For the best experience, open
https://m.hosakannada.com
on your mobile browser.
Advertisement

Pavitra Gowda: ಪವಿತ್ರ ಗೌಡ ಯಾರು ? ಈ ಮಾಯಾಂಗನೆಗೆ ದರ್ಶನ್ ಫಿದಾ ಆಗಿದ್ದು ಹೇಗೆ..?

Pavitra Gowda: ದರ್ಶನ್ ಈಕೆಗೆ ಹೇಗೆ ತಗಲಾಕೊಂಡ್ರು? ಚಿನ್ನದಂತ ಹೆಂಡತಿಯನ್ನು ಬಿಟ್ಟು ಈ ಮಾಯಾಂಗೆ ಹಿಂದೆ ಬಿದ್ದದ್ದೇಕೆ? ಎಂಬ ಅನುಮಾನ ಹಲವರಿಗೆ ಕಾಡುತ್ತಿರಬಹುದು. ಅದೆಲ್ಲದಕ್ಕೂ ಇಲ್ಲಿದೆ ನೋಡಿ ಉತ್ತರ. Who is Pavithra Gowda ?
09:15 AM Jun 13, 2024 IST | ಸುದರ್ಶನ್
UpdateAt: 02:30 PM Jun 13, 2024 IST
pavitra gowda  ಪವಿತ್ರ ಗೌಡ ಯಾರು   ಈ ಮಾಯಾಂಗನೆಗೆ ದರ್ಶನ್ ಫಿದಾ ಆಗಿದ್ದು ಹೇಗೆ
Advertisement

Pavita Gowda: ರಾಜ್ಯದ ಯಾವ ಮಾಧ್ಯಮ, ಪತ್ರಿಕೆ ನೋಡಿದರೂ ಬರೀ ಅದೇ ಸುದ್ದಿ. ಇಡೀ ಚಿತ್ರರಂಗ ಮಾತ್ರವಲ್ಲ, ಕನ್ನಡಿಗರೇ ತಲೆ ತಗ್ಗಿಸುವಂತಹ ಅವಮಾನಕರ ಸುದ್ದಿ. ಕನ್ನಡಿಗರು ಮನೆ ಮಗನೆಂದು ಮೆರೆಸಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ n(Actor Darshan)ಅವರು ಅದೇ ಕನ್ನಡಿಗರ ಹೆಸರಿಗೆ ಮಸಿ ಬಳಿದ ಸುದ್ದಿ. ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲೇ ಸ್ಯಾಂಡಲ್ ವುಡ್ (Sandalwood)ನಟ, ಕನ್ನಡದ ನಟ ಎಂದು ಬಿತ್ತರಿಸುತ್ತಿರುವ ಸುದ್ದಿ. ಹೌದು, ರೇಣುಕಾ ಸ್ವಾಮಿ ಹತ್ಯೆ ಪ್ರಕರಣ (Renuka Swamy Murder Case) ಇಡೀ ನಾಡು ನಾಚಿಕೆ ಪಡುವಂತಹ ಸುದ್ದಿಯಾಗಿ ಹಬ್ಬಿ ಗಬ್ಬೆಬ್ಬಿಸುತ್ತಿದೆ.

Advertisement

ಕಟ್ಟಿಕೊಂಡ ಬಂಗಾರದಂತ ಹೆಂಡತಿಯನ್ನು ಬಿಟ್ಟು ಬೇರೆ ಇನ್ನಾಳಿಗಾಗಿಯೋ ಒಂದು ಅಮಾಯಕ ಜೀವವನ್ನೇ ಬಲಿ ಪಡೆದ, ಸದಾ ವಿವಾದದ ಸುಳಿಯಲ್ಲಿ ಸಿಲುಕಿ ಸಿಲುಕಿ ಚಿತ್ರರಂಗವನ್ನೇ ಗಬ್ಬೆಬ್ಬಿಸಿರುವ ಈ ಅಹಂಕಾರಿಯ ವಿಚಾರವನ್ನು ಮಾತನಾಡಲೇ ಅಸಹ್ಯ ಅನಿಸಿಬಿಡುತ್ತದೆ. ನಾಡಿನ ಕೋಟ್ಯಾಂತರ ಜನರ ಪ್ರೀತಿಗೆ ದ್ರೋಹ ಬಗೆದು, ಯಶಸ್ಸನ್ನು ಸಾಧಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಮುಖ್ಯ ಎನ್ನುವುದನ್ನ ಮರೆತು ವರ್ತಿಸುವ ಆ ದರ್ಪದ ನಟನ ಬಗ್ಗೆ ಬರೆಯಲೂ ಮನಸ್ಸು ಒಲ್ಲೆ ಎನ್ನುತ್ತದೆ. ಆದರೆ ವೃತ್ತಿ ಧರ್ಮ ಬಿಡಲೊಲ್ಲದು.

