Dr Rajkumar: ಗೆಲುವು ನಿಶ್ಚಿತ ಎಂದು ಗೊತ್ತಿದ್ರೂ ಇಂದಿರಾ ವಿರುದ್ಧ ಡಾ. ರಾಜ್ ಕುಮಾರ್ ಸ್ಪರ್ಧೆ ಮಾಡಲಿಲ್ಲ, ಯಾಕೆ ?
Dr Rajkumar: 1978ರ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಉಪ ಚುನಾವಣೆ ಎಂದೆಂದಿಗೂ ಮರೆಯಲಾಗದ ಎಲೆಕ್ಷನ್. ಅದು ಕೂಡ ಎರಡೆರಡು ಕಾರಣಗಳಿಂದ. ಒಂದು ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ(Indhira Gandhi) ಅವರಿಗೆ ಪುನರ್ಜನ್ಮ ನೀಡಿದ ಚುನಾವಣೆ ಇದು. ಮತ್ತೊಂದು ಅವಕಾಶವಿದ್ದರೂ, ಗೆಲುವು ಪಕ್ಕಾ ಎಂದು ಗೊತ್ತಿದ್ದರೂ ಇಂದಿರಾ ವಿರುದ್ಧ ಡಾ. ರಾಜ್ ಕುಮಾರ್(Dr Rajkumar) ಸ್ಪರ್ಧಿಸಲಿಲ್ಲ ಎನ್ನುವ ವಿಚಾರದಿಂದ. ಆದರೆ ಈ ಚುನಾವಣೆಯಲ್ಲಿ ತಾನು ಗೆಲ್ಲುತ್ತೇನೆಂದು 100 % ಗೊತ್ತಿದ್ದರೂ ಯಾಕೆ ಸ್ಪರ್ಧೆ ಮಾಡಲಿಲ್ಲ ಎಂಬುದೇ ದೊಡ್ಡ ಪ್ರಶ್ನೆ. ಸದ್ಯ ಇದಕ್ಕೆ ಉತ್ತರ ಸಿಕ್ಕಿದ್ದು ಅವರ ಮಗ ರಾಘವೇಂದ್ರ ರಾಜ್ ಕುಮಾರ್ ಎಲ್ಲವನ್ನೂ ಹೇಳಿದ್ದಾರೆ.
ಇದನ್ನೂ ಓದಿ: Karnataka Rain: ಗುಡುಗು ಸಹಿತ ಭಾರೀ ಮಳೆಯ ಸಂಭವ; 40ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ
ಹೌದು, ರಾಷ್ಟ್ರ ರಾಜಕಾರಣದ ಚರಿತ್ರೆಯ ಪುಟಗಳಲ್ಲಿ ಚಿಕ್ಕಮಗಳೂರು ಲೋಕಸಭೆ(Chikkamagaluru Lokasabhe) ಕ್ಷೇತ್ರ ಅಚ್ಚಳಿಯದೆ ಉಳಿಯಲು ಕಾರಣ ಇಂದಿರಾ ಗಾಂಧಿ. ಯಾಕೆಂದರೆ ತುರ್ತು ಪರಿಸ್ಥಿತಿ ಬಳಿಕ ರಾಜಕೀಯವೇ ಮುಗಿದು ಹೋಯಿತು ಎಂದು ಭಾವಿಸಿದ್ದ, ಕಾಂಗ್ರೆಸ್(Congress) ಕಥೆ ಮುಗಿಯಿತು ಎಂದು ಭಾವಿಸಿಕೊಂಡಿದ್ದ, ಸ್ವಂತ ನೆಲದಲ್ಲಿಯೇ ಹೀನಾಯವಾಗಿ ಸೋತಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರನ್ನು ಗೆಲ್ಲಿಸಿ, ಕಾಂಗ್ರೆಸ್ ಪಕ್ಷಕ್ಕೂ ಪುನರ್ಜನ್ಮ ನೀಡಿದ ಕಾರಣಕ್ಕೆ ಇಡೀ ರಾಷ್ಟ್ರದ ಗಮನ ಸೆಳೆದ ಹೆಗ್ಗಳಿಕೆ ನಮ್ಮ ಕರ್ನಾಟಕದ ಕಾಫಿ ನಾಡು ಲೋಕಸಭಾ ಕ್ಷೇತ್ರಕ್ಕಿದೆ. ಆಶ್ರಯ ಕೊಟ್ಟಿದ್ದು ಚಿಕ್ಕಮಗಳೂರು. ಈ ಚುನಾವಣೆಯಲ್ಲಿ ಮತ್ತೆ ಇಂದಿರಾ ಗಾಂಧಿಯನ್ನು ಸೆದೆಬಡಿಯಲು ಪ್ರತಿಪಕ್ಷಗಳು ನಿಶ್ಚಯಿಸಿದ್ದವು. ಇದಕ್ಕಾಗಿ ಅವರಿಗೆ ಕಂಡದ್ದೇ ಡಾ ರಾಜ್ ಕುಮಾರ್.
