For the best experience, open
https://m.hosakannada.com
on your mobile browser.
Advertisement

Satta Bazar: ಸಟ್ಟಾ ಬಜಾರ್ ಅಂದ್ರೆ ಏನು? ಇದರ ಭವಿಷ್ಯವು ಬಿಜೆಪಿಯ ನಿದ್ದೆಗೆಡಿಸಿದ್ದೇಕೆ ?!

Satta Bazar: ಪ್ರಪಂಚದ ಅತೀ ದೊಡ್ಡ ಪಕ್ಷದ ನಿದ್ದೆ ಗೆಡಿಸಿರುವ ಈ ಸಟ್ಟಾ ಬಜಾರ್ ಅಂದ್ರೆ ಏನು? ಇದರ ಇತಿಹಾಸ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
11:40 AM May 30, 2024 IST | ಸುದರ್ಶನ್
UpdateAt: 11:42 AM May 30, 2024 IST
satta bazar  ಸಟ್ಟಾ ಬಜಾರ್ ಅಂದ್ರೆ ಏನು  ಇದರ ಭವಿಷ್ಯವು ಬಿಜೆಪಿಯ ನಿದ್ದೆಗೆಡಿಸಿದ್ದೇಕೆ
Advertisement

Satta Bazar: ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದ, ಈಗಾಗಲೇ ಗೆದ್ದೇ ತೀರಿದ್ದೇನೆ ಎಂದು ಬೀಗುತ್ತಿದ್ದ, 400 ಸೀಟುಗಳು ತನ್ನದೆಂದು ಸಾರಿ ಹೇಳುತ್ತಿದ್ದ ಬಿಜೆಪಿ(BJP)ಗೆ ಕನಸಿಗೆ ದೇಶದ ಹಲವು ವಿದ್ಯಾಮಾನಗಳ ಕುರಿತು ಭವಿಷ್ಯ ನುಡಿಯವ ಸಟ್ಟಾ ಬಜಾರ್(Satta Bazar) ಹೊಸ ಭವಿಷ್ಯದ ಮೂಲಕ ತಣ್ಣೀರೆರಚಿದೆ. ಸಟ್ಟಾ ಬಜಾರ್ ಭವಿಷ್ಯ ಕಂಡು ಬಿಜೆಪಿ ಕೂಡ ಕಂಗಾಲಾಗಿ ಹೋಗಿದೇ. ಹಾಗಿದ್ರೆ ಪ್ರಪಂಚದ ಅತೀ ದೊಡ್ಡ ಪಕ್ಷದ ನಿದ್ದೆ ಗೆಡಿಸಿರುವ ಈ ಸಟ್ಟಾ ಬಜಾರ್ ಅಂದ್ರೆ ಏನು? ಇದರ ಇತಿಹಾಸ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

Advertisement

ಇದನ್ನೂ ಓದಿ: Satta Bazar : ಲೋಕಸಭಾ ಫಲಿತಾಂಶದ ಬಗ್ಗೆ ಬಿಜೆಪಿ ಬಿಗ್ ಶಾಕ್ ಕೊಟ್ಟ ಸಟ್ಟಾ ಬಜಾರ್ ಫಲಿತಾಂಶ !!

ಹೌದು, ದೇಶಾದ್ಯಂತ ಹಂತ ಹಂತವಾಗಿ ನಡೆದ ಲೋಕಸಭಾ ಚುನಾವಣೆಯು(Lokasabha Election) ಜೂನ್‌ 1ಕ್ಕೆ ಮುಕ್ತಾಯವಾಗಲಿದೆ. ಅದೇ ದಿನ ಎಕ್ಸಿಟ್‌ ಪೋಲ್‌ ಕೂಡ ಬಿಡುಗಡೆಯಾಗಲಿದೆ. ಬಳಿಕ ಜೂನ್ 6ಕ್ಕೆ ಫಲಿತಾಂಶ ಕೂಡ ಹೊರಬೀಳಲಿದೆ. ಆದರೆ ಇದೆಲ್ಲದಕ್ಕೂ ಮುಂಚಿತವಾಗಿ, ಹ್ಯಾಟ್ರಿಕ್ ಕನಸು ಕಂಡಿರುವ ಬಿಜೆಪಿಗೆ ಸಟ್ಟಾ ಬಜಾರ್, ಆಘಾತಕಾರಿಯಾದ ಫಲಿತಾಂಶಗಳು ಬರುವ ಸೂಚನೆ ನೀಡಿದೆ. ಚುನಾವಣೆಗೂ ಮುನ್ನ ಬಿಜೆಪಿಗೆ 315 ಸೀಟ್‌ಗಳ ಅಂದಾಜು ನೀಡಿದ ಸಟ್ಟಾ ಬಜಾರ್‌, 6ನೇ ಹಂತದ ಚುನಾವಣೆ ಮುಗಿದ ಬಳಿಕ ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಿದೆ. ಹಂತದಿಂದ ಹಂತಕ್ಕೆ ಬಿಜೆಪಿ ಗೆಲುವಿನ ಸಂಖ್ಯೆ ಇಳಿಮುಖವಾಗುತ್ತಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಹೇಳಿದೆ.

