For the best experience, open
https://m.hosakannada.com
on your mobile browser.
Advertisement

Shatru Bhairavi Yaga: ಶತ್ರು ಭೈರವಿ ಯಾಗ ಅಂದರೇನು? ಏನೆಲ್ಲಾ ಇರುತ್ತೆ ? ಇದನ್ನು ಮಾಡೋದೇಕೆ ?

Shatru Bhairavi Yaga: ಭೈರವಿ ಯಾಗ ಅಂದ್ರೆ ಏನು? ಇದನ್ನು ಯಾಕೆ ಮಾಡಲಾಗುತ್ತದೆ? ಇದರಲ್ಲಿ ಏನೆಲ್ಲಾ ಬಲಿ ಕೊಡಲಾಗುತ್ತೆ? ತಿಳಿಯೋಣ ಬನ್ನಿ.
12:22 PM May 31, 2024 IST | ಸುದರ್ಶನ್
UpdateAt: 12:39 PM May 31, 2024 IST
shatru bhairavi yaga  ಶತ್ರು ಭೈರವಿ ಯಾಗ ಅಂದರೇನು  ಏನೆಲ್ಲಾ ಇರುತ್ತೆ   ಇದನ್ನು ಮಾಡೋದೇಕೆ
Advertisement

Shatru Bhairavi Yaga: ನಮ್ಮ ದೇಶ ಶಾಸ್ತ್ರ, ಸಂಪ್ರದಾಯಗಳನ್ನು ಅವಲಂಬಿಸಿರುವ ದೇಶ. ಬಹಳ ಹಿಂದಿನ ಕಾಲದಿಂದಲೂ ಸಹ ಜ್ಯೋತಿಷ್ಯ (Astrology) ಹಾಗೂ ಯಾಗಗಳು ನಮ್ಮ ಜೀವನದ (Life) ಭಾಗವಾಗಿದೆ. ಕೆಲ ಯಾಗಗಳನ್ನ ಮಾಡುವುದರಿಂದ ವಿಶೇಷವಾದ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ನಾವು ಪುರಾಣಗಳಿಂದೆಲ್ಲಾ ತಿಳಿದಿದ್ದೇವೆ. ಉದಾಹರಣೆಗೆ ಹೇಳುವುದಾದರೆ ಪುತ್ರಕಾಮೇಷ್ಠಿ ಯಾಗದಿಂದ ಸಂತಾನ ಪ್ರಾಪ್ರಿಯಾಗುತ್ತದೆ, ಹಾಗೆಯೇ, ಅಶ್ವಮೇಧ ಯಾಗದಿಂದ ಸಾಮ್ರಾಜ್ಯ ಹೀಗೆ. ಒಂದೊಂದು ಯಾಗಗಳು ಒಂದೊಂದು ಪ್ರಯೋಜನ ನೀಡುತ್ತದೆ. ಆದರೀಗ ಇತ್ತೀಚಿನ ದಿನಗಳಲ್ಲಿ ಭೈರವಿ ಯಾಗ ಎಂಬುದೊಂದು ಪ್ರಚಲಿತದಲ್ಲಿದ್ದು, ಭಾರೀ ಸದ್ದು ಮಾಡುತ್ತಿದೆ.

Advertisement

ಇದನ್ನೂ ಓದಿ: Bath Tips: ಆರೋಗ್ಯ ಕಾಪಾಡಲು ಈ 5 ಭಾಗಗಳನ್ನು ಸ್ನಾನ ಮಾಡುವಾಗ ತಪ್ಪದೇ ಸ್ವಚ್ಛ ಮಾಡಿಕೊಳ್ಳಿ!