ಇದನ್ನೂ ಓದಿ: Mandya: ಬೀದಿ ಬದಿ ಐಸ್‌ಕ್ರೀಂ ತಿಂದು ಅವಳಿ ಮಕ್ಕಳ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಮಕ್ಕಳಿಗೆ ತಾನೇ ವಿಷ ಉಣಿಸಿದ ತಾಯಿ !!
ಯಾಕೆಂದರೆ ಅಂದು ಕರ್ನಾಟಕದ ನೆಲದಲ್ಲಿ ರಾಜ್ ಕುಮಾರ್ ಬಿಟ್ಟರೆ ಇನ್ಯಾರೂ ಆ ರೀತಿಯ ವರ್ಚಸ್ಸಿನ ವ್ಯಕ್ತಿ ಇರಲಿಲ್ಲ ಹಾಗೂ ಇಂದಿರಾ ಅವರನ್ನು ಮಣಿಸಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಹಲವಾರು ರಾಜಕೀಯ ಪಕ್ಷಗಳು ರಾಜ್ ಕುಮಾರ್ ಅನ್ನು ಕಣಕ್ಕಿಳಿಸಲು ಹಾತೊರೆಯುತ್ತಿದ್ದವು. ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಇಂದಿರಾ ವಿರುದ್ಧ ರಾಜ್‌ರನ್ನು ಕಣಕ್ಕಿಳಿಸುವ ತೆರೆಮರೆ ಕಸರತ್ತುಗಳು ಬಿರುಸಾಗಿದ್ದವು. ಈ ಸುದ್ದಿ ಇಂದಿರಾ ಕಿವಿಗೆ ಬೀಳುತ್ತಿದ್ದಂತೆ ಒಮ್ಮೆಲೆ ಕಂಪಿಸಿ ಹೋದ ಉಕ್ಕಿನ ಮಹಿಳೆ ಕುಸಿದೇ ಬಿಟ್ಟರು. ಸೋಲು ಗ್ಯಾರಂಟಿ ಎಂದು ಭಾವಿಸಿಬಿಟ್ಟರು. ಆದರೆ ಇಂದಿರಾ ಗಾಂಧಿಯ ಅದೃಷ್ಟವೇನೋ ಗೊತ್ತಿಲ್ಲ ಡಾ. ರಾಜ್ ಚುನಾವಣೆಗೆ ನಿಲ್ಲಲು ನಾ ಒಲ್ಲೆ ಎಂದು ಬಿಟ್ಟರು.
ರಾಜಕಾರಣಿಗಳು ಎಷ್ಟರ ಮಟ್ಟಿಗೆ ರಾಜ್‌ರನ್ನು ಓಲೈಸಲು ಪ್ರಯತ್ನಿಸುತ್ತಿದ್ದರೆಂದರೆ, ಆ ಸಂದರ್ಭದಲ್ಲಿ ರಾಜ್ ಮತ್ತು ಪಾರ್ವತಮ್ಮ ಒಂದು ವಾರ ಕಾಲ ಒಬ್ಬರನ್ನೊಬ್ಬರು ಮಾತನಾಡಿಸಿಕೊಳ್ಳದಷ್ಟೂ ಸಾಧ್ಯವಾಗಿರಲಿಲ್ಲ. ಕಡೆಗೆ ಅವರ ಕಾಟ ತಾಳಲಾರದೆ ರಾಜಕಾರಣಿಗಳ ಕೈಗೆ ಸಿಗದಂತೆ ಅಜ್ಞಾತ ಸ್ಥಳದಲ್ಲಿದ್ದು ಬಿಡುತ್ತಿದ್ದರು. ಅದೆಲ್ಲಾ ಆದ ಬಳಿಕ ತಾನೇಕೆ ಚುನಾವಣೆಗೆ ಸ್ಪರ್ಧಿಸಲಿಲ್ಲ ಎಂಬ ಬಗ್ಗೆ ರಾಜ್ ಸಾರ್ವಜನಿಕವಾಗಿ ಎಲ್ಲೂ ಹೇಳಲಿಲ್ಲ. ಆದರೆ ರಾಜ್ ಕುಮಾರ್ ಈ ನಿರ್ಧಾರ ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿತು.
ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದೇನು?