HSRP ನಂಬರ್ ಪ್ಲೇಟ್ ಅಳವಡಿಕೆಯ ಗಡುವು ಮತ್ತೆ ವಿಸ್ತರಣೆ, ಹೊಸ ಆದೇಶ !

Advertisement

ಏನೇ ಆಗಲಿ ಇಷ್ಟೆಲ್ಲಾ ರಾದ್ಧಾಂತಕ್ಕೆ ಮೂಲ ಕಾರಣ ಆ ಮಾಯಂಗನೆ ಪವಿತ್ರ ಗೌಡ(Pavitra gowda). ಒಬ್ಬ ನಟನನ್ನು ಹೇಗೆಲ್ಲಾ ಯೂಸ್ ಮಾಡಿಕೊಳ್ಳಬೇಕೋ ಹಾಗೆಲ್ಲಾ ಯೂಸ್ ಮಾಡಿಕೊಂಡು ಕೊನೆಗೆ ಕೊಲೆ ಮಾಡುವ ಹಂತಕ್ಕೆ ತಂದು ನಿಲ್ಲಿಸಿದ ಪುಣ್ಯಾತ್ಗಿತ್ತಿ ಆಕೆ. ಸೌಂದರ್ಯದ ಗಣಿಯೇ ನಾನು ಎಂದು ಮೆರೆಯುತ್ತಿದ್ದ ಈ ಲಲಲಾಮಣಿಯ ಸೊಕ್ಕು ಈಗ ಹೇಗೆ ಮುರಿಯುತ್ತಿದೆ ಎಂದು ನೋಡುತ್ತಿದ್ದೇವೆಲ್ಲಾ. ಮಾಡಿದ ಪಾಪ ಬಿಡುತ್ತದೆಯೇ? ಹಾಗಿದ್ರೆ ಈ ಪವಿತ್ರ ಯಾರು? ಈಕೆ ಈ ದರ್ಶನ್ ಗೆ ಹೇಗೆ ಗಂಟು ಬಿದ್ದಳು. ಅಥವಾ ದರ್ಶನ್ ಈಕೆಗೆ ಹೇಗೆ ತಗಲಾಕೊಂಡ್ರು? ಚಿನ್ನದಂತ ಹೆಂಡತಿಯನ್ನು ಬಿಟ್ಟು ಈ ಮಾಯಾಂಗೆ ಹಿಂದೆ ಬಿದ್ದದ್ದೇಕೆ? ಎಂಬ ಅನುಮಾನ ಹಲವರಿಗೆ ಕಾಡುತ್ತಿರಬಹುದು. ಅದೆಲ್ಲದಕ್ಕೂ ಇಲ್ಲಿದೆ ನೋಡಿ ಉತ್ತರ.

ಯಾರಿದು ಪವಿತ್ರಾ ಗೌಡ?
ಪವಿತ್ರಾ ಗೌಡ ಅವರು ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿ ಕಿತಾಬು ಇವರ ಜನಪ್ರಿಯ ಸಿನಿಮಾ. ಬತಾಸ್‌, ಛತ್ರಿಗಳು ಸಾರ್‌ ಛತ್ರಿಗಳು ಚಿತ್ರದಲ್ಲಿ ನಟಿಸಿದ್ದಾರೆ. ಈಕೆ ಇಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸಿದ್ದರೂ ಹೇಳಿಕೊಳ್ಳುವಂತಹ ನಟಿಯಲ್ಲಾ ಬಿಡಿ. ಈಕೆ ಮೂಲತಃ ಬೆಂಗಳೂರಿನ ಜೆಪಿ ನಗರದಾಕೆ. ಅವಕಾಶಕ್ಕಾಗಿ ಅಡ್ಡಾಡ್ತಿದ್ದ ಕಾಲದಲ್ಲಿಯೇ ಸ್ಕೋಡಾ ಕಾರಿನಲ್ಲೇ ಸವಾರಿ ಮಾಡುತ್ತಿದ್ದ ಪವಿತ್ರಳ ತಂದೆ ಬಿಲ್ಡರ್ ಎಂಬ ಮಾಹಿತಿಗಳಿವೆ.

