For the best experience, open
https://m.hosakannada.com
on your mobile browser.
Advertisement

Money: ಗುಡ್ ನ್ಯೂಸ್: ನಿಮ್ಮ FD ಗೆ ಯಾವ ಬ್ಯಾಂಕ್ ಹೆಚ್ಚು ಬಡ್ಡಿದರ ನೀಡಲಿದೆ ತಿಳಿಯಬೇಕಾ? ಇಲ್ಲಿದೆ ಪ್ರಮುಖ ಬ್ಯಾಂಕ್‌ಗಳ FD ಬಡ್ಡಿದರ ಲಿಸ್ಟ್ !

Money: ಜೂನ್ ತಿಂಗಳಲ್ಲಿ ಹಿರಿಯ ನಾಗರಿಕರಿಗೆ ಯಾವ ಬ್ಯಾಂಕ್‌ಗಳು ಅತಿ ಹೆಚ್ಚು FD ದರಗಳನ್ನು ನೀಡುತ್ತಿವೆ ಮತ್ತು ಅವು ಯಾವುದೆಂದು ಈ ಕೆಳಗೆ ಪಟ್ಟಿ ಮಾಡಲಾಗಿದೆ.
02:56 PM Jun 10, 2024 IST | ಕಾವ್ಯ ವಾಣಿ
UpdateAt: 02:56 PM Jun 10, 2024 IST
money  ಗುಡ್ ನ್ಯೂಸ್  ನಿಮ್ಮ fd ಗೆ ಯಾವ ಬ್ಯಾಂಕ್ ಹೆಚ್ಚು ಬಡ್ಡಿದರ ನೀಡಲಿದೆ ತಿಳಿಯಬೇಕಾ  ಇಲ್ಲಿದೆ ಪ್ರಮುಖ ಬ್ಯಾಂಕ್‌ಗಳ fd ಬಡ್ಡಿದರ ಲಿಸ್ಟ್
Advertisement

Money: ಪ್ರತಿಯೊಬ್ಬರೂ ತಮ್ಮ FD ಮೇಲೆ ಹೆಚ್ಚು ಬಡ್ಡಿದರ ನಿರೀಕ್ಷೆ ಮಾಡುವುದು ಸಹಜ. ಇನ್ನು ನಿಯಮ ಪ್ರಕಾರ ಸಾಮಾನ್ಯವಾಗಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ, ಬ್ಯಾಂಕ್, ಸಹಕಾರಿ ಬ್ಯಾಂಕುಗಳು ಮತ್ತು ಅಂಚೆ ಕಚೇರಿ ಠೇವಣಿಗಳಿಂದ ಗಳಿಸಿದ ಬಡ್ಡಿಯ ಮೇಲೆ ಹಿರಿಯ ನಾಗರಿಕರು ವಿನಾಯಿತಿ ಪಡೆಯುತ್ತಾರೆ. ಅದಲ್ಲದೆ ಸ್ಥಿರ ಠೇವಣಿಗಳು ಅನೇಕರಿಗೆ ಅತ್ಯುತ್ತಮ ಹೂಡಿಕೆಯ ಆಯ್ಕೆಯಾಗಿ ಮಾರ್ಪಟ್ಟಿವೆ. ಕಳೆದ ಕೆಲವು ತಿಂಗಳುಗಳಿಂದ ಕೆಲವು ಬ್ಯಾಂಕ್ FD ಗಳು ಉತ್ತಮ ಬಡ್ಡಿಯನ್ನು ನೀಡುತ್ತಿವೆ. ಅದರಲ್ಲೂ ಜೂನ್ ತಿಂಗಳಲ್ಲಿ ಹಿರಿಯ ನಾಗರಿಕರಿಗೆ ಯಾವ ಬ್ಯಾಂಕ್‌ಗಳು ಅತಿ ಹೆಚ್ಚು FD ದರಗಳನ್ನು ನೀಡುತ್ತಿವೆ ಮತ್ತು ಅವು ಯಾವುದೆಂದು ಈ ಕೆಳಗೆ ಪಟ್ಟಿ ಮಾಡಲಾಗಿದೆ.

Advertisement

Yuvaraj Kumar And Shridevi; ಯುವ ರಾಜ್‌ ಕುಮಾರ್‌-ಶ್ರೀದೇವಿ ದಾಂಪತ್ಯ ಅಂತ್ಯ; ವಿಚ್ಛೇದನಕ್ಕೆ ಅರ್ಜಿ

