For the best experience, open
https://m.hosakannada.com
on your mobile browser.
Advertisement

Devotional: ದೇವರ ಪೂಜಾ ಕೋಣೆಯಲ್ಲಿ ಯಾವ ವಸ್ತುಗಳನ್ನ್ನು ಇಟ್ಟರೆ ಅತ್ಯಂತ ಶುಭಧಾಯಕ?

12:59 PM Jul 28, 2024 IST | ಸುದರ್ಶನ್
UpdateAt: 01:15 PM Jul 28, 2024 IST
devotional  ದೇವರ ಪೂಜಾ ಕೋಣೆಯಲ್ಲಿ ಯಾವ ವಸ್ತುಗಳನ್ನ್ನು ಇಟ್ಟರೆ ಅತ್ಯಂತ ಶುಭಧಾಯಕ
Advertisement

Devotional: ಮನೆಯಲ್ಲಿನ ದೇವರ ಕೋಣೆಯು ದೇವರು ಮತ್ತು ದೇವತೆಗಳ ವಾಸಸ್ಥಾನವಾಗಿದೆ. ದೇವರ ಕೋಣೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದು ನಿಮ್ಮ ಸಮಸ್ಯೆಗಳನ್ನು ದೂರಾಗಿಸುತ್ತದೆ.

Advertisement

ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಸ್ಥಳಗಳಿಗ ಸಂಬಂಧಿಸಿದಂತೆ ವಿವಿಧ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದೇ ರೀತಿ ಮನೆಯಲ್ಲಿನ ದೇವರ ಕೋಣೆಗೂ ಕೆಲವೊಂದು ನಿಯಮಗಳನ್ನು ಹೇಳಲಾಗಿದೆ. ಶಾಸ್ತ್ರದಲ್ಲಿನ ಈ ನಿಯಮಗಳ ಪ್ರಕಾರ ದೇವರ ಕೋಣೆಯನ್ನು ಇಟ್ಟುಕೊಳ್ಳುವುದರಿಂದ ಅಥವಾ ದೇವರ ಕೋಣೆಯಲ್ಲಿ ಈ ನಿಯಮಗಳ ಪ್ರಕಾರ ಇರುವುದರಿಂದ ನಮ್ಮ ಜೀವನದಲ್ಲಿನ ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರಗಳನ್ನು ಪಡೆದುಕೊಳ್ಳಬಹುದಾಗಿದೆ. ದೇವರ ಕೋಣೆಯಲ್ಲಿ ನಾವು ಯಾವ ವಸ್ತುಗಳನ್ನು ಇಟ್ಟುಕೊಳ್ಳುವುದು ಶುಭ.?

1. ಕಲಶವನ್ನು ಇಡಿ:
ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ನಾವು ನಮ್ಮ ಮನೆಯ ದೇವರ ಕೋಣೆಯಲ್ಲಿ ಮಂಗಳಕರ ಸೂಚನೆಯಾದ ಕಲಶವನ್ನು ಶುಭ ಸೂಚನೆಯಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ .ಕಲಶವನ್ನು ಮನೆಯಲ್ಲಿಟ್ಟುಕೊಳ್ಳುವುದು ಇದು ಒಂದು ರೀತಿಯಲ್ಲಿ ವ್ಯಕ್ತಿಯಿಂದ ಎಲ್ಲಾ ತೊಂದರೆಗಳನ್ನು ತೊಡೆದುಹಾಕುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚು ಮಾಡುತ್ತದೆ.ಮನೆಯ ದೇವರ ಕೋಣೆಯಲ್ಲಿ ನಾವು ಕಲಶವನ್ನು ಇಟ್ಟು ನಾವು ದೇವರ ಭಕ್ತಿ ಮಾಡಿದರೆ ಲಕ್ಷ್ಮಿ ದೇವಿಯ ಆಶೀರ್ವಾದವು ಭಕ್ತನ ಮೇಲೆ ಸದಾ ಇರುತ್ತದೆ. ಹೀಗೆ ಮಾಡುವುದರಿಂದ ಅವನು ಯಾವುದೇ ರೀತಿಯ ಹಣದ ಸಂಬಂಧಿತ ಸಮಸ್ಯೆಗಳನ್ನು ಎದುರಿಸುವುದು ತಪ್ಪುತ್ತದೆ.