ಭೈರವಿ ಯಾಗ ಎಂಬ ಹೆಸರು ಆಗಾಗ ಕೇಳಿಬರುತ್ತಿತ್ತು. ಆದರೀಗ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಬಾಯಲ್ಲಿ ಈ ಯಾಗದ ಹೆಸರು ಬಂದಿದೆ. ಅದೂ ಕೂಡ ಈ ಯಾಗ ನನ್ನ ಮತ್ತು ಸಿಎಂ ಮೇಲೆ ಪ್ರಯೋಗ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ಹೌದು, ಡಿಕೆಶಿ ಅವರು ನಿನ್ನೆ 'ನನ್ನ ಹಾಗೂ ಸಿಎಂ ಸಿದ್ಧರಾಮಯ್ಯ ವಿರುದ್ದ ಶತ್ರು ಭೈರವಿ ಯಾಗ (Shatru Bhairavi Yaga) ಮಾಡಿಸಲಾಗುತ್ತಿದ್ದೆ. ಇದರಲ್ಲಿ 21 ಕಪ್ಪು ಮೇಕೆ, ಹತ್ತು ಕೋಣ, ಐದು ಹಂದಿ, ಕೋಳಿಗಳ ಬಲಿ ಕೊಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಇಡೀ ರಾಜ್ಯದಲ್ಲಿ ಈ ಯಾಗ ಭಾರೀ ಸುದ್ದಿಯಾಗುತ್ತಿದೆ. ಹಾಗಿದ್ರೆ ಈ ಭೈರವಿ ಯಾಗ ಅಂದ್ರೆ ಏನು? ಇದನ್ನು ಯಾಕೆ ಮಾಡಲಾಗುತ್ತದೆ? ಇದರಲ್ಲಿ ಏನೆಲ್ಲಾ ಬಲಿ ಕೊಡಲಾಗುತ್ತೆ? ತಿಳಿಯೋಣ ಬನ್ನಿ.

Advertisement

ಇದನ್ನೂ ಓದಿ: Sleep: ನಿಮ್ಮಲ್ಲಿರುವ ಸಿಕ್ಸ್ಸೆನ್ಸ್ ನಿಮ್ಮನ್ನು ನಸು ಮುಂಜಾನೆ ಎಬ್ಬಿಸಿದ್ರೆ ಅದಕ್ಕೂ ಬಲವಾದ ಕಾರಣ ಇದೆಯಂತೆ!

ಶತ್ರು ಭೈರವಿ ಯಾಗ ಮಾಡುವುದೇಕೆ?

ನಂಬಿಕೆಗಳ ಪ್ರಕಾರ ಈ ಯಾಗವನ್ನ ಮಾಡುವುದರಿಂದ ಶತ್ರುಗಳ ನಾಶವಾಗುತ್ತದೆ ಹಾಗೂ ಶತ್ರಗಳ ವಿರುದ್ಧ ಜಯ ಸಾಧಿಸಲು ಸಾಧ್ಯವಾಗುತ್ತದೆ. ಈ ಯಾಗ ಮಾಡುವುದಕ್ಕೆ ಬಹಳ ಸಾಧನೆ ಅಗತ್ಯವಿದ್ದು ಅಘೋರಿಗಳು ಮಾತ್ರ ಇದನ್ನ ಮಾಡುತ್ತಾರೆ ಎಂದೂ ಸಹ ಹೇಳಲಾಗುತ್ತದೆ.

ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಇದು ಶತ್ರು ಸಂಹಾರದ ಯಾಗಕ್ಕಿಂತ ಶಕ್ತಿಶಾಲಿ ಎನ್ನುವ ಮಾತಿದೆ. ಈ ಯಾಗವನ್ನ ಮಾಡುವುದರಿಂದ ಶತ್ರುಗಳ ವಿರುದ್ಧ ಜಯ ಸಿಗುವುದು ಮಾತ್ರವಲ್ಲದೇ ಎಲ್ಲಾ ರೀತಿಯಲ್ಲೂ ಅವರನ್ನ ಎದುರಿಸುವ ಶಕ್ತಿ ಬರುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಯಾರ ವಿರುದ್ಧ ಈ ಯಾಗ ಮಾಡಲಾಗುತ್ತದೆಯೋ ಅವರು ಮತ್ತೆ ಚೇತರಿಸಿಕೊಳ್ಳುವುದು ಸಹ ಬಹಳ ಕಷ್ಟ ಎನ್ನಲಾಗುತ್ತದೆ.

ಬೈರವಿ ಯಾಗ ಅಂದ್ರೆ ಏನು?