ಸಾರ್ವಜನಿಕ ವಲಯದ ಬ್ಯಾಂಕ್‌: ಬ್ಯಾಂಕ್ ಆಫ್ ಬರೋಡಾವು ಹಿರಿಯ ನಾಗರಿಕರಿಗೆ ಎರಡರಿಂದ ಮೂರು ವರ್ಷಗಳ ಎಫ್‌ಡಿಗಳಲ್ಲಿ 7.75% ರಷ್ಟು ಹೆಚ್ಚಿನ ಬಡ್ಡಿದರವನ್ನು (Money) ನೀಡುತ್ತಿದೆ.
ಬ್ಯಾಂಕ್ ಆಫ್ ಇಂಡಿಯಾ 666 ದಿನಗಳ FD ಮೇಲೆ 7.80% ಬಡ್ಡಿಯನ್ನು ಪಾವತಿಸುತ್ತಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ 400 ದಿನಗಳ FD ಮೇಲೆ 7.60% ಬಡ್ಡಿಯನ್ನು ಪಾವತಿಸುತ್ತಿದೆ.
ಕೆನರಾ ಬ್ಯಾಂಕ್ 444 ದಿನಗಳ FD ಮೇಲೆ 7.75% ಬಡ್ಡಿಯನ್ನು ನೀಡುತ್ತದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಇಂಡಿಯನ್ ಬ್ಯಾಂಕ್, ಇಂಡ್ ಸೂಪರ್ ಸ್ಕೀಮ್ ಅಡಿಯಲ್ಲಿ 555 ದಿನಗಳ FD ಮೇಲೆ 7.75% ಮತ್ತು 400 ದಿನಗಳ FD ಮೇಲೆ 6.60% ಬಡ್ಡಿದರವನ್ನು ನೀಡುತ್ತದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 444 ದಿನಗಳ FD ಮೇಲೆ 7.80% ಬಡ್ಡಿಯನ್ನು ನೀಡುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ 400 ದಿನಗಳ FD ಮೇಲೆ 7.75% ಬಡ್ಡಿಯನ್ನು ನೀಡುತ್ತಿದೆ.
ಪಂಜಾಬ್ & ಸಿಂಧ್ ಬ್ಯಾಂಕ್ 444 ದಿನಗಳ FD ಮೇಲೆ 7.75% ಬಡ್ಡಿಯನ್ನು ನೀಡುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಮೃತ್ ಕಲಶ ಯೋಜನೆಯಡಿ 400 ದಿನಗಳ FD ಮೇಲೆ 7.60% ಬಡ್ಡಿದರವನ್ನು ನೀಡುತ್ತಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 399 ದಿನಗಳ ಅವಧಿಗೆ 7.75% ಬಡ್ಡಿದರವನ್ನು ನೀಡುತ್ತಿದೆ.

Advertisement

ಸಣ್ಣ ಹಣಕಾಸು ಬ್ಯಾಂಕ್‌ಗಳು:
AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 18 ತಿಂಗಳ ಅವಧಿ ಗೆ 8.50% ಬಡ್ಡಿದರವನ್ನು ನೀಡುತ್ತದೆ.
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 9.00% ಬಡ್ಡಿದರವನ್ನು 444 ದಿನಗಳವರೆಗೆ ನೀಡುತ್ತದೆ.
ESAF ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ವರ್ಷದಿಂದ 3 ವರ್ಷಗಳವರೆಗೆ 8.75% ಬಡ್ಡಿದರವನ್ನು ನೀಡುತ್ತದೆ. ಜನ ಸಣ್ಣ ಹಣಕಾಸು ಬ್ಯಾಂಕ್ 365 ದಿನಗಳವರೆಗೆ 9.00% ಬಡ್ಡಿದರವನ್ನು ನೀಡುತ್ತದೆ.
ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 546 ದಿನಗಳಿಂದ 1111 ದಿನಗಳವರೆಗೆ 9.50% ಬಡ್ಡಿಯನ್ನು ನೀಡುತ್ತಿದೆ.
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ವರ್ಷದಿಂದ 3 ವರ್ಷಗಳವರೆಗೆ 9.10% ಬಡ್ಡಿಯನ್ನು ನೀಡುತ್ತಿದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 15 ತಿಂಗಳಿಗೆ 9.00% ಬಡ್ಡಿಯನ್ನು ನೀಡುತ್ತಿದೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 1001 ದಿನಗಳವರೆಗೆ 9.50% ಬಡ್ಡಿಯನ್ನು ನೀಡುತ್ತದೆ.
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ವರ್ಷದಿಂದ 3 ವರ್ಷಗಳವರೆಗೆ 1500 ದಿನಗಳ ಅವಧಿಗೆ 9.10% ಬಡ್ಡಿ ದರವನ್ನು ನೀಡುತ್ತದೆ.

