ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Indhira Gandhi: ಯಾರನ್ನೂ ಲೆಕ್ಕಕ್ಕಿಡದ ಇಂದಿರಾಗಾಂಧಿ ಅಂದು ಡಾ.ರಾಜ್‌ಕುಮಾರ್‌ ಹೆಸರು ಕೇಳಿ ಗಡಗಡನೆ ನಡುಗಿ ಹೋಗಿದ್ದರು !! ಯಾಕೆ?

Indira Gandhi: ಡಾ. ರಾಜ್ ಕುಮಾರ್(Dr Rajkumar) ಹೆಸರು ಕೇಳಿ ಗಡಗಡನೆ ನಡುಗಿ ಹೋಗಿದ್ದರು. ಉಕ್ಕಿನ ಮಹಿಳೆ ರಾಜ್ ಹೆಸರು ಕೇಳಿ ಕಂಪಿಸಿದ್ದೇಕೆ? ಏನಾಗಿತ್ತು ಅಂದು? ತಿಳಿಯೋಣ ಬನ್ನಿ.
12:43 PM Apr 18, 2024 IST | ಸುದರ್ಶನ್
UpdateAt: 01:11 PM Apr 18, 2024 IST
Advertisement

Indhira Gandhi: ದೇಶದ ಉಕ್ಕಿನ ಮಹಿಳೆ, ಮೊದಲ ಮಹಿಳಾ ಪ್ರಧಾನಿ, 'ಉಳುವವನೇ ಹೊಲದೊಡೆಯ'ವನ್ನು ಜಾರಿಗೆ ತಂದ ಛಲದಂಕ ಮಲ್ಲಿ ಇಂದಿರಾಗಾಂಧಿ(Indhira Gnadhi) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇವರ ಬಗ್ಗೆ ಹೆಮ್ಮೆ ಪಡುವವರು, ಇಂದಿಗೂ ಭಯ, ಭಕ್ತಿ ತೋರುವವರು ಅನೇಕರಿದ್ದಾರೆ. ಆದರೆ ಯಾರಿಗೂ ಹೆದರದ ಈ ಇಂದಿರಾಗಾಂಧಿ ಅಂದು ನಮ್ಮ ಕರ್ನಾಟಕದ(Karanataka) ಡಾ. ರಾಜ್ ಕುಮಾರ್(Dr Rajkumar) ಹೆಸರು ಕೇಳಿ ಗಡಗಡನೆ ನಡುಗಿ ಹೋಗಿದ್ದರು. ಉಕ್ಕಿನ ಮಹಿಳೆ ರಾಜ್ ಹೆಸರು ಕೇಳಿ ಕಂಪಿಸಿದ್ದೇಕೆ? ಏನಾಗಿತ್ತು ಅಂದು? ತಿಳಿಯೋಣ ಬನ್ನಿ.

Advertisement

ಇದನ್ನೂ ಓದಿ: Sugar: ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ : ಹೇಗೆ ಅಂತ ಗೊತ್ತಾ? : ಇಲ್ಲಿ ನೋಡಿ

ರಾಷ್ಟ್ರ ರಾಜಕಾರಣದ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದ ಚಿಕ್ಕಮಗಳೂರು ಲೋಕಸಭೆ(Chikkamagaluru Lokasabhe) ಕ್ಷೇತ್ರ ಈಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರ. ಯಾಕೆಂದರೆ ತುರ್ತು ಪರಿಸ್ಥಿತಿ ಬಳಿಕ ರಾಜಕೀಯವೇ ಮುಗಿದು ಹೋಯಿತು ಎಂದು ಭಾವಿಸಿದ್ದ, ಕಾಂಗ್ರೆಸ್(Congress) ಕಥೆ ಮುಗಿಯಿತು ಎಂದು ಭಾವಿಸಿಕೊಂಡಿದ್ದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರನ್ನು ಗೆಲ್ಲಿಸಿ, ಕಾಂಗ್ರೆಸ್‌ ಪಕ್ಷಕ್ಕೂ ಪುನರ್ಜನ್ಮ ನೀಡಿದ ಕಾರಣಕ್ಕೆ ಇಡೀ ರಾಷ್ಟ್ರದ ಗಮನ ಸೆಳೆದ ಹೆಗ್ಗಳಿಕೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕಿದೆ. ಸ್ವಂತ ನೆಲದಲ್ಲಿ ಹೀನಾಯವಾಗಿ ಸೋತಿದ್ದವರಿಗೆ, ಆಶ್ರಯ ಕೊಟ್ಟಿದ್ದು ನಮ್ಮ ಕರ್ನಾಟಕದ ಕಾಫಿ ನಾಡು ಚಿಕ್ಕಮಗಳೂರು. ಹೀಗಾಗಿ ಚಿಕ್ಕಮಗಳೂರು ಎಂದೆಂದಿಗೂ ದೇಶದ ರಾಜಕೀಯದಲ್ಲಿ ಗುರುತಿಸಲ್ಪಡುವ ಕ್ಷೇತ್ರ. ಆದರೆ ಈ ಸಂಬಂಧವಾಗಿಯೇ ಇಂಧಿರಾ, ರಾಜ್ ಕುಮಾರ್ ಹೆಸರು ಕೇಳಿ ನಡುಗಿದ್ದು. ಅಷ್ಟಕ್ಕೂ 46 ವರ್ಷಗಳ ಹಿಂದಿನ ಆ ಮರೆಯಲಾಗದ ಮತಯುದ್ಧ ಹೇಗಿತ್ತು? ಚಿಕ್ಕಮಗಳೂರು ರಣರಂಗದಲ್ಲಿ ಆಗಿದ್ದೇನು?