ಶತ್ರು ಮರ್ಧನ ಯಾಗ ಅಥವಾ ವಿಷ ಯಾಗ ಎಂದೇ ಕರೆಯುವ ಈ ಯಾಗವವನ್ನು ಶತ್ರುವನ್ನು ಮಣಿಸಲು ಮಾಡುತ್ತಾರೆ. ಈ ಯಾಗದಿಂದ ಶತ್ರುವಿನ ಮೇಲೆ ಎರಡು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಒಂದೋ ಶತ್ರುವಿನ ಬುದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಅಥವಾ ಶತ್ರು ಸಾವನ್ನಪ್ಪುತ್ತಾನೆ. ಕೆಲವೊಮ್ಮೆ ವೈದ್ಯಕೀಯ ವ್ಯವಸ್ಥೆಗೂ ಸಹ ವ್ಯಕ್ತಿಗೆ ಬಂದಿರುವ ರೋಗ ಯಾವುದು ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಈ ಯಾಗದಿಂದ ಇಂದಿಗೂ ಫಲ ಪಡೆಯಬಹುದು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ.

ಹೇಗೆ ಮಾಡಲಾಗುತ್ತದೆ?

ಅಘೋರಿಗಳನ್ನು ಕರೆಸಿ ಸ್ಮಶಾನದಲ್ಲಿ ಯಾಗ ನಡೆಯುತ್ತದೆ. ಸ್ಮಶಾನ ಕಾಳಿಯನ್ನು ಪ್ರಧಾನವಾಗಿಟ್ಟು ಅಷ್ಟ ಭೈರವಿಯನ್ನು ಕರೆದು ಯಾಗ ಮಾಡಿಸಲಾಗುತ್ತದೆ. ಮೊದಲು ಪ್ರಾಣಿಯ ಮೇಲೆ ನಡೆಯುತ್ತದೆ. ನೋಡುತ್ತಾ ನೋಡುತ್ತಾ ಪ್ರಾಣಿ ಸತ್ತು ಬೀಳುತ್ತದೆ. ಇದಕ್ಕೆ ಮಾಮೂಲಿ ತುಪ್ಪ, ಮರದ ಚಕ್ಕೆಗಳನ್ನು ಬಳಸುವುದಿಲ್ಲ. ಹಂದಿ, ಎಮ್ಮೆ ತುಪ್ಪ ಬಳಕೆ ಮಾಡಲಾಗುತ್ತದೆ. ವಿಷಯುಕ್ತ ಕಸರಕ ಮರ ಚಕ್ಕೆಗಳನ್ನು ಹೋಮಕ್ಕೆ ಹಾಕಿ ಹವನ ಮಾಡಲಾಗುತ್ತದೆ. ಮಣ್ಣಿನ ದೇವಿಗೆ ರಕ್ತ ನೀಡಿದಾಗ ರಕ್ತ ಹೀರುತ್ತದೆ. ಈ ಯಾಗ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆಯುವುದಿಲ್ಲ. 9 ದಿನಗಳ ಕಾಲ ಪ್ರತಿ ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 3 ಗಂಟೆಯವರೆಗೆ ಈ ಯಾಗ ನಡೆಯುತ್ತದೆ.

ಯಾರು ಮಾಡುತ್ತಾರೆ?

