Alcohol: ನೀವು ಕುಡಿಯೋ ಎಣ್ಣೆ ಬ್ರಾಂಡ್ ಗಳು ಸಸ್ಯಹಾರಿಯೋ ಇಲ್ಲಾ ಮಾಂಸಹಾರಿಯೋ ?! ಇಲ್ಲಿದೆ ನೋಡಿ ಯಾವ ಮದ್ಯಪ್ರಿಯರಿಗೂ ತಿಳಿಯದ ಅಚ್ಚರಿ ವಿಷ್ಯ !!
Alcohol: ಆಹಾರ ಪದಾರ್ಥಗಳಲ್ಲಿ ನಾವು ವೆಜ್ ಅಥವಾ ನಾನ್ ವೆಜ್ ಅಂದರೆ ಸಸ್ಯಹಾರಿ ಇಲ್ಲ ಮಾಂಸಹಾರಿ(Veg or Non-Veg) ಎಂದು ಪರಿಗಣಿಸಲಾಗುತ್ತದೆ. ಆದರೆ ಆಲ್ಕೋಹಾಲ್(Alcohol) ವಿಚಾರದಲ್ಲೂ ಈ ರೀತಿ ಪರಿಗಣನೆ ಇದೆ ಅನ್ನೋದು ಗೊತ್ತಿದೆಯಾ ? ಇದು ಯಾವ ಮದ್ಯಪ್ರಿಯರಿಗೂ ಕೂಡ ಗೊತ್ತಿಲ್ಲ. ಹಾಗಿದ್ರೆ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ವಾಸ್ತವವಾಗಿ, ಆಲ್ಕೋಹಾಲ್'ನ್ನ ಸಾಮಾನ್ಯವಾಗಿ ಸಂಪೂರ್ಣ ಸಸ್ಯಾಹಾರಿ ಆಹಾರವೆಂದು ಪರಿಗಣಿಸಲಾಗುತ್ತದೆ. ವೋಡ್ಕಾ, ಜಿನ್, ರಮ್, ಟಕಿಲಾ ಸಂಪೂರ್ಣ ಸಸ್ಯಾಹಾರಿಯೇ. ಯಾಕಂದ್ರೆ, ಅವುಗಳನ್ನು ಹಣ್ಣುಗಳು ಅಥವಾ ಧಾನ್ಯಗಳಿಂದ ತಯಾರಿಸಲಾಗುತ್ತದೆ.
ಆದರೆ ವೈನ್(Vain) ಮತ್ತು ಬಿಯರ್'(Beer)ನಂತಹ ಆಲ್ಕೋಹಾಲ್ ಮಾಂಸಾಹಾರಿ ಎಂದು ಕೆಲವು ವರದಿಗಳು ಹೇಳುತ್ತವೆ. ವಾಸ್ತವವಾಗಿ, ಇವುಗಳ ತಯಾರಿಕೆಯಲ್ಲಿ ಜೆಲ್ಟಿನ್, ಗಾಜು ಮತ್ತು ಮೊಟ್ಟೆಗಳನ್ನ ಬಳಸಲಾಗುತ್ತದೆ. ಹೀಗಾಗಿ ಇದು ಮಾಂಸಾಹಾರಿ ವರ್ಗಕ್ಕೆ ಸೇರುತ್ತದೆ.
ಸಾಮಾನ್ಯವಾಗಿ ಆಹಾರವು ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ ಎಂದು ಗುರುತಿಸಲು ಕೆಂಪು, ಹಸಿರು ಚಿಹ್ನೆಯನ್ನ ಮುದ್ರಿಸಲಾಗುತ್ತದೆ. ನಾವು ಈ ರೀತಿಯ ವಿಷಯಗಳನ್ನ ದಿನನಿತ್ಯ ನೋಡುತ್ತೇವೆ. ಆದರೆ ಆಲ್ಕೋಹಾಲ್ ವಿಷಯದಲ್ಲಿ ಹಾಗಲ್ಲ. ಈ ಬಗ್ಗೆ ನಮಗೆ ಯಾವುದೇ ಚಿಹ್ನೆಗಳು ಕಾಣುವುದಿಲ್ಲ. ಆದ್ದರಿಂದ ಮದ್ಯ ಸೇವಿಸುವ ಮೊದಲು, ಅದು ಯಾವುದರಿಂದ ಮಾಡಲ್ಪಟ್ಟಿದೆ ಎಂಬುದನ್ನ ಮೊದಲು ಗಮನಿಸಬೇಕು. ನಂತರ ಆ ಆಲ್ಕೋಹಾಲ್ ವೆಜ್ ಅಥವಾ ನಾನ್-ವೆಜ್ ಎಂದು ಕರೆಯಲಾಗುತ್ತದೆ.