Advertisement

ಇದನ್ನೂ ಓದಿ: Unemployment: ಉದ್ಯೋಗಕ್ಕಾಗಿ ಹುಡುಕುತ್ತಿರುವಿರಾ? ಈ ಒಂದು ಕೆಲಸ ಮಾಡಿ ಸಾಕು

ಹೌದು, 1977ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸೋಲು ಕಂಡಿದ್ದರು. ಅವರ ರಾಜಕೀಯ ಭವಿಷ್ಯ ಕೊನೆಗೊಂಡಿತು ಎಂದು ದೇಶದಜನ ಭಾವಿಸಿದ್ದರು. ಅವರು ದೇಶದ ಪ್ರಧಾನಿ ಯಾಗಬೇಕೆಂಬ ಕೋಟ್ಯಂತರ ಕಾಂಗ್ರೆಸ್‌ ಕಾರ್ಯ ಕರ್ತರ ಆಸೆಗೂ ಅದು ತಣ್ಣೀರು ಎರಚಿತ್ತು. ಆಗ ಚಿಕ್ಕಮಗಳೂರು ಕ್ಷೇತ್ರದ ಸಂಸದ ಆಗಿದ್ದವರು ಡಿ.ಬಿ. ಚಂದ್ರೇಗೌಡರು. ಇಂದಿರಾಗಾಂಧಿ ಪ್ರಧಾನಿಯಾಗಿಸುವ ಸಲುವಾಗಿ ಅವರು ತಮ್ಮ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ಥಾನ ತ್ಯಾಗ ಮಾಡಿದ್ದರು. ಉಪಚುನಾವಣೆ ಕಣ ರಂಗೇರಿತ್ತು. ಇಂದಿರಾ ಗಾಂಧಿ, ವೀರೇಂದ್ರ ಪಾಟೀಲ್‌ ನೇರ ಎದುರಾಳಿಗಳಾದರೆ ಉಳಿದಂತೆ ಕಣದಲ್ಲಿದ್ದವರ ಸಂಖ್ಯೆಯೇ 26. ಇಷ್ಟಾದರೂ ಇಂದಿರಾಗೆ ಕೊಂಚವೂ ಭಯ ಇರಲಿಲ್ಲ. ಗೆದ್ದೇ ಗೆಲ್ಲುವೆ ಎನ್ನುವ ಉತ್ಸಾಹ. ಚಿಕ್ಕಮಗಳೂರಿನ ಜನ ಬೆಂಬಲವೇ ಇದಕ್ಕೆ ಸಾಕ್ಷಿ ಆಗಿತ್ತು. ಪ್ರಚಾರವೂ ಜೋರಾಗಿ ನಡೆದಿತ್ತು.

ಆದರೆ ಈ ನಡುವೆಯೇ ಇಂಧಿರಾ ಗಾಂಧಿಗೆ ಮತ್ತೆ ಬರ ಸಿಡಿಲು ಬಡಿದಂತಾಯ್ತು. ಯಾರಿಗೂ ಹೆದರದ, ಯಾರಿಗೂ ಜಗ್ಗದ ಇಂದಿರಾ ಗಾಂಧಿ, ಇಂಡಿಯಾ ಅಂದ್ರೆ ಇಂದಿರಾ ಅನ್ನೋವಷ್ಟರ ಮಟ್ಟಿಗೆ ಫೇಮಸ್‌ ಆಗಿದ್ದ ಇಂದಿರಾಗಾಂಧಿಯವರನ್ನ ಆವತ್ತು ಆ ಒಂದು ಹೆಸರು ಆ ಪರಿ ಹೆದರಿಸಿಬಿಟ್ಟಿತ್ತು. ಆ ಹೆಸರೇ ನಮ್ಮ ನಟ ಸಾರ್ವಭೌಮ, ಕನ್ನಡಿಗರ ಹೆಮ್ಮೆ ಡಾ. ರಾಜ್ ಕುಮಾರ್. ಯಾಕೆಂದರೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ರಾಜ್ ಕುಮಾರ್ ಹೆಸರು ಎಲ್ಲೆಡೆಯೂ ಕೇಳಿಬರಲಾರಂಭಿಸಿತು. ಕಾರಣ ರಾಜ್ ಕುಮಾರ್ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಇಂಧಿರಾ ಗಾಂಧಿಗೆ ಎದುರಾಳಿಯಾಗಿ ಚಿಕ್ಕಮಗಳೂರಿಂದಲೇ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ.

