For the best experience, open
https://m.hosakannada.com
on your mobile browser.
Advertisement

Bus Travel: ಬಸ್ ಕಿಟಕಿ ಹೊರಗೆ ಕೈ ಹಾಕಿದ್ರೆ ಏನಾಗುತ್ತೆ ಇಲ್ನೋಡಿ! ಭಯಾನಕ ವಿಡಿಯೋ ವೈರಲ್!

Bus Travel: ಪ್ರಯಾಣಿಕನೋರ್ವ ಬಸ್‌ ಕಿಟಕಿ ಬದಿಯ ಆಸನದಲ್ಲಿ ಕುಳಿತುಕೊಂಡು ತನ್ನ ಕೈ ಯನ್ನು ಕಿಟಕಿಯಾಚೆ ಹಾಕಿ ಇದೀಗ ತನ್ನ ಕೈಗಳನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.
03:29 PM Jul 04, 2024 IST | ಕಾವ್ಯ ವಾಣಿ
UpdateAt: 03:29 PM Jul 04, 2024 IST
bus travel  ಬಸ್ ಕಿಟಕಿ ಹೊರಗೆ ಕೈ ಹಾಕಿದ್ರೆ ಏನಾಗುತ್ತೆ ಇಲ್ನೋಡಿ  ಭಯಾನಕ ವಿಡಿಯೋ ವೈರಲ್
Advertisement

Bus Travel: ಕೆಲವರು ಪ್ರಯಾಣದ ವೇಳೆ ವಾಂತಿ ಬರುತ್ತೆ ಅಂತ ಪದೇ ಪದೇ ತಲೆಯನ್ನು ವಾಹನದಲ್ಲಿ ಹೊರಗೆ ಹಾಕುತ್ತಿರುತ್ತಾರೆ. ಇನ್ನು ಯಾವುದೇ ವಾಹನದಲ್ಲಿ ಪ್ರಯಾಣಿಸುವಾಗ ಕೆಲವರು ಪದೇ ಪದೇ ಉಗಳಲು ತಲೆಯನ್ನು ಹೊರಗೆ ಹಾಕುವ ಇಂತಹವರು  ಈ ವಿಡಿಯೋ ನೋಡಿ ಎಚ್ಚೆತ್ತುಕೊಳ್ಳಬೇಕು.

Advertisement

Bank Job: ಬ್ಯಾಂಕ್ ನಲ್ಲಿ ಉದ್ಯೋಗವಕಾಶ; ‘IBPS’ ನಿಂದ ಆರು ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

ಮುಖ್ಯವಾಗಿ ಪ್ರಯಾಣದ ವೇಳೆ ಪ್ರಯಾಣಿಕರು ಕೆಲವು ನಿಯಮಗಳನ್ನು ಪಾಲನೆ ಮಾಡೋದನ್