ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

SIT: ಪ್ರಜ್ವಲ್ ರೇವಣ್ಣನನ್ನು ಮಹಿಳಾ ಅಧಿಕಾರಿಗಳೇ ಬಂಧಿಸಿದ್ದೇಕೆ ? ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ SIT !!

SIT: ಬಾರೀ ಕುತೂಹಲ ಅಂದ್ರೆ ಪ್ರಜ್ವಲ್ ರೇವಣ್ಣ ಅವರನ್ನು ವಿಮಾನ ನಿಲ್ದಾಣದಲ್ಲಿ ಬರೀ ಮಹಿಳಾ ಅಧಿಕಾರಿಗಳೇ ಬಂಧಿಸಿದ್ದೇಕೆ
10:16 PM May 31, 2024 IST | ಸುದರ್ಶನ್
UpdateAt: 10:16 PM May 31, 2024 IST
Advertisement

SIT: ಅಶ್ಲೀಲ ವಿಡಿಯೋ ಪ್ರಕರಣದ ಬಲೆಯಲ್ಲಿ ಸಿಲುಕಿ ಬರೋಬ್ಬರಿ 35 ದಿನಗಳ ಕಾಲ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಹಾಸನ(Hassan) ಜೆಡಿಎಸ್‌ ಸಂಸದ(JDS MP), ಅಶ್ಲೀಯ ವಿಡಿಯೋ ಪ್ರಕರಣ ಆರೋಪಿ ಪ್ರಜ್ವಲ್ ರೇವಣ್ಣ(Prajwal Revanna) ನುಡಿದಂತೆ ನಡೆದಿದ್ದು, ಕೊನೆಗೂ ಬೆಂಗಳೂರಿಗೆ ವಾಪಸಾಗಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ(Kempegouda Airport)ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸುಮಾರು 35 ದಿನಗಳ ಹೈ ಡ್ರಾಮಕ್ಕೆ ತೆರೆ ಬಿದ್ದಿದೆ.

Advertisement

ಎಲ್ಲವೂ ಅಂದುಕೊಂಡಂತೆ ನಡೆದಿದೆ. SIT ತನಿಖೆಯನ್ನೂ ಶುರುಮಾಡಿದೆ. ಆದರೆ ಬಾರೀ ಕುತೂಹಲ ಅಂದ್ರೆ ಪ್ರಜ್ವಲ್ ರೇವಣ್ಣ ಅವರನ್ನು ವಿಮಾನ ನಿಲ್ದಾಣದಲ್ಲಿ ಬರೀ ಮಹಿಳಾ ಅಧಿಕಾರಿಗಳೇ ಬಂಧಿಸಿದ್ದೇಕೆ? ಜೀಪಿನಲ್ಲಿ ಡ್ರೈವರ್ ಬಿಟ್ಟರೆ ಉಳಿದವರೆಲ್ಲರೂ ಮಹಿಳಾ ಅಧಿಕಾರಿಗಳೇ ಇದ್ದದ್ದು ಯಾಕೆ ಎಂಬುದು. ಇದು ಇಡೀ ನಾಡಿನ ಜನರ ಪ್ರಶ್ನೆ. ಇದರ ಬಗ್ಗೆ ಕೆರವರು ಬೇಕಾಬಿಟ್ಟಿ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಆದರೆ ಇದರ ಹಿಂದೆ ಬೇರೆಯೇ ಲೆಕ್ಕಾಚಾರ ಇದೆ. SIT ಆಲೋಚನೆಯೇ ಬೇರೆ ಇದೆ.

ಹೌದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಜಾರಿಗೊಳಿಸಲಾಗಿದ್ದ ಬಂಧನ ವಾರಂಟ್ ಪ್ರತಿ ಹಿಡಿದುಕೊಂಡು ಪ್ರಜ್ವಲ್ ಬಂಧನಕ್ಕೆ ಮಹಿಳಾ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರು. ಪ್ರಜ್ವಲ್ ರೇವಣ್ಣ ನಠು ರಾತ್ರಿ 12 ಗಂಟೆ ಸುಮಾರಿಗೆ ಬೆಂಗಳೂರಿನ ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಮಹಿಳಾ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಪೊಲೀಸರು ಅವರನ್ನು ಬಂಧಿಸಿ ಜೀಪಿನಲ್ಲಿ ಕೂರಿಸಿಕೊಂಡು ಎಸ್ ಐಟಿ ಕಚೇರಿಗೆ ಕರೆದೊಯ್ದರು. ಇಲ್ಲಿ ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣನನ್ನು ಬಂಧಿಸಿದ್ದು ಯಾಕೆಂದರೆ SIT ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಎಂಬುದು ಈಗ ತಿಳಿದಿದೆ.

