ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

First Night ಗೂ ಮುನ್ನ ಗಂಡು ಮಗುವಿನ ಗರ್ಭಧರಿಸುವುದು ಹೇಗೆ ಎಂಬ ಪುಸ್ತಕ ವಧುಗೆ ಕೊಟ್ಟ ಅತ್ತೆ ಮಾವ; ಕೇಸ್‌ ಜಡಿದ ಮಹಿಳೆ

12:29 PM Mar 06, 2024 IST | ಹೊಸ ಕನ್ನಡ
UpdateAt: 12:45 PM Mar 06, 2024 IST
Advertisement

ಗಂಡು ಮಗುವನ್ನು ಹೆರಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ತನ್ನ ಪತಿ ಮತ್ತು ಆತನ ಕುಟುಂಬ ಚಿತ್ರಹಿಂಸೆ ನೀಡುತ್ತಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕೇರಳ ಹೈಕೋರ್ಟ್‌ನ ಮೊರೆ ಹೋಗಿರುವ ಘಟನೆಯೊಂದು ನಡೆದಿದೆ.

Advertisement

ಇದನ್ನೂ ಓದಿ: Janhavi Kapoor: 'ನೆಪೋಟಿಸಂ' ಕುರಿತಾಗಿ ಎದುರಿಸುತ್ತಿರುವ ಟೀಕೆಗೆ ಉತ್ತರಿಸಿದ ಜಾನ್ಹವಿ ಕಪೂರ್

1994 ರ ಪ್ರೀ-ಕಾನ್ಪೆಪ್ಷನ್‌ ಮತ್ತು ಪ್ರೀ-ನೇಟಲ್‌ ಡಯಾಗ್ನೋಸ್ಟಿಕ್‌ ಟೆಕ್ನಿಕ್ಸ್‌ ಆಕ್ಟ್‌ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಮಹಿಳೆ ಕೋರಿದ್ದಾರೆ.

Advertisement

2012 ರಲ್ಲಿ ತನ್ನ ಮದುವೆಯಾಗಿದ್ದು, ಮದುವೆಯ ಮುನ್ನಾದಿನ ಆಕೆಗೆ ʼಗಂಡು ಮಗುವಿನ ಗರ್ಭ ಧರಿಸುವುದು ಹೇಗೆʼ ಎಂದು ಇರುವ ಪುಸ್ತಕವೊಂದು ನೀಡಲಾಗಿದ್ದು, ಹಾಗೂ ಮದುವೆಯ ದಿನವೇ ಗಂಡು ಮಗುವನ್ನು ಹೊಂದುವಂತೆ ಸೂಚನೆ ನೀಡಿದ್ದಾಗಿ ತನ್ನ ಅತ್ತೆ ಮಾವ ಎಂದು ಹೇಳಲಾಗಿದೆ. ಹಾಗೂ ಈ ಕುರಿತು ಅತ್ತೆಮಾವ ಮಾನಸಿಕ ಚಿತ್ರಹಿಂಸೆ ನೀಡಿದ್ದಾರೆ ಎನ್ನುವ ವಿಷಯವನ್ನು ಮಹಿಳೆ ಬಹಿರಂಗ ಪಡಿಸಿದ್ದಾರೆ.

2014 ರಲ್ಲಿ ಮಹಿಲೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಅಂದಿನಿಂದ ಪತಿ,ಅತ್ತೆ,ಮಾವ ಕಿರುಕುಳ ನೀಡುವುದು ಹೆಚ್ಚಾಗಿದ್ದು, ತನ್ನ ಪತಿ ಹೆಣ್ಣು ಮಗುವೆಂದು ಇಲ್ಲಿಯವರೆಗೆ ನೋಡಲು ಬಂದಿಲ್ಲ. ಬಾಣಂತನ ಮುಗಿಸಿ ಅತ್ತೆ ಮನೆಗೆ ಹೋದಾಗ ಕೇವಲ ಒಂದು ತಿಂಗಳಲ್ಲಿ ಅಲ್ಲಿಂದ ವಾಪಸ್‌ ಕಳುಹಿಸಲಾಗಿದೆ. ಅನಂತರ ಪತಿ ದೂರವೇ ಇಟ್ಟಿದ್ದಾರೆ ನನ್ನನ್ನು. ಮಗುವಿನ ಪೋಷಣೆಗೆ ಹಣ ಕೂಡಾ ನೀಡುತ್ತಿಲ್ಲ ಎಂದು ಮಹಿಳೆ ದೂರಿದ್ದಾರೆ.

ಯಾವುದೇ ಗಂಡು ಮಾತ್ರವಲ್ಲದೇ ಒಳ್ಳೆಯ ಗಂಡು ಮಗು ಪಡೆಯಲು 95% ಅವಕಾಶವನ್ನು ಖಚಿತಪಡಿಸುವ ಲೈಂಗಿಕ ಸಂಭೋಗ ನಡೆಸಲು ವಿಧಾನ ಮತ್ತು ಸೂಚನೆಯನ್ನು ಸೂಚಿಸುವ ಸ್ಪಷ್ಟ ಟಿಪ್ಪಣಿಯನ್ನು ಒಳಗೊಂಡ ಪುಸ್ತಕ ಅದಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪತಿ ಮತ್ತು ಆತನ ಕುಟುಂಬವು ಹೆಣ್ಣುಮಕ್ಕಳು ಆರ್ಥಿಕ ಹೊರೆ ಎಂದು ನಂಬಿಕೆ ಎಂಬುವುದನ್ನು ಆ ಪುಸ್ತಕದಲ್ಲಿ ಬರೆಯಲಾಗಿದ್ದು, ಅದನ್ನು ಅನುಸರಿಬೇಕು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯ ಅರ್ಜಿಯಲ್ಲಿ ಹೈಕೋರ್ಟ್‌ ಪರಿಗಣನೆಗೆ ತೆಗೆದುಕೊಂಡಿದ್ದು, ತನಿಖೆ ನಡೆಸುವಂತೆ ಆದೇಶ ಮಾಡಿದೆ.

Advertisement
Advertisement