ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Wayanad Landslide: ವಯನಾಡು ದುರಂತ : ಬೇರೆಯವರ ಮಗು ಕಾಪಾಡಲು ಹೋಗಿ ತನ್ನ ಮಗಳನ್ನು ಕಳೆದುಕೊಂಡ ಮಹಿಳೆ : ಮುಂದೇನಾಯ್ತು ಆ ಕುಟುಂಬಕ್ಕೆ..?

Wayanad Landslide: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯಾರದ್ದೋ ಮಗುವನ್ನು ಉಳಿಸಲು ಮುಂದಾಗಿದ್ದಾರೆ ಮಹಿಳೆ ಪ್ರಜಿತಾ. ಆದರೆ ಆ ಮಗುವನ್ನು ಉಳಿಸಲು ಹೋಗಿ ತನ್ನ ಸ್ವಂತ ಮಗಳನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ.
09:27 AM Aug 01, 2024 IST | ಸುದರ್ಶನ್
UpdateAt: 09:27 AM Aug 01, 2024 IST
Advertisement

Wayanad Landslide: ಕೇರಳದ ವಯನಾಡಿನಲ್ಲಿ ನಡೆದದ್ದು ಎಲ್ಲಾ ಮಾನವ ಕುಲಕ್ಕೇ ಹೊಡೆದ ಹೊಡೆತ. ಮಾನವನ ಕ್ಷರೌರ್ಯಕ್ಕೆ ಪ್ರಕೃತಿ ತಕ್ಕ ಪಾಠವನ್ನು ಕಲಿಸುತ್ತಿದೆ. ಆದರೆ ಇದರ ವಿಧಿಯಾಟಕ್ಕೆ ಬಲಿಯಾಗುತ್ತಿರುವವರು ಮಾತ್ರ ಇದಕ್ಕೆ ಸಂಬಂಧ ಪಡೆದೇ ಇದ್ದ ಕೆಲ ಮುಗ್ದರು. ಕಳೆದ ಎರಡು ದಿನಗಳ ಹಿಂದೆ ನಡೆದ ಭೀಕರ ಮಹಾಜಲ ಪ್ರಳಯಕ್ಕೆ ಬಲಿಯಾದವರ ಸಂಖ್ಯೆ 200ರ ಗಡಿ ದಾಟಿದೆ. ಯಾರು ಯಾರನ್ನು ಕಾಪಾಡುವ ಪರಿಸ್ಥಿತಿಯಲ್ಲಿ ಇಲ್ಲದ ಸಮಯ ಅದು. ಆದರೂ ಕೆಲವರು ತನ್ನ ಪ್ರಾಣವನ್ನು ಲೆಕ್ಕಿಸದೆ ಬೇರೆವರನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆ ಇಲ್ಲೊಬ್ಬರು ಮಗುವೊಂದನ್ನು ಉಳಿಸಲು ಹೋಗಿ ತನ್ನವರನ್ನು ಕಳೆದುಕೊಂಡ ಘಟನೆ ಎಂಥವರ ಮನವನ್ನು ಕಲಕಿಸದೇ ಇರದು.

Advertisement

ಈ ಭೀಕರ ಘಟನೆಯ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯಾರದ್ದೋ ಮಗುವನ್ನು ಉಳಿಸಲು ಮುಂದಾಗಿದ್ದಾರೆ ಮಹಿಳೆ ಪ್ರಜಿತಾ. ಆದರೆ ಆ ಮಗುವನ್ನು ಉಳಿಸಲು ಹೋಗಿ ತನ್ನ ಸ್ವಂತ ಮಗಳನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ. ಅತ್ತ ನೀರಿನಲ್ಲಿ ಬರುತ್ತಿದ್ದ ಮಗುವನ್ನು ಕಾಪಾಡುವ ವೇಳೆ ಇತ್ತ ಪ್ರಜಿತಾ ಅವರ ಹತ್ತು ವರ್ಷದ ಮಗುವಿಗೆ ಕರೆಂಟು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ಅವರ ಜೊತೆ ಇದ್ದ ಅವರ ಕುಟುಂಬದವರು ಅಹನ್ಯಾಳನ್ನು ಕಾಪಾಎಳೆಯಲು ಹೋದ ಪ್ರಜಿತಾ ಕುಟುಂಬಸ್ಥರಿಗೂ ಗಾಯಗಳಾಗಿವೆ.ಕಾಪಾಡಲು ಹೋಗಿ ಗಾಯಗೊಂಡಿದ್ದಾರೆ.

ಪ್ರಜಿತಾ ಅವರ ತಾಯಿ ಶೋಭಾ ಮತ್ತು ಅವರ ಮಾವ ಗಂಭೀರವಾಗಿ ಗಾಯಗೊಂಡಿದ್ದು ಅವರಿಬ್ಬರು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಜಿತಾ ಅವರ ಮುಖ ಮತ್ತು ತೊಡೆಯ ಮೂಳೆಗೂ ತೀವ್ರ ತರದ ಗಾಯಗಳಾಗಿವೆ. ಚೂರಲ್ಮಲಾ ಸುರಕ್ಷಿತ ಸ್ಥಳವೆಂದು ಭಾವಿಸಿ ಅಲ್ಲೆ ಇದ್ದ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಹಿಂದೆ ಮನೆ ಹಾಗೂ ಹೋಮ್‌ಸ್ಟೇ ಕಟ್ಟಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಇದೇ ಶಾಲೆಯಲ್ಲಿ ಅಲ್ಲಿನ ಸುತ್ತಮುತ್ತಲಿನ ವಾಸಿಗಳು ವಾಸವಾಗಿದ್ದರು. ಆದರೆ ಸುರಕ್ಷಿತ ಎಂದು ಭಾವಿಸಿದ್ದ ಸ್ಥಳದಲ್ಲೇ ಈ ಮಾಹಾ ದುರಂತ ಸಂಭವಿಸಿದೆ.

Advertisement

Bengaluru: ರಾಜಸ್ಥಾನ್ ನಿಂದ ಬೆಂಗ್ಳೂರಿಗೆ ಬಂದ ಮಾಂಸ ಕುರಿಯದ್ದೋ ಇಲ್ಲ ನಾಯಿಯದ್ದೋ? ಸರ್ಕಾರದ ಕೈ ಸೇರಿದ ರಿಪೋರ್ಟ್ ನಲ್ಲಿ ಏನಿದೆ?

Related News

Advertisement
Advertisement