ಖಾಸಗಿ ಬ್ಯಾಂಕ್‌ಗಳು:
ಹಿರಿಯ ನಾಗರಿಕರಿಗೆ ಆಕ್ಸಿಸ್ ಬ್ಯಾಂಕ್‌ 17 ತಿಂಗಳಿಂದ 18 ತಿಂಗಳ ಅವಧಿಗೆ 7.85% ಬಡ್ಡಿ ನೀಡುತ್ತದೆ.
ಬಂಧನ್ ಬ್ಯಾಂಕ್ 1 ವರ್ಷಕ್ಕೆ 8.35% ಬಡ್ಡಿಯನ್ನು ನೀಡುತ್ತಿವೆ.
ಸಿಟಿ ಯೂನಿಯನ್ ಬ್ಯಾಂಕ್ 400 ದಿನಗಳಿಗೆ 7.75% ಬಡ್ಡಿಯನ್ನು ನೀಡುತ್ತದೆ.
CSB ಬ್ಯಾಂಕ್ 7.75% ಬಡ್ಡಿಯನ್ನು 401 ಅವಧಿಗೆ ನೀಡುತ್ತದೆ.
DBS ಬ್ಯಾಂಕ್ 8.00% ಬಡ್ಡಿ 376 ದಿನಗಳಿಂದ 540 ದಿನಗಳ ಅವಧಿಗೆ ನೀಡುತ್ತದೆ.
DCB ಬ್ಯಾಂಕ್ 19 ತಿಂಗಳಿಂದ 20 ತಿಂಗಳವರೆಗೆ 8.55% ಬಡ್ಡಿದರವನ್ನು ನೀಡುತ್ತದೆ.
ಫೆಡರಲ್ ಬ್ಯಾಂಕ್ 400 ದಿನಗಳ ಅವಧಿಗೆ 7.90% ಬಡ್ಡಿ ಪಾವತಿಸುತ್ತಿದೆ.
HDFC ಬ್ಯಾಂಕ್ 18 ತಿಂಗಳಿಂದ 21 ತಿಂಗಳವರೆಗೆ 7.75% ಬಡ್ಡಿದರವನ್ನು ನೀಡುತ್ತದೆ.
ICICI 15 ತಿಂಗಳಿಂದ 2 ವರ್ಷಗಳವರೆಗೆ FD ಗಳ ಮೇಲೆ 7.75% ಬಡ್ಡಿದರವನ್ನು ನೀಡುತ್ತದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ 500 ದಿನಗಳವರೆಗೆ 8.40% ಬಡ್ಡಿದರವನ್ನು ನೀಡುತ್ತದೆ.
ಇಂಡಸ್ ಇಂಡಸ್ 15 ತಿಂಗಳಿಂದ 16 ತಿಂಗಳವರೆಗೆ ಅಥವಾ 30 ತಿಂಗಳಿಂದ 31 ತಿಂಗಳವರೆಗೆ 8.25% ಬಡ್ಡಿದರವನ್ನು ನೀಡುತ್ತದೆ.
ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ 1 ವರ್ಷದಿಂದ 2 ವರ್ಷಗಳವರೆಗೆ 7.55% ಬಡ್ಡಿಯನ್ನು ಪಾವತಿಸುತ್ತಿದೆ. ಕರೂರ್ ವೈಶ್ಯ ಬ್ಯಾಂಕ್ 444 ದಿನಗಳವರೆಗೆ 8.00% ಬಡ್ಡಿಯನ್ನು ಪಾವತಿಸುತ್ತಿದೆ.

ಕರ್ಣಾಟಕ ಬ್ಯಾಂಕ್ 375 ದಿನಗಳಿಗೆ 7.80% ಬಡ್ಡಿ ನೀಡುತ್ತೆ.
ಕೋಟಕ್ ಮಹೀಂದ್ರಾ ಬ್ಯಾಂಕ್ 390 ದಿನಗಳಿಂದ 23 ತಿಂಗಳವರೆಗೆ 7.90% ಬಡ್ಡಿಯನ್ನು ನೀಡುತ್ತಿದೆ.
RBL ಬ್ಯಾಂಕ್ 18 ತಿಂಗಳಿಂದ 2 ವರ್ಷಗಳ ಅವಧಿಗೆ 8.50% ಬಡ್ಡಿದರವನ್ನು ನೀಡುತ್ತಿದೆ.
SBM ಬ್ಯಾಂಕ್ 3 ವರ್ಷಗಳ 2 ದಿನಗಳ ಅವಧಿಗೆ 8.75% ಬಡ್ಡಿದರವನ್ನು ನೀಡುತ್ತಿದೆ.
ಸೌತ್ ಇಂಡಿಯನ್ ಬ್ಯಾಂಕ್ 400 ದಿನಗಳವರೆಗೆ 7.75% ಬಡ್ಡಿ ನೀಡುತ್ತೆ.
ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ 8.00% ಬಡ್ಡಿಯನ್ನು 400 ದಿನಗಳಿಗೆ ನೀಡುತ್ತೆ.
ಯೆಸ್ ಬ್ಯಾಂಕ್ 8.50% ಬಡ್ಡಿಯನ್ನು 18 ತಿಂಗಳ ಅವಧಿಗೆ ನೀಡುತ್ತೆ .

PM Modi: ಅಧಿಕಾರದ ಮೊದಲ ದಿನವೇ ರೈತರ ಖಾತೆಗೆ 20,000 ಕೋಟಿ ಜಮೆ ಮಾಡಿಸಿದ ಮೋದಿ !!

Advertisement
Advertisement
Advertisement