೆ ಖುಷಿಯ ವಿಚಾರ ಅಂದ್ರೆ ರಾಜ್ಯದ ಮಹಿಳಾ ಮಣಿಗಳು ಉಚಿತ ಪ್ರಯಾಣ ಮಾಡುವುದರೊಂದಿಗೆ ಕೆಎಸ್‌ಆರ್‌ಟಿಸಿಗೆ ದಾಖಲೆ ಮೊತ್ತದ ಆದಾಯವನ್ನು ಗಳಿಸಿಕೊಟ್ಟಿದ್ದಾರೆ.

ಹೌದು, ಶಕ್ತಿ ಯೋಜನೆಯ ಅಡಿಯಲ್ಲಿ ಸಾರಿಗೆ ಸಂಸ್ಥೆಯು ಪ್ರಸಕ್ತ 2023-24 ಆರ್ಥಿಕ ವರ್ಷದಲ್ಲಿ 3,349 ಕೋಟಿ ರೂಪಾಯಿ ದಾಖಲೆಯ ಆದಾಯವನ್ನು ಗಳಿಸಿದೆ. ಈ ಕುರಿತು ಸ್ವತಃ ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಾರಿಗೆ ಸಚಿವರಾದ ರಮಾಲಿಂಗ ರೆಡ್ಡಿಯವರು ಮಾಹಿತಿ ನೀಡಿದ್ದಾರೆ. ಇದರ ಮೂಲಕ ಶಕ್ತಿ ಯೋಜನೆ ಇಲಾಖೆಯ ಬೊಕ್ಕಸವನ್ನು ತುಂಬಿದೆಯೇ ಹೊರತು ಖಾಲಿ ಮಾಡಿಲ್ಲ ಎಂದು ತಿಳಿಸಿಕೊಟ್ಟಿದೆ.

Advertisement

ಈ ಹಿಂದೆ ಇಲಾಖೆಯ ಆದಾಯ ಎಷ್ಟಿತ್ತು:
* 2017 ರಲ್ಲಿ 2,975 ಕೋಟಿ ರೂ.
* 2018 ರಲ್ಲಿ 3,131 ಕೋಟಿ ರೂ.
* 2019 ರಲ್ಲಿ 3,182 ಕೋಟಿ ರೂ
* 2021 ರಲ್ಲಿ ರೂ 2,037 ಕೋಟಿ
* 2022 ರಲ್ಲಿ ರೂ 3,349 ಕೋಟಿ
* 2023 ರ ಆದಾಯವು ರೂ 3,930 ಕೋಟಿಗೆ ಹೆಚ್ಚಳವಾಗಿದೆ .

ಆದಾಯ ಹೆಚ್ಚಾಗಲು ಕಾರಣ?
ಓರ್ವ ಮಹಿಳಾ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಲು ಮುಂದಾದಾದರೆ, ಮಕ್ಕಳು ಹಾಗೂ ಪತಿ ಕೂಡ ಬಸ್ ಹತ್ತುತ್ತಿದ್ದಾರೆ. ಇದರಿಂದ ಆದಾಯ ಹೆಚ್ಚಳವಾಗುತ್ತಿದೆ. ಶಕ್ತಿಯೋಜನೆಯಿಂದ ಆದಾಯ ಶೇ.42.5 (ರೂ. 2,044 ಕೋಟಿ) ಇದ್ದರೆ, ಶಕ್ತಿಯೇತರ ಆದಾಯ ಶೇ.57.5 (ರೂ. 2,764 ಕೋಟಿ)ರಷ್ಟಿದೆ.

ದಿನದ ಆದಾಯದಲ್ಲೂ ಹೆಚ್ಚಳ:
ಹಿಂದೆ ಕೆಎಸ್‌ಆರ್‌ಟಿಸಿ ದೈನಂದಿನ ಆದಾಯ ಸುಮಾರು 9.7 ಕೋಟಿ ರೂಪಾಯಿಗಳಷ್ಟಿತ್ತು. ಅದು ಈಗ 13.9 ಕೋಟಿ ರೂಪಾಯಿಗಳಿಗೆ ಜಿಗಿದಿದೆ. ಇದಲ್ಲದೆ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರದಂತಹ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇರುತ್ತಿತ್ತು. ಲೋಡ್ ಮೊದಲು ಶೇಕಡಾ 50-60 ರಷ್ಟಿತ್ತು. ಆದರೆ ಶಕ್ತಿ ಯೋಜನೆಯ ನಂತರ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇಕಡಾ 85ಕ್ಕಿಂತ ಹೆಚ್ಚಿದೆ

Advertisement
Advertisement