ಅಂದಹಾಗೆ ಪದವಿ ಮುಗಿಯುತ್ತಲೇ ಮಾಡೆಲ್ ಆಗುವ ನಿಟ್ಟಿನಲ್ಲಿ ಪ್ರಯತ್ನ ಹಾಕಲಾರಂಭಿಸಿ ಮಾಡೆಲಿಂಗ್ ಜಗತ್ತಿಗೆ ಅಡಿಯಿರಿಸಿದಳು. ಆಕ್ಟೀವ್ ಆಗಿರುವ ಈ ಹುಡುಗಿ ಬಲು ಬೇಗನೆ ಆ ವಲಯದ ಎಲ್ಲರ ಗಮನ ಸೆಳೆದಳು. ಈ ಸುಂದರಿ ಅತೀ ಕಡಿಮೆ ಅವಧಿಯಲ್ಲೇ ಹಲವಾರು ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಮಾಡೆಲ್ ಲೋಕದಲ್ಲಿ ಮಿಸ್ ಬೆಂಗಳೂರು ಆಗಿಯೂ ಹೊರಹೊಮ್ಮಿದಳು. ನಂತರ ಕಾಡಿ ಬೇಡಿ ನಟನೆಗೂ ಬಂದುಬಿಟ್ಟಳು. ನಟಿಸಿದ ಸಿನಿಮಾಗಳು ಹೆಚ್ಚು ಮಕಾಡೆ ಮಲಗಿದವು.

ಇವಳು ನಟಿ ಆದರೂ ನಟನೆಗಿಂತ ದರ್ಶನ್‌ ಜತೆಗಿನ ಸಂಬಂಧದ ವಿಷಯದಲ್ಲೇ ಸುದ್ದಿಯಲ್ಲಿದ್ದದ್ದು ಹೆಚ್ಚು. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಾಮನ್‌ ಫ್ರೆಂಡ್‌ವೊಬ್ಬರ ನೆರವಿನಿಂದ ದರ್ಶನ್‌ ಮತ್ತು ಪವಿತ್ರಾ ಗೌಡ ಪರಿಚಯವಾಗಿತ್ತು ಎಂದು ಹೇಳಲಾಗಿದೆ. ದರ್ಶನ್‌ ಶೂಟಿಂಗ್‌ ಸೆಟ್‌ನಲ್ಲೂ ಪವಿತ್ರಾ ಗೌಡ ಆಗಾಗ ಕಾಣಿಸುತ್ತಿದ್ದರು. ಮೈಸೂರಿನ ಹೋಟೆಲ್‌ ಗಲಾಟೆ ವಿಷಯದಲ್ಲೂ ಪವಿತ್ರಾ ಗೌಡ ಹೆಸರು ಕೇಳಿಬಂದಿತ್ತು.

ಪವಿತ್ರ, ದರ್ಶನ್ ಗೆ ಹೇಗೆ ಪರಿಚಯವಾದಳು ?
ಇವಳ ಮೊದಲ ಗಂಡ ವೃತ್ತಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕೊರಿಯೋಗ್ರಾಫರ್ ಮತ್ತು ನಿರ್ದೇಶಕ. ಒಂದು ಕಾಲದಲ್ಲಿ ದರ್ಶನ್‌ರ ಬಹುತೇಕ ಸಿನಿಮಾಗಳಿಗೆ ಕೋರಿಯೋಗ್ರಫಿ ಮಾಡುತ್ತಿದ್ದದ್ದು ಇದೇ ಕಾಸ್ಟೂಮ್ ಡಿಸೈನರ್ ಅವರ ಗಂಡ ಆದುದರಿಂದ ಅವರ ಹೆಂಡತಿ ಕೂಡಾ ದರ್ಶನ್ ಅವರಿಗೆ ಪರಿಚಿತರೇ. ಈ ಪರಿಚಯದಿಂದ ದರ್ಶನ್ ಗೆ ಪರಿಚಯವಾದ ಪವಿತ್ರಾ ನಟ ದರ್ಶನ್ ನ ಜಗ್ಗು ದಾದಾ ಸಿನಿಮಾದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಡಲು ಹೋಗಿದ್ದಳಂತೆ.

