ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Wikkipedia Vikas: 'ನಾನು ನಂದಿನಿ' ಖ್ಯಾತಿಯ ವಿಕ್ಕಿಪೀಡಿಯಾಗೆ ಎದುರಾಯ್ತು ಸಂಕಷ್ಟ !! ಆ ಒಂದು ರೀಲ್ಸ್ ಮಾಡಿದ ತಪ್ಪಿಗಾಗಿ ಸ್ಟೇಷನ್ ಮೆಟ್ಟಿಲು ಹತ್ತಿದ ವಿಕಾಸ್

Wikkipedia Vikas: ನಾನು ನಂದಿನಿ ರೀಲ್ಸ್(Reals) ಮೂಲಕ ಫೇಮಸ್ ಆಗಿರೋ ವಿಕ್ಕಿಪೀಡಿಯ(WikKipedia ತಂಡ ಕೂಡ ಈ ಪ್ರಮಾದದಲ್ಲಿ ತಗಲಾಕಿಕೊಂಡಿದೆ.
05:28 PM Jul 18, 2024 IST | ಸುದರ್ಶನ್
UpdateAt: 05:28 PM Jul 18, 2024 IST
Advertisement

Wikkipedia Vikas: ಯುವಜನತೆಯ ರೀಲ್ಸ್ ಹುಚ್ಚಾಟ ಇಂದು ಮಿತಿ ಮೀರಿದೆ. ಇದರಿಂದ ಜೀವಕ್ಕೇ ಕುತ್ತು ಬರುತ್ತೆ ಎಂದು ಗೊತ್ತಿದ್ದರೂ ಲೈಕ್ಸ್, ಕಮೆಂಟ್ಸ್ ಗೋಸ್ಕರ ಏನುಬೇಕಾದರೂ ಮಾಡಲು ರೆಡಿಯಾಗಿರುತ್ತಾರೆ. ಅದು ಕೂಡ ಬೇಕಾಬೆಟ್ಟಿ ಕಂಟೆಂಟ್ ಮೂಲಕ ಮಿಂಚುವವರೇ ಹೆಚ್ಚು. ಇಂತವರಿಗೆ ಪೋಲೀಸರು ಕಡಿವಾಣ ಹಾಕಿದರೂ ಕೂಡ ಅಲ್ಲಲ್ಲಿ ಕೆಲವರು ಕಾಣಸಿಗುತ್ತಾರೆ. ಅಲ್ಲದೆ ಕೆಲವೊಮ್ಮೆ ಗೊತ್ತಿಲ್ಲದೇ ನಮ್ಮಿಂದ ಪ್ರಮಾದ ಆಗಿಬಿಡುತ್ತದೆ. ಅಂತೆಯೇ ಇದೀಗ ನಾನು ನಂದಿನಿ ರೀಲ್ಸ್(Reals) ಮೂಲಕ ಫೇಮಸ್ ಆಗಿರೋ ವಿಕ್ಕಿಪೀಡಿಯ(WikKipedia ತಂಡ ಕೂಡ ಈ ಪ್ರಮಾದದಲ್ಲಿ ತಗಲಾಕಿಕೊಂಡಿದೆ.

Advertisement

ಯಾವುದೇ ರೀಲ್ಸ್ ನೋಡಿದರೂ ನಮಗೆ ಕೇಳೋಕೆ, ನೋಡೋಕೆ ಸಿಗೋದು ಒಂದೇ ಒಂದು 'ನಾನು ನಂದಿನಿ ಬೆಂಗಳೂರು ಬಂದಿನಿ'(Nanu Nandini Bengaluru Bandini)ಅನ್ನೋ ವೈರಲ್ ಸಾಂಗ್. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ನಾಡಿನ ಜನಕ್ಕೆ ಒಂದು ರೀತಿ ಎಮೋಶನಲ್ ಆಗಿ ಕನೆಕ್ಟ್ ಆಗಿತ್ತು. ಇದೇ ರೀತಿ ಈ ವಿಕಿಪೀಡಿಯ ತಂಡ ಅನೇಕ ವಾಸ್ತವ ಸಂಗತಿಗಳನ್ನು ಇಟ್ಟುಕೊಂಡು ರೀಲ್ಸ್ ಮಾಡಿ ಎಲ್ಲರ ಮನ ಗೆದ್ದಿದೆ. ಆದರೆ ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಒಂದನ್ನು ಶೇರ್ ಮಾಡಿಕೊಂಡು ವಿಕ್ಕಿಪೀಡಿಯಾ ವಿಕಾಸ್ ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಹೌದು, ವಿಕ್ಕಿಪೀಡಿಯಾ ವಿಕಾಸ್‌(Wikkipedia Vikas)ಗೆ ಪೊಲೀಸರು ಖಡಕ್‌ ವಾರ್ನಿಂಗ್ ಕೊಟ್ಟಿದ್ದಾರೆ. ಕೆಲವು ಸಮಯದ ಹಿಂದೆ ವಿಕ್ಕಿಪೀಡಿಯಾ ವಿಕಾಸ್ ಡ್ರಗ್ಸ್‌ (ಮಾದಕ ವಸ್ತು ವ್ಯಸನ) ವಿಚಾರಕ್ಕೆ ಸಂಬಂಧಿಸಿದಂತ ರೀಲ್ಸ್‌ವೊಂದನ್ನು ಶೇರ್ ಮಾಡಿಕೊಂಡಿದ್ದರು. ಇದೇ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗೆ ವೈರಲ್ ಆದ ವಿಡಿಯೋವನ್ನು ನೋಡಿದ ಪೊಲೀಸರು ವಿಕ್ಕಿಪೀಡಿಯಾ ವಿಕಾಸ್ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವಿಕ್ಕಿಪೀಡಿಯಾ ವಿಕಾಸ್‌ ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಮತ್ತೆ ಎಂದು ಈ ರೀತಿಯ ವಿಡಿಯೋ ಮಾಡದಂತೆ ಸೂಚನೆ ಕೊಟ್ಟಿದ್ದಾರಂತೆ.

Advertisement

ನಾವು ಎಷ್ಟೇ ಜಾಗ್ರತೆಯಾಗಿದ್ದರೂ ಕೆಲವೊಮ್ಮೆ ನಮ್ಮಿಂದ ಏನಾದರೂ ಒಂದ ಪ್ರಮಾದ ಆಗೇ ಆಗುತ್ತದೆ. ನಾವು ಬೇಕೆಂದು ಮಾಡದಿದ್ದರೂ ಅದು ಕಾನೂನಿನ ದೃಷ್ಟಿಯಿಂದ ತಪ್ಪೇ. ಹೀಗಾಗಿ ರೀಲ್ಸ್ ಮಾಡುತ್ತಾ ಮೈಮರೆಯುಧ ಯುವ ಜನರು ತಮ್ಮ ಈ ವಿಶೇಷವಾದ ಟ್ಯಾಲೆಂಟ್ ಮೂಲಕ ಏನಾದರೂ ಮೆಸೇಜ್ ನೀಡುವ, ಸಮಾಜವನ್ನು ತಿದ್ದುವಂತಹ ಕೆಲಸವನ್ನು ಮಾಡಬೇಕು.

SBI Bank: ಎಸ್‌ಬಿಐ ಗ್ರಾಹಕರಿಗೆ ಗುಡ್ ನ್ಯೂಸ್‌! ಇಂತಹವರಿಗೆ ಬಡ್ಡಿದರದಲ್ಲಿ ಹೆಚ್ಚಳ!

Related News

Advertisement
Advertisement