ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mahayana New Year: ಮಹಾಯಾನ ಹೊಸ ವರ್ಷ ಯಾವಾಗ ಗೊತ್ತಾ? ಹೇಗೆ ಆಚರಿಸಲಾಗುತ್ತದೆ??

04:33 PM Jan 04, 2024 IST | ಅಶ್ವಿನಿ ಹೆಬ್ಬಾರ್
UpdateAt: 04:33 PM Jan 04, 2024 IST
Advertisement

Mahayana New Year 2024: ಬೌದ್ಧಧರ್ಮದಲ್ಲಿ ಹೀನಾಯಾನ ಮತ್ತು ಮಹಾಯಾನ ಎಂಬ ಎರಡು ಪಂಗಡಗಳಿದ್ದು, ಮಹಾಯಾನ ಬೌದ್ಧರು ಪ್ರತಿ ವರ್ಷ ಜನವರಿ ತಿಂಗಳಲ್ಲಿ ಬರುವ Buddhist New Year ,ಹುಣ್ಣಿಮೆಯಂದು ಹೊಸ ವರ್ಷ(New Year)ಆಚರಿಸುತ್ತಾರೆ.

Advertisement

 

ಈ ವರ್ಷ ಜನವರಿ 25, ಗುರುವಾರದಂದು ಮಹಾಯಾನ ಹೊಸ ವರ್ಷ(Mahayana New Year )ಬರಲಿದೆ. ಬೌದ್ಧ ದೇವಾಲಯಕ್ಕೆ ಈ ದಿನ ಜನರು ಭೇಟಿ ನೀಡುತ್ತಾರೆ. ಗೌತಮ ಬುದ್ಧನ ಪ್ರತಿಮೆ ಮೇಲೆ ನೀರು ಸುರಿದು ಹೊಸ ಜೀವನ ಮತ್ತು ಹೊಸ ಆರಂಭದ ಕುರಿತು ಬುದ್ಧನಲ್ಲಿ ಪ್ರಾರ್ಥನೆ ಮಾಡುತ್ತಾರೆ. ತಾವು ಮಾಡಿದ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಬುದ್ಧನ ಪ್ರತಿಮೆ ಮೇಲೆ ನೀರಿನ ಅಭಿಷೇಕ ಮಾಡುವ ಮೂಲಕ ನಕಾರಾತ್ಮಕ ಆಲೋಚನೆಗಳನ್ನು ದೂರ ಇಡಬಹುದು ಎಂದು ನಂಬಲಾಗಿದೆ. ಈ ಸಂದರ್ಭ ಮನೆಗಳನ್ನು ಸ್ವಚ್ಛಗೊಳಿಸಿ, ಅಲಂಕರಿಸಿ, ಆತ್ಮೀಯರಿಗೆ ಉಡುಗೊರೆಗಳನ್ನು ಕೊಟ್ಟು ಮಧ್ಯರಾತ್ರಿ ಪಟಾಕಿಗಳನ್ನು ಹಚ್ಚಿ ಈ ಹಬ್ಬದ ಆಚರಣೆ ಮಾಡುತ್ತಾರೆ.

Advertisement

 

ಮಹಾಯಾನ ಬೌದ್ಧರು ಜ್ಞಾನೋದಯ ಅಥವಾ ಶಾಶ್ವತವಾದ ನಿರ್ವಾಣವನ್ನು ಒಬ್ಬರು ತಮ್ಮ ಜೀವಿತಾವಧಿಯಲ್ಲಿಯೇ ಸಾಧಿಸಬಹುದು ಎಂಬ ನಂಬಿಕೆ(Buddha Worship) ಹೊಂದಿರುತ್ತಾರೆ. ಪ್ರತಿಯೊಬ್ಬರೂ ಪ್ರಬುದ್ಧರಾಗುವ ಅವಕಾಶವನ್ನು ಬಳಸಿಕೊಳ್ಳುವುದು ಜನರಿಗೆ ಸಹಾಯ ಮಾಡುವುದು. ಅದೇ ರೀತಿ ಸತ್ಕಾರ್ಯಗಳ ಮೂಲಕ ತಿಳುವಳಿಕೆಯನ್ನು ಹೊಂದುವುದು. ಬುದ್ಧನ ಬೋಧನೆಗಳನ್ನು ಅನುಸರಿಸುವುದು ಮಹಾಯಾನ ಬೌದ್ಧಧರ್ಮದ ಉದ್ದೇಶವಾಗಿದೆ.

Advertisement
Advertisement