Advertisement

ಇದನ್ನೂ ಓದಿ: Vitla: ಮಾಣಿ ರಾಷ್ಟ್ರೀಯ ಹೆದ್ದಾರಿಯ ಕಬ್ಬಿಣದ ತಡೆಬೇಲಿಗೆ ಕಾರು ಡಿಕ್ಕಿ

ಸಟ್ಟಾ ಬಜಾರ್ ಅಂದ್ರೆ ಏನು?

ಹಿಂದಿಯಲ್ಲಿ ಸಟ್ಟಾ ಬಜಾರ್ ಎಂದರೆ ಬೆಟ್ಟಿಂಗ್ ಮಾರುಕಟ್ಟೆ. ಇದು ಒಂದು ರೀತಿಯ ಜೂಜು. ಇದಕ್ಕೆ ಕಾನೂನು ಮಾನ್ಯತೆ ಇಲ್ಲ. ಜೂಜು ಆಗಿರುವ ಕಾರಣ ಇದು ಅಕ್ರಮ. ಇದು ಪರಸ್ಪರ ವಿಶ್ವಾಸದ ಮೇಲೆ ನಡೆಯುವ ವಹಿವಾಟಿನ ಮಾರುಕಟ್ಟೆ. ಇಲ್ಲಿ ಕ್ರಿಕೆಟ್‌ನಿಂದ ಹಿಡಿದು ಚುನಾವಣೆ ತನಕ ನಾನಾ ವಿಷಯಗಳಿಗೆ ಬೆಟ್ಟಿಂಗ್ ನಡೆಯುತ್ತಲೇ ಇರುತ್ತದೆ. ಚುನಾವಣೆ ಸಂದರ್ಭ ಮತ್ತು ಕ್ರಿಕೆಟ್ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ಎಂದೇ ಹೇಳಬಹುದು. ಬೆಟ್ಟಿಂಗ್ ಎಂದರೆ ಅಲ್ಲಿ ಹಣ/ ಸಂಪತ್ತು / ಬೆಲೆ ಬಾಳುವ ವಸ್ತುಗಳನ್ನು ಪಣವಾಗಿ ಇಡುವುದು ವಾಡಿಕೆ. ಜೂಜು ಗೆದ್ದವರಿಗೆ ಅದು ಆ ಸಂಪತ್ತು ದಕ್ಕುತ್ತದೆ. ಈಗ ಚುನಾವಣೆ ನಡೆಯುತ್ತಿರುವ ಕಾರಣ ಫಲಿತಾಂಶಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್‌ ನಡೆಯುತ್ತಿದೆ.

ಫಲೋಡಿ ಸಟ್ಟಾ ಬಜಾರ್ ಇತಿಹಾಸ:

ಫಲೋಡಿ ಸಟ್ಟಾ ಮಾರುಕಟ್ಟೆಯು(Phalodi Satta Bazar) ಶತಮಾನಗಳ ಇತಿಹಾಸ ಹೊಂದಿದೆ. 19 ನೇ ಶತಮಾನದ ಅಂತ್ಯದ ವೇಳೆಗೆ ಈ ಮಾರುಕಟ್ಟೆಯ ಭವಿಷ್ಯವಾಣಿ ಮೂಲಕ ದೇಶದ ಗಮನವನ್ನೇ ಸೆಳೆದಿತ್ತು. ಫಲೋಡಿ ಎಂಬುದು ರಾಜಸ್ಥಾನದ ಜೋಧಪುರದಿಂದ 164 ಕಿ.ಮೀ. ದೂರದ ಒಂದು ಪಟ್ಟಣ. ಜನಸಂಖ್ಯೆ ದೃಷ್ಟಿಯಿಂದ ಇದು ಆ ರಾಜ್ಯದ ಎರಡನೇ ಅತಿದೊಡ್ಡ ನಗರ. ಈಗ ಹೊಸ ಜಿಲ್ಲೆ ಕೂಡ ಹೌದು. ಫಲೋಡಿ ಅಥವಾ ಫಲೌದಿ ಎಂಬುದು ಹಣ್ಣಿನ ಮಾರುಕಟ್ಟೆ. ಈ ಪಟ್ಟಣಕ್ಕೆ ಫಲವಿದ್ರಿಕಾ ಎಂಬ ಹೆಸರೂ ಇತ್ತು. ಅದು ಅಪಭ್ರಂಶಗೊಂಡು ಫಲೋಡಿ ಆಗಿದೆ. ಫಲೋಡಿ ಸಾಲ್ಟ್ ಸಿಟಿ ಎಂದೂ ಗುರುತಿಸಿಕೊಂಡಿತ್ತು. ಇಲ್ಲಿ ಉಪ್ಪಿನ ಉತ್ಪಾದನೆ ಆಗುತ್ತಿತ್ತು.

