ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

TMC ಅಂದ್ರೆ ಏನು? ಒಂದು TMC ನೀರಿನ ಪ್ರಮಾಣ ಅಂದ್ರೆ ಎಷ್ಟಾಗುತ್ತೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

09:18 AM Jul 26, 2024 IST | ಸುದರ್ಶನ್
UpdateAt: 09:18 AM Jul 26, 2024 IST
Advertisement

TMC: ರಾಜ್ಯದಲ್ಲಿ ಮಳೆಯ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಅಬ್ಬರದ ಮಳೆಯಿಂದಾಗಿ ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿವೆ. ಈ ವೇಳೆ ಜಲಾಶಯದ ಇಂಜಿನಿಯರ್ ಗಳು ಡ್ಯಾಂ ತುಂಬುತ್ತಿರುವ ಬಗ್ಗೆ, ಎಷ್ಟು ತುಂಬಿದೆ, ಬಾಕಿ ಎಷ್ಟಿದೆ ಎಂದೆಲ್ಲಾ ಮಾಹಿತಿ ನೀಡುತ್ತಿರುತ್ತಾರೆ. ಇದನ್ನು ಮಾಧ್ಯಮಗಳು, ಪೇಪರ್ ಗಳಲ್ಲೆ ನಾವು ನೋಡುತ್ತಿರುತ್ತೇವೆ. ಆ ಲೆಕ್ಕಗಳು, ಅಳತೆಗಳು TMC ಯಲ್ಲಿ ಇರುತ್ತದೆ. ಹಾಗಿದ್ರೆ ಈ ಟಿಎಂಸಿ ಅಂದ್ರೆ ಏನು? ಒಂದು TMC ನೀರು ಅಂದ್ರೆ ಎಷ್ಟು ಪ್ರಮಾಣ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

Advertisement

ಒಂದು TMC ಅಂದ್ರೆ ಎಷ್ಟು?
ಟಿಎಂಸಿಯನ್ನು ಭಾರತದಲ್ಲಿ ಮಾತ್ರ ಜಲಾಶಯಗಳನ್ನು ಅಳೆಯಲು ಹೆಚ್ಚಾಗಿ ಬಳಸಲಾಗುತ್ತದೆ. 1 ಟಿಎಂಸಿ ಎಂದರೆ ಅಂದಾಜು 2831 ಕೋಟಿ ಲೀಟರ್ ನೀರು ಅಥವಾ ಘನ ಅಡಿ. ಅಥವಾ ಒಂದು ಟಿ.ಎಂ.ಸಿ ಅಂದರೆ ಒಂದು ಸಾವಿರ ಅಡಿ ಉದ್ದ, ಸಾವಿರ ಅಡಿ ಅಗಲ, ಸಾವಿರ ಅಡಿ ಎತ್ತರದ ನೀರಿನ ರಾಶಿ.

ಉದಾಹರಣೆಗೆ ಹೇಳುವುದಾದರೆ 2300 ಎಕರೆ ಜಾಗದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿಎಂಸಿಗೆ ಸಮ. ಹಾಗಾಗಿ 100 ಟಿ.ಎಂ.ಸಿ. ನೀರು ಎಂದರೆ 23000 ಎಕರೆ ವಿಸ್ತಾರದಲ್ಲಿ 100 ಅಡಿ ನೀರು. ಟಿಎಂಸಿಯ ಪೂರ್ಣ ರೂಪ ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ. ಇದನ್ನು t.m.c ಅಥವಾ Tmc ft ಅಥವಾ Tmcft ಎಂದೂ ಸೂಚಿಸಲಾಗುತ್ತದೆ. ಇದು ನೀರಿನ ಪ್ರಮಾಣವನ್ನು ಅಳೆಯಲು ಬಳಸುವ ಒಂದು ಘಟಕವಾಗಿದೆ.

Advertisement

ಇನ್ನೂ ವಿವರವಾಗಿ ಹೇಳೋದಾದರೆ 11,000 ಕ್ಯೂಸೆಕ್ಸ್ ನೀರು 24 ಗಂಟೆಗಳ ಕಾಲ ಹರಿದರೆ ಅದು ಒಂದು ಟಿ.ಎಂ.ಸಿ ಆಗುತ್ತದೆ. 1 ಟಿ.ಎಂ.ಸಿ ನೀರು ಇದರ 4,500 ಎಕೆರೆಯಲ್ಲಿ ಭತ್ತ, ಕಬ್ಬು ಅಥವಾ 11,000 ಎಕೆರೆಯಲ್ಲಿ ಶೇಂಗಾ ಬೆಳೆಯಬಹುದು.

Related News

Advertisement
Advertisement