ಈ ಯಾಗವನ್ನು ಸಾಮಾನ್ಯ ಪುರೋಹಿತರಿಂದ ಮಾಡಲು ಸಾಧ್ಯವಿಲ್ಲ. ಅಘೋರಿಗಳನ್ನು ಕರೆಸಿ ಸ್ಮಶಾನದಲ್ಲಿ ಯಾಗ ನಡೆಸಲಾಗುತ್ತದೆ. ಸ್ಮಶಾನ ಕಾಳಿಯನ್ನು ಪ್ರಧಾನವಾಗಿಟ್ಟು ಅಷ್ಟ ಭೈರವಿಯನ್ನು ಕರೆದು ಯಾಗ ಮಾಡಿಸಲಾಗುತ್ತದೆ. ಮೊದಲು ಪ್ರಾಣಿಯ ಮೇಲೆ ನಡೆಯುತ್ತದೆ. ಪ್ರಾಣಿ ಸತ್ತು ಬೀಳುತ್ತದೆ. ಇದಕ್ಕೆ ಮಾಮೂಲಿ ತುಪ್ಪ, ಸಮಿತ್ತುಗಳನ್ನು ಬಳಸುವುದಿಲ್ಲ. ಹಂದಿ, ಎಮ್ಮೆ ತುಪ್ಪ ಬಳಕೆ ಮಾಡಲಾಗುತ್ತದೆ. ವಿಷಯುಕ್ತ ಮರದ ಚಕ್ಕೆಗಳನ್ನು ಹೋಮಕ್ಕೆ ಹಾಕಲಾಗುತ್ತದೆ. ಮಣ್ಣಿನ ದೇವಿ ಮೂರ್ತಿಗೆ ರಕ್ತ ನೀಡಿದಾಗ ರಕ್ತ ಹೀರುತ್ತದೆ. ಈ ಯಾಗ 9 ದಿನಗಳ ಕಾಲ ಪ್ರತಿ ರಾತ್ರಿ ನಡೆಯುತ್ತದೆ. ಕಾಪಾಲಿಕರು, ಅಘೋರಿಗಳು ನಡೆಸುವ ಈ ಯಾಗದಲ್ಲಿ ಶ್ರದ್ಧೆ ಅಥವಾ ಪ್ರಯೋಗದಲ್ಲಿ ಸ್ವಲ್ಪ ವ್ಯತ್ಯಾಸವಾದ್ರೂ ಮಾಡಿಸುವ ಕರ್ತೃ ಹಾಗೂ ಮಾಂತ್ರಿಕ ಇಬ್ಬರಿಗೂ ಮಾರಣಾಂತಿಕ ಹಾನಿ ಸಂಭವಿಸಬಹುದು. ಉನ್ನತ ತಂತ್ರ ವಿದ್ಯೆ ಗೊತ್ತಿರುವ ಮಂದಿಗೆ ಮಾತ್ರ ಈ ಯಾಗ ಮಾಡುವ ಕ್ರಮ ಗೊತ್ತಿದ್ದು, ಅದರ ಅರ್ಹತೆ- ಅಧಿಕಾರ ಪಡೆದಿದ್ದಾರೆ.

ನಿರ್ದಿಷ್ಟ ದಿನದಂದು ಯಾಗ ಮಾಡಬೇಕು?

ಈ ಯಾಗವನ್ನ ಶತ್ರು ಭೈರವಿ ಅಥವಾ ಭಯರವ ಯಾಗ ಎಂದು ಕರೆಯಲಾಗುತ್ತದೆ. ಈ ಯಾವಗವನ್ನ ಮಾಡಲು ಅನೇಕ ನಿಯಮಗಳಿದೆ. ಇದನ್ನ ಬಹಳ ಸುಲಭವಾಗಿ ಸಹ ಮಾಡಲಾಗುವುದಿಲ್ಲ. ಅಷ್ಟಮಿಯ ದಿನ, ಭಾನುವಾರ, ಬುಧವಾರ ಮತ್ತು ಗುರುವಾರದಂತಹ ದಿನಗಳಂದು ಸರಿಯಾದ ಸಮಯದಲ್ಲಿ ಈ ಯಾಗವನ್ನ ಮಾಡಿದರೆ ಅದರ ಫಲಗಳನ್ನ ಪಡೆಯಬಹುದು.

ಏನೇನು ಬಲಿ ಕೊಡುತ್ತಾರೆ?

ಈ ಭೈರವಿ ಯಾಗದಲ್ಲಿ ಮೂರು ಪ್ರಯೋಗಗಳು ಇರುತ್ತವೆ. ಮೂರು ಪ್ರಯೋಗಕ್ಕೆ 50 ಪ್ರಾಣಿಗಳ ಬಲಿ ಕೊಡಲಾಗಿದೆ.