Advertisement

SIT ಪ್ಲಾನ್ ಏನು?

• ಪ್ರಜ್ವಲ್ ರೇವಣ್ಣನಿಂದ ನೂರಾರು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈಗಾಗಲೇ ಅವರೆಲ್ಲರೂ ಭಯ, ಆತಂಕದಿಂದ ನಲುಗಿದ್ದಾರೆ. ಆದರೆ ಆರೋಪಿ ಪ್ರಜ್ವಲ್ ನನ್ನು ಮಹಿಳಾ ಅಧಿಕಾರಿಗಳೇ ಬಂಧಿಸಿರುವುದರಿಂದ ಅವರೆಲ್ಲರಿಗೂ ಧೈರ್ಯ ಬಂದಿರುತ್ತದೆ. ನಮ್ಮಂತ ಮಹಿಳೆಯರೇ ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ, ನಮಗೂ ನ್ಯಾಯ ದೊರಕುತ್ತದೆ, ಮಹಿಳೆ ಏನುಬೇಕಾದರೂ ಮಾಡಬಹುದು ಎಂಬ ವಿಶ್ವಾಸ ಅವರಲ್ಲಿ ಮೂಡಿರುತ್ತದೆ. ಜೊತೆಗೆ ಸಂತ್ರಸ್ತ ಮಹಿಳೆಯರು ಯಾರಿಗೂ ಹೆದರಬೇಕಾಗಿಲ್ಲ, ಉಳಿದವರೂ ಧೈರ್ಯಮಾಡಿ ಮುಂದೆ ಬಂದು ದೂರು ನೀಡಬಹುದು ಎಂದು ಸಂದೇಶ ಕೂಡ ರವಾನಿಸಿದಂತಾಗುತ್ತದೆ. ಹೀಗಾಗಿ SIT ಮಹಿಳಾ ಅಧಿಕಾರಿಗಳನ್ನೇ ಕಳುಹಿಸಿದೆ. ಮಹಿಳಾ ಅಧಿಕಾರಿಗಳು ಯಾರಿಗೂ ಹೆದರುವುದಿಲ್ಲ ಎಂಬ ಸಾಂಕೇತಿಕ ಸಂದೇಶವನ್ನು ಸಂತ್ರಸ್ತೆಯರಿಗೆ ರವಾನಿಸುವುದು ಕೂಡ ಇದರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

• ಮತ್ತೊಂದು ಕಾರಣ ಅಂದರೆ ತನ್ನ ಕಾಮ ಬಯಕೆಗಾಗಿ ಮಹಿಳೆಯರನ್ನು, ಮಹಿಳಾ ಅಧಿಕಾರಿಗಳನ್ನು ಬೇಕಾಬಿಟ್ಟಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಪ್ರಜ್ವಲ್ ಮೇಲೆ ಇದೆ. ಹೀಗಾಗಿ ಮಹಿಳೆಯರು ಬರೀ ಅಬಲೆಯಯಲ್ಲ, ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತಾರೆ. ತಾನು ದೌರ್ಜನ್ಯ ಎಸಗಿದ ಹೆಣ್ಣೇ ತನ್ನನ್ನು ಬಂಧಿಸಿದ್ದಾರೆ ಎಂದು ಪ್ರಜ್ವಲ್ ಗೆ ಕೊಂಚವಾದರೂ ಮನವರಿಕೆಯಾಗಲಿ, ಇರುಸುಮುರುಸು ಆಗಲಿ ಎಂಬ ಆಲೋಚನೆಯಿಂದಲೂ SIT ಈ ನಿರ್ಧಾರ ಕೈಗೊಂಡಿದೆ.

Advertisement
Advertisement