ಯಾಕೆಂದರೆ ಅಂದು ಕರ್ನಾಟಕದ ನೆಲದಲ್ಲಿ ರಾಜ್ ಕುಮಾರ್ ಬಿಟ್ಟರೆ ಇನ್ಯಾರೂ ಆ ರೀತಿಯ ವರ್ಚಸ್ಸಿನ ವ್ಯಕ್ತಿ ಇರಲಿಲ್ಲ ಹಾಗೂ ಇಂದಿರಾ ಅವರನ್ನು ಮಣಿಸಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಹಲವಾರು ರಾಜಕೀಯ ಪಕ್ಷಗಳು ರಾಜ್ ಕುಮಾರ್ ಅನ್ನು ಕಣಕ್ಕಿಳಿಸಲು ಹಾತೊರೆಯುತ್ತಿದ್ದವು. ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಇಂದಿರಾ ವಿರುದ್ಧ ರಾಜ್‌ರನ್ನು ಕಣಕ್ಕಿಳಿಸುವ ತೆರೆಮರೆ ಕಸರತ್ತುಗಳು ಬಿರುಸಾಗಿದ್ದವು. ಈ ಸುದ್ದಿ ಇಂದಿರಾ ಕಿವಿಗೆ ಬೀಳುತ್ತಿದ್ದಂತೆ ಒಮ್ಮೆಲೆ ಕಂಪಿಸಿ ಹೋದ ಉಕ್ಕಿನ ಮಹಿಳೆ ಕುಸಿದೇ ಬಿಟ್ಟರು. ಸೋಲು ಗ್ಯಾರಂಟಿ ಎಂದು ಭಾವಿಸಿಬಿಟ್ಟರು. ಆದರೆ ಇಂದಿರಾ ಗಾಂಧಿಯ ಅದೃಷ್ಟವೇನೋ ಗೊತ್ತಿಲ್ಲ ಡಾ. ರಾಜ್ ಚುನಾವಣೆಗೆ ನಿಲ್ಲಲು ನಾ ಒಲ್ಲೆ ಎಂದು ಬಿಟ್ಟರು.

ಹೌದು, ರಾಜ್ ಕುಮಾರ್ ಲೋಕ ಸಮರದಲ್ಲಿ ಸೆಣೆಸಲು ಕೊಂಚವೂ ಒಪ್ಪಲಿಲ್ಲ. ರಾಜಕಾರಣಿಗಳು ಎಷ್ಟರ ಮಟ್ಟಿಗೆ ರಾಜ್‌ರನ್ನು ಓಲೈಸಲು ಪ್ರಯತ್ನಿಸುತ್ತಿದ್ದರೆಂದರೆ, ಆ ಸಂದರ್ಭದಲ್ಲಿ ರಾಜ್ ಮತ್ತು ಪಾರ್ವತಮ್ಮ ಒಂದು ವಾರ ಕಾಲ ಒಬ್ಬರನ್ನೊಬ್ಬರು ಮಾತನಾಡಿಸಿಕೊಳ್ಳದಷ್ಟೂ ಸಾಧ್ಯವಾಗಿರಲಿಲ್ಲ. ಕಡೆಗೆ ಅವರ ಕಾಟ ತಾಳಲಾರದೆ ರಾಜಕಾರಣಿಗಳ ಕೈಗೆ ಸಿಗದಂತೆ ಅಜ್ಞಾತ ಸ್ಥಳದಲ್ಲಿದ್ದು ಬಿಡುತ್ತಿದ್ದರು. ಅದೆಲ್ಲಾ ಆದ ಬಳಿಕ ತಾನೇಕೆ ಚುನಾವಣೆಗೆ ಸ್ಪರ್ಧಿಸಲಿಲ್ಲ ಎಂಬ ಬಗ್ಗೆ ರಾಜ್ ಸಾರ್ವಜನಿಕವಾಗಿ ಎಲ್ಲೂ ಹೇಳಲಿಲ್ಲ. ಆದರೆ ರಾಜ್ ಕುಮಾರ್ ಈ ನಿರ್ಧಾರ ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿತು.

Advertisement
Advertisement