ಆರಂಭದಲ್ಲಿ ಹೇಳಿದಂತೆ ಇದು ಸ್ವಾತಂತ್ರ್ಯ ಪೂರ್ವದ ಮಾರುಕಟ್ಟೆ. ಇಲ್ಲಿ ಬೆಳಗ್ಗೆಯಿಂದ ತಡರಾತ್ರಿವರೆಗೂ ಜನದಟ್ಟಣೆ ಇರುತ್ತದೆ. ಹೆಚ್ಚಿನವರು ದಲ್ಲಾಳಿಗಳು ಮತ್ತು ಸಟ್ಟಾ ವ್ಯಾಪಾರಿಗಳು. ಹಣ್ಣಿನ ಮಾರುಕಟ್ಟೆಯಲ್ಲಿ ಇವರು ನಿಧಾನವಾಗಿ ಬೆಟ್ಟಿಂಗ್ ಶುರುಮಾಡಿದರು. ಹಾಗೆ ಶುರುವಾಯಿತು ಸಟ್ಟಾ ಬಜಾರ್. ಹಿಂದೆ ಮಳೆಯ ಮುನ್ಸೂಚನೆಗಾಗಿ ಈ ಮಾರುಕಟ್ಟೆಯ ಮೇಲೆ ಜನ ಅವಲಂಭಿಸಿದ್ದರು. ಬರು ಬರುತ್ತಾ ಈ ಕಲೆ ದಂಧೆಯಾಗಿ ಮಾರ್ಪಾಡಾಗಿತ್ತು. ಅನಂತರದ ದಿನಗಳಲ್ಲಿ ಚುನಾವಣಾ ಭವಿಷ್ಯವಾಣಿ, ಬೆಟ್ಟಿಂಗ್‌ ದಂಧೆಗಳಿಗೆ ಈ ಮಾರುಕಟ್ಟೆ ಕುಖ್ಯಾತಿ ಪಡೆಯಿತು. ಕಾನೂನೂ ಬಾಹಿರವಾಗಿದ್ದರೂ ಕ್ರಿಕೆಟ್‌, ಐಪಿಎಲ್‌ ಸಂದರ್ಭದಲ್ಲಿ ಇಲ್ಲಿ ಅತಿ ಹೆಚ್ಚಾಗಿ ಬೆಟ್ಟಿಂಗ್‌ ನಡೆಯುತ್ತದೆ ಎಂಬ ಆರೋಪ ಕೇಳಿಬರುತ್ತದೆ.

ಬಿಜೆಪಿ ಕುರಿತ ನುಡಿದ ಭವಿಷ್ಯವೇನು?

ಚುನಾವಣೆಗೂ ಮುನ್ನ ಬಿಜೆಪಿಗೆ 315 ಸೀಟ್‌ಗಳ ಅಂದಾಜು ನೀಡಿದ ಸಟ್ಟಾ ಬಜಾರ್‌, 6ನೇ ಹಂತದ ಚುನಾವಣೆ ಮುಗಿದ ಬಳಿಕ ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಿದೆ. ಹಂತದಿಂದ ಹಂತಕ್ಕೆ ಬಿಜೆಪಿ ಗೆಲುವಿನ ಸಂಖ್ಯೆ ಇಳಿಮುಖವಾಗುತ್ತಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಹೇಳಿದೆ. ಸಟ್ಟಾ ಬಜಾರ್ ನಿಂದ ಹೊರ ಬಿದ್ದ ಭವಿಷ್ಯಗಳು ಹೆಚ್ಚು ನಿಖರವಾಗಿಯೇ ಇದ್ದು ನಿಜ ಕೂಡ ಆಗಿವೆ. ಹೀಗಾಗಿ ಹೊಸ ಭವಿಷ್ಯ ಬಿಜೆಪಿಯ ನಿದ್ದೆಗೆಡಿಸಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಭವಿಷ್ಯ ನುಡಿದಿದ್ದ ಸಟ್ಟಾ ಬಜಾರ್:

ಕರ್ನಾಟಕ ವಿಧಾನಸಭಾ ಚುನಾವಣೆ(Vidhanasabha Election) ವೇಳೆಯಲ್ಲೂ ಇದೇ ಸಟ್ಟಾ ಬಜಾರ್‌ ಅಂಕಿ ಅಂಶಗಳನ್ನು ನೀಡಿತ್ತು. ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎನ್ನಲಾಗ್ತಿತ್ತು. ಆದರೆ ಸಟ್ಟಾ ಬಜಾರ್‌ನಲ್ಲಿ ಮಾತ್ರ ಕಾಂಗ್ರೆಸ್‌ ಪಕ್ಷ 137 ಸ್ಥಾನ ಗೆಲ್ಲುತ್ತದೆ ಎನ್ನಲಾಗಿತ್ತು. ಕಾಂಗ್ರೆಸ್‌ ಪಕ್ಷ 135 ಸ್ಥಾನ ಗೆಲುವು ಕಾಣುವ ಮೂಲಕ ಹೆಚ್ಚು ಕಡಿಮೆ ನಿಖರ ಮಾಹಿತಿ ನೀಡಿತ್ತು.

Advertisement
Advertisement
Advertisement