For the best experience, open
https://m.hosakannada.com
on your mobile browser.
Advertisement

Modi Salary: 3ನೇ ಬಾರಿ ಪ್ರಧಾನಿಯಾದ ಮೋದಿಯ ತಿಂಗಳ ಸಂಬಳ ಎಷ್ಟು?!

Modi Salary: 3ನೇ ಅವಧಿಯಲ್ಲಿ ಮೋದಿಯವರ ತಿಂಗಳ ಸಂಬಳ(Modi Salary)ಎಷ್ಟಿರುತ್ತದೆ ಎಂಬುದು ಹಲವರ ಕುತೂಹಲ. ಮೋದಿಯವರ ತಿಂಗಳ ಸಂಬಳ ಎಷ್ಟು, ಏನೆಲ್ಲಾ ಸೌಲಭ್ಯ ದೊರಕುತ್ತದೆ ಎಂಬ ಚಿತ್ರಣ ಇಲ್ಲಿದೆ.
12:53 PM Jun 10, 2024 IST | ಸುದರ್ಶನ್
UpdateAt: 12:53 PM Jun 10, 2024 IST
modi salary  3ನೇ ಬಾರಿ ಪ್ರಧಾನಿಯಾದ ಮೋದಿಯ ತಿಂಗಳ ಸಂಬಳ ಎಷ್ಟು
Advertisement

Modi Salary: ನರೇಂದ್ರ ಮೋದಿಯವರು 3ನೇ ಬಾರಿಗೆ ದೇಶದ ಪ್ರಧಾನಿಯಾಗಿ(Indian Prime Minister) ಅಧಿಕಾರ ಸ್ವೀಕರಿಸಿದ್ದಾರೆ. 2014, 2019 ರ ಚುನಾವಣೆಗಳಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಈ ಸಲ ಸಮ್ಮಿಶ್ರ ಸರಕಾರ ರಚಿಸಿದ್ದಾರೆ. ಹಾಗಿದ್ರೆ 3ನೇ ಅವಧಿಯಲ್ಲಿ ಮೋದಿಯವರ ತಿಂಗಳ ಸಂಬಳ(Modi Salary)ಎಷ್ಟಿರುತ್ತದೆ ಎಂಬುದು ಹಲವರ ಕುತೂಹಲ. ಮೋದಿಯವರ ತಿಂಗಳ ಸಂಬಳ ಎಷ್ಟು, ಏನೆಲ್ಲಾ ಸೌಲಭ್ಯ ದೊರಕುತ್ತದೆ ಎಂಬ ಚಿತ್ರಣ ಇಲ್ಲಿದೆ.

Advertisement

ಅಯೋಧ್ಯೆ ಸೇರಿ ಶ್ರೀರಾಮನ ನಂಟಿರುವ 10 ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲು; ಬಿಜೆಪಿಗೆ ತಟ್ಟಿತೇ ರಾಮನ ಶಾಪ ?!

ಸತತ 3ನೇ ಬಾರಿಗೆ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ತಿಂಗಳ ವೇತನ(Monthly salary)1.66 ಲಕ್ಷ ರೂಪಾಯಿ. ಅಂದರೆ ವಾರ್ಷಿಕ ಸ್ಯಾಲರಿ 19.20 ಲಕ್ಷ ರೂಪಾಯಿ. ತಿಂಗಳ 1.66 ಲಕ್ಷ ರೂಪಾಯಿ ವೇತನದಲ್ಲಿ 50,000 ರೂಪಾಯಿ ಫಿಕ್ಸೆಡ್ ಸ್ಯಾಲರಿಯಾಗಿ ನೀಡಲಾಗುತ್ತದೆ. ಇನ್ನು ಇತರ ಭತ್ಯೆಯಾಗಿ 6,000 ರೂಪಾಯಿ, ಸಂಸದರ ಭತ್ಯೆ 3,000, ಪ್ರಧಾನ ಮಂತ್ರಿ ತಮ್ಮ ಕಾರ್ಯಾಲದಿಂದ ಹೊರಭಾಗದಲ್ಲಿ ಕೆಲಸ ಮಾಡಿದರೆ ಪ್ರತಿ ದಿನದ ವೆಚ್ಚ 3,000 ರೂಪಾಯಿ ನೀಡಲಾಗುತ್ತದೆ. ಈ ಭತ್ಯೆಗಳನ್ನು ಒಟ್ಟುಗೂಡಿಸಿದರೆ ತಿಂಗಳಿಗೆ 90,000 ರೂಪಾಯಿ. ಹೀಗಾಗಿ ಪ್ರಧಾನ ಮಂತ್ರಿ ಫಿಕ್ಸೆಡ್, ಭತ್ಯೆ, ಸಂಸದರ ಭತ್ಯೆ ಸೇರಿದಂತೆ ತಿಂಗಳ ಒಟ್ಟು ವೇತನ 1.66 ಲಕ್ಷ ರೂಪಾಯಿ.