1978ರ ಚುನಾವಣೆ ಬಳಿಕ ರಾಘವೇಂದ್ರ ರಾಜ್ ಕುಮಾರ್ ಸಹ ಅಪ್ಪಾಜಿ ಅವರ ಉತ್ತರಕ್ಕಾಗಿ ಬಹಳ ವರ್ಷ ಕಾಯಬೇಕಾಯಿತಂತೆ. "ಆಗ ತಾನು ದ್ವಿತೀಯ ಪಿಯುಸಿ ಮುಗಿಸಿ ವೈದ್ಯಕೀಯ ಶಿಕ್ಷಣಕ್ಕಾಗಿ ಪ್ರಿಪೇರ್ ಆಗುತ್ತಿದ್ದೆ. ಆಗ ಇದೇ ವಿಚಾರವನ್ನು ಅಪ್ಪಾಜಿ ಬಳಿ ಕೇಳುತ್ತಿದ್ದೆ. ಆಗ ಅಪ್ಪಾಜಿ, ನೀನಿನ್ನೂ ಚಿಕ್ಕವ, ಇದೆಲ್ಲಾ ನಿನಗೆ ಈಗ ಅರ್ಥವಾಗಲ್ಲ. ಈ ಬಗ್ಗೆ ಹೇಳಲು ಇದು ಸೂಕ್ತ ಸಮಯ ಅಲ್ಲ. ಸಮಯ ಬಂದಾಗ ತಿಳಿಸುತ್ತೇನೆ. ಕವಿರತ್ನ ಕಾಳಿದಾಸ ಸಿನಿಮಾದ ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ ಎಂದಿದ್ದರು'.
2005ರವರೆಗೂ ಆ ರಹಸ್ಯವನ್ನು ಅಪ್ಪಾಜಿ ಹೇಳಿರಲಿಲ್ಲ. "2005ರಲ್ಲಿ ಚೆನ್ನೈನಲ್ಲಿ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಆಗ ಆಸ್ಪತ್ರೆಯ ಕೊಠಡಿಗೆ ನನ್ನನ್ನು ಏಕಾಂತವಾಗಿ ಬರಲು ಹೇಳಿದರು. ಆಗ ಸುಮಾರು ವರ್ಷಗಳ ಹಿಂದೆ ನಾನು ಕೇಳಿದ್ದ ಪ್ರಶ್ನೆಯನ್ನು ನೆನಪಿಸುತ್ತಾ ಉತ್ತರ ಹೇಳಿದರು. ಅಪ್ಪಾಜಿ ಹೇಳಿದ್ದಿಷ್ಟು, "ಅವರು ನನ್ನನ್ನು ಸ್ಪರ್ಧಿಸಲು ಕೇಳಿದ್ದರ ಹಿಂದೆ ಪಾಸಿಟೀವ್ ಉದ್ದೇಶ ಇದ್ದಿದ್ದರೆ, ಖಂಡಿತ ಸ್ಪರ್ಧಿಸುತ್ತಿದ್ದೆ. ಆದರೆ ಅವರು ನನ್ನನ್ನೊಂದು ಅಸ್ತ್ರದಂತೆ ಬಳಸಲು ನೋಡಿದರು. ಗೋಕಾಕ್ ಚಳವಳಿಗೆ ಧುಮುಕಲು ಹೇಳಿದಾಗ (1978ರ ಚುನಾವಣೆಯ ಐದು ವರ್ಷಗಳ ಬಳಿಕ) ಹೆಮ್ಮೆಯಿಂದ ಭಾಗಿಯಾಗಿದ್ದೆ. ಆಗ ನನ್ನ ಪಾಲ್ಗೊಳ್ಳುವಿಕೆ ಅಗತ್ಯವಾಗಿ ಬೇಕಾಗಿತ್ತು. ಇದರಲ್ಲಿ ಸಕಾರಾತ್ಮಕ ಉದ್ದೇಶ ಅಡಗಿತ್ತು. ಆದರೆ ಚುನಾವಣೆಗೆ ನಾನು ಬೇಕಾಗಿರಲಿಲ್ಲ. ಬೇರೆ ಯಾರನ್ನೋ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸುವ ಪ್ರಯತ್ನ ಅದು. ನಾನು ಸ್ಪರ್ಧಿಸದಿದ್ದದ್ದೇ ಒಳ್ಳೆಯದಲ್ಲವೇ? ಎಂದು ಕೇಳಿದ್ದರು. ನೀವು ಯಾವೊತ್ತು ತಪ್ಪು ಮಾಡಿದ್ದೀರಿ ಅಪ್ಪಾಜಿ? ಎಂದು ಮರುಪ್ರಶ್ನಿಸಿದ್ದಾಗಿ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.