ಬಿಸಿಗೆ ಕರಗಿತು ಬೆಣ್ಣೆ:
ಹೀಗೆ ಶುರುವಾದ ಸ್ನೇಹ, ಪ್ರೀತಿಯಾಯಿತು. ಬಣ್ಣದ ಗೊಂಬೆ ಥರ ಇದ್ದಳು ಪವಿತ್ರಾ. ಅವಳ ಹೊಳೆಯುವ ಮೈ ಬಣ್ಣವೇ ಸಾಕಿತ್ತು ದರ್ಶನ್ ಗೆ ಆಕೆ ಅಟ್ರಾಕ್ಟ್ ಆಗಲು. ಒಳ್ಳ್ಳೆಯ ಬೆಣ್ಣೆ ಮುದ್ದೆಯ ಮುಖದ ಚೆಲುವೆಯಾಕೆ. 2017ರಲ್ಲಿ ತಾರಕ್ ಚಿತ್ರದ ಬಿಡುಗಡೆಯ ಸಮಯದಲ್ಲಿ ಪವಿತ್ರಾ ಗೌಡ ತನ್ನ ಪ್ರಿಯಕರ ದರ್ಶನ್ ಜೊತೆ ತುಂಬಾ ಆತ್ಮೀಯವಾದ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮೊಟ್ಟ ಮೊದಲ ಬಾರಿ ವಿವಾದದ ಕಿಡಿಯನ್ನ ಹೊತ್ತಿಸಿ ದರ್ಶನ್ ದಾಂಪತ್ಯದಲ್ಲಿ ಬಿರುಗಾಳಿಯನ್ನೂ ಎಬ್ಬಿಸಿದ್ದಳು. ನಂತರದಲ್ಲಿ ಆಗಾಗ ಏನಾದರೂ ಒಂದು ವಿಚಾರಕ್ಕಾಗಿ ದರ್ಶನ್ ಜೊತೆ ಸುದ್ದಿಯಾಗುತ್ತಾ ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯಲು ತನ್ನ ಕೊಡುಗೆಯನ್ನೂ ನೀಡುತ್ತಿದ್ದಳು. ಇತ್ತೀಚೆಗೆ ಕಾಟೇರ ಯಶಸ್ಸಿನ ಸಂದರ್ಭದಲ್ಲಿ "ನನ್ನ ದರ್ಶನ್‌ ಸಂಬಂಧಕ್ಕೆ 10 ವರ್ಷಗಳು" ಎಂದು ಪೋಸ್ಟ್‌ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವೆ ಜಗಳವೂ ಆಗಿತ್ತು. ಮೊದಲ ಪತಿ ಮತ್ತು ಮಗಳ ಜೊತೆ ಪವಿತ್ರಾ ಗೌಡ ಇರುವ ಫೋಟೋಗಳನ್ನೂ ಸೋಷಿಯಲ್‌ ಮೀಡಿಯಾದಲ್ಲಿ ವಿಜಯಲಕ್ಷ್ಮೀ ದರ್ಶನ್ (Vijayalakshmi Darshan) ಹಂಚಿಕೊಂಡಿದ್ದರು.

ದರ್ಶನ್, ಪವಿತ್ರ ಮಗಳ ಜನ್ಮದಿನದ ಪಾರ್ಟಿ ವಿವಾದ:
ನಟ ದರ್ಶನ್ ಜನ್ಮದಿನಕ್ಕೆ ಪವಿತ್ರಾ ಗೌಡ ಅವರು ಭರ್ಜರಿ ಪಾರ್ಟಿ ಕೊಟ್ಟಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾದ ನಟಿಯೋರ್ವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಲೂ ವಿಜಯಲಕ್ಷ್ಮೀ ಅವರು ಆ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಅಷ್ಟೇ ಅಲ್ಲದೆ ಕೆಲ ತಿಂಗಳುಗಳ ಹಿಂದೆ ದರ್ಶನ್ ಅವರು ಪವಿತ್ರಾ ಗೌಡ ಮಗಳು ಖುಷಿಯ ಜನ್ಮದಿವನ್ನು ಆಚರಿಸಿದ್ದು, ಖುಷಿ ಜೊತೆಗೆ ದರ್ಶನ್ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಪವಿತ್ರಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು.

ಒಟ್ಟಿನಲ್ಲಿ ಸುಂದರವಾಗಿರೋ ಹೆಮ್ಮಾರಿ ದರ್ಶನ್ ಜೀವನದಲ್ಲಿ, ದಾಂಪತ್ಯ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ್ದು ಮಾತ್ರವಲ್ಲದೆ ದರ್ಶನ್ ನನ್ನು ಕೊಲೆ ಮಾಡಿಸುವ ಹಂತಕ್ಕೆ ತಂದು ನಿಲ್ಲಿಸಿದ್ದಾಳೆ. ಅಲ್ಲದೆ ಮದವೇರಿದ ನಟನಾಗಿದ್ದ ದರ್ಶನ್ ನ ಅಂಹಕಾರ ಅವರನ್ನು ಬೀದಿಗೆ ತಂದಿದೆ. ಇದರ ಪರಿಣಾಮ ಇನ್ನೂ ಮುಂದೆ ಇದೆ.

ಕೊಲೆ ಪ್ರಕರಣದ ಆರೋಪದ ನಂತರ ಇದೀಗ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ

Advertisement
Advertisement
Advertisement