Advertisement

ಇತರ ಸೌಲಭ್ಯಗಳೇನು?
* ಪ್ರಧಾನಿಗೆ ಬಾಡಿಗೆ ರಹಿತಿ ಐಷಾರಾಮಿ ಅಧಿಕೃತ ಮನೆ ನೀಡಲಾಗುತ್ತದೆ.
* ಪ್ರಧಾನಿಗಳ ಪ್ರಯಾಣಕ್ಕೆ ವಿಶೇಷ ಭದ್ರತೆಗಳನ್ನೊಳಗೊಂಡ ವಾಹನ ನೀಡಲಾಗುತ್ತದೆ.
* ಪ್ರಧಾನಿಗೆ ವಿಮಾನ, ಹೆಲಿಕಾಪ್ಟರ್ ಪ್ರಯಾಣದ ಸೌಲಭ್ಯವೂ ನೀಡಲಾಗುತ್ತದೆ.
* ಪ್ರಧಾನಿಯ ಅಧಿಕೃತ ವಿಮಾನ ಏರ್ ಇಂಡಿಯಾ ಒನ್ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.
* ವೈದ್ಯಕೀಯ ಸೌಲಭ್ಯ ಸಂಪೂರ್ಣ ಉಚಿತವಾಗಿದೆ.
* ದಿನದ 24 ಗಂಟೆಯೂ ಪ್ರಧಾನಿಗೆ ವೈದ್ಯಕೀಯ ಸೌಲಭ್ಯ, ವೈದ್ಯರ ತಂಡ ಲಭ್ಯವಿರುತ್ತದೆ.
* ಪ್ರಧಾನಿ ಕುಟುಂಬಕ್ಕೂ ಉಚಿತ ವೈದ್ಯಕೀಯ ಸೌಲಭ್ಯವಿದೆ. * ಪ್ರಧಾನಿಗಳಿಗೆ ಪಿಂಚಣಿ ಸೌಲಭ್ಯವೂ ಲಭ್ಯವಿದೆ. ಸುದೀರ್ಘ ಸೇವೆ ಬಳಿಕ ನಿವೃತ್ತಿಯಾದಾಗ ಮಾಜಿ ಪ್ರಧಾನಿಗೆ ಪಿಂಚಣಿ ಸೌಲಭ್ಯವೂ ನೀಡಲಾಗುತ್ತದೆ.
* ಪ್ರಧಾನಿಗೆ ಊಹೆಗೂ ನಿಲುಕದೆ ಭದ್ರತೆ ನೀಡಲಾಗುತ್ತದೆ. ಎನ್‌ಎಸ್‌ಜಿ ಭದ್ರತೆ ಹೊಣೆ ಹೊತ್ತುಕೊಂಡಿದೆ.

8th Pay Commission: 8ನೇ ವೇತನ ಆಯೋಗಕ್ಕೆ ಸಿದ್ಧತೆ, ಸರಕಾರಿ ನೌಕರರ ವೇತನ ಎಷ್ಟು ಹೆಚ್ಚಳ?

Advertisement
Advertisement
Advertisement