21 ಕೆಂಪು ಬಣ್ಣದ ಮೇಕೆಗಳು, 3 ಎಮ್ಮೆಗಳು, 21 ಕಪ್ಪು ಬಣ್ಣದ ಕುರಿಗಳು, 5 ಹಂದಿಗಳನ್ನು ಬಲಿ ಕೊಡಲಾಗಿದೆ. ಈ ಯಾಗದಲ್ಲಿ ಎಂಟು ಮಂದಿ ವಾಮಾಚಾರ- ಅಭಿಚಾರ ಕರ್ಮಗಳನ್ನು ಬಲ್ಲ ಜ್ಯೋತಿಷಿಗಳು ಭಾಗವಹಿಸುತ್ತಿದ್ದಾರೆ. ಮದ್ಯ ಮಾಂಸಗಳನ್ನು ಯಥೇಚ್ಛವಾಗಿ ದೇವತೆಗೆ ಕೊಡಲಾಗುತ್ತಿದ್ದು, ದೇವತೆಯನ್ನು ರೊಚ್ಚಿಗೆಬ್ಬಿಸುವ ಪ್ರಕ್ರಿಯೆ ನಡೆಯುತ್ತಿದೆ.

ಪರಿಣಾಮವೇನು?

ಶತ್ರು ಭೈರವಿ ಯಾಗ ಮಾಡಿದ ದಿನದಿಂದ ಆರು ತಿಂಗಳು, ಒಂದು ವರ್ಷದ ಒಳಗಡೆ ಇದರ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ. ದೈಹಿಕ, ಸಂಸಾರಿಕ, ಸಾಮಾಜಿಕವಾಗಿ ಪರಿಣಾಮ ಬೀರಬಹುದು. ವ್ಯಕ್ತಿಯ ಅಂಗಾಗಳನ್ನು ಬಲ ಹೀನರನ್ನಾಗಿ ಮಾಡಬಹುದು ಅಥವಾ ವ್ಯಕ್ತಿ ಸಾವನ್ನಪ್ಪಬಹುದು.

ಡಿ ಕೆ ಶಿವಕುಮಾರ್ ಹೇಳಿದ್ದೇನು?

ನನ್ನ ವಿರುದ್ಧವಾಗಿ, ಸಿಎಂ ಸಿದ್ದರಾಮಯ್ಯನವರ(CM Siddaramaiah)ವಿರುದ್ಧವಾಗಿ ಹಾಗೂ ಸರ್ಕಾರದ ವಿರುದ್ದವಾಗಿ ಕೇರಳದ ರಾಜರಾಜೇಶ್ವರಿ ನಗರದಲ್ಲಿ ಅಘೋರಿಗಳಿಂದ ಶತ್ರು ಭೈರವಿ ಯಾಗ ಮಾಡಿಸಲಾಗುತ್ತಿದೆ. ಉತ್ತರ ಭಾರತದಿಂದ ಬಂದಿರುವ ಅಘೋರಿಗಳ ಗುಂಪೊಂದು ಈ ಯಾಗವನ್ನು ನಡೆಸುತ್ತಿದೆ. ಈ ಯಾಗದಲ್ಲಿ ಪಂಚ ಬಲಿಯನ್ನೂ ಕೊಡಲಾಗುತ್ತದೆ. ಈ ಯಾಗದ ಹಿಂದೆ ಯಾರು ಯಾರು ಇದ್ದಾರೆಂಬುದು ನನಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ ಮಾಹಿತಿ ಸಿಕ್ಕ ಬೆನ್ನಲ್ಲೇ ಅಲರ್ಟ್ ಆಗಿರುವ ಡಿಕೆ ಶಿವಕುಮಾರ್ ಪುರೋಹಿತರ ಮೊರೆ ಹೋಗಿದ್ದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸೂಕ್ತ ದಿಗ್ಬಂಧನಗಳನ್ನು ಮಾಡಿಸಿಕೊಳ್ಳುವುದು ಸೇರಿದಂತೆ ಒಂದಷ್ಟು ಮಹತ್ವದ ಸಲಹೆಗಳನ್ನು ಜ್ಯೋತಿಷಿಗಳು ಅವರಿಗೆ ನೀಡಿದ್ದಾರೆ. “ನನ್ನ ರಕ್ಷಣೆಗೆ ನನ್ನ ಶಕ್ತಿ ಇದೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಈ ಶಕ್ತಿ ಹಾಗೂ ತಾವು ಕೈಗೊಳ್ಳುತ್ತಿರುವ ರಕ್ಷಣಾ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

Advertisement
Advertisement
Advertisement