Advertisement

2. ಈ ಪವಿತ್ರ ವಸ್ತುಗಳನ್ನು ಇಡಿ:
ಹಿಂದೂ ಧರ್ಮದಲ್ಲಿ ಗಂಗಾಜಲವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಗಂಗಾ ಸ್ನಾನ ಮಾಡದರೆ ಒಳ್ಳೆಯದಾಗುತ್ತದೆ ಎಂದು ನಾವು ಪೂರ್ವಜರಿಂದ ತಿಳಿದುಬಂದಿದ್ದೇವೆ.ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಗಂಗಾಜಲವನ್ನು ಇಟ್ಟುಕೊಳ್ಳಬಹುದು. ಇದನ್ನು ಇಡುವುದರಿಂದ ದೇವರು ಮತ್ತು ದೇವತೆಗಳ ಆಶೀರ್ವಾದ ಸದಾ ಭಕ್ತನ ಮೇಲೆ ಮತ್ತು ಆತನ ಕುಟುಂಬದ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ.ಗಂಗಾ ಜಲವನ್ನು ಹೊರತುಪಡಿಸಿ ನೀವು ದೇವರ ಕೋಣೆಯಲ್ಲಿ ಶಂಖವನ್ನು ಕೂಡ ಇಡಬಹುದು. ಶಂಖ ನಾದವನ್ನು ಮಂಗಳಕರ ಸ್ವರವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ದಕ್ಷಿಣಾವರ್ತಿ ಶಂಖವಿದ್ದರೆ ಅದರಲ್ಲಿ ನೀರನ್ನು ತುಂಬಿಸಿ, ಆ ಶಂಖವನ್ನು ಮನೆಯ ದೇವರ ಕೋಣೆಯಲ್ಲಿ ಇಟ್ಟುಕೊಳ್ಳುವುದರಿಂದ ಶುಭ ಫಲಗಳು ದೊರೆಯುತ್ತವೆ. ಇದು ನಿಮ್ಮ ಮೇಲೆ ಲಕ್ಷ್ಮಿ ದೇವಿಯ ಅಪಾರ ಅನುಗ್ರಹ ಇರುವಂತೆಯೂ ಮಾಡುತ್ತದೆ.

3. ತುಳಸಿಯನ್ನು ಇಡಿ:
ತುಳಸಿ ಗಿಡದೊಂದಿಗೆ ನೀವು ಸಾಲಿಗ್ರಾಮವನ್ನು ಸಹ ಇಡಬಹುದು. ಅಥವಾ ಸಾಲಿಗ್ರಾಮವನ್ನಿಟ್ಟು ಅದಕ್ಕೆ ತುಳಸಿಯನ್ನೂ ಅರ್ಪಿಸಬಹುದು.ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಎಲೆಗಳನ್ನು ಮುಖ್ಯವಾಗಿ ವಿಷ್ಣು ಮತ್ತು ಗಣಪನ ಪೂಜೆಯಲ್ಲಿ ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತುಳಸಿಯನ್ನು ನಿಮ್ಮ ದೇವರ ಕೋಣೆಯಲ್ಲಿ ಇಟ್ಟುಕೊಂಡರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ದೇವರ ಕೋಣೆಯಲ್ಲಿ ಇಡುವುದರಿಂದ ನಿಮ್ಮ ಮನೆಯ ದೇವರ ಕೋಣೆ ಪಾವಿತ್ರತೆಯು ಮತ್ತಷ್ಟು ಹೆಚ್ಚಾಗುತ್ತದೆ. ತುಳಸಿ ಗಿಡದೊಂದಿಗೆ ನೀವು ಸಾಲಿಗ್ರಾಮವನ್ನು ಸಹ ಇಡಬಹುದು. ಅಥವಾ ಸಾಲಿಗ್ರಾಮವನ್ನಿಟ್ಟು ಅದಕ್ಕೆ ತುಳಸಿಯನ್ನೂ ಅರ್ಪಿಸಬಹುದು.

ಓದುಗರೇ ನೀವು, ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ಮೇಲಿನ ವಸ್ತುಗಳನ್ನು ಇಡುವುದರಿಂದ ಮಂಗಳಕರ ಅಥವಾ ಶುಭ ಫಲಿತಾಂಶಗಳನ್ನು ಪಡೆದುಕೊಳ್ಳವಿರಿ. ಮತ್ತು ದೇವರು ಮತ್ತು ದೇವತೆಗಳ ಆಶೀರ್ವಾದ ನಿಮಗೆ ಸದಾ ಇರುತ್ತದೆ. ಇವುಗಳಿಂದ ನಿಮ್ಮ ಜೀವನದಲ್ಲಿರುವ ಆರ್ಥಿಕ ಸಮಸ್ಯೆ ಕಷ್ಟಗಳು ದೂರಾಗಬಹುದು..

Advertisement
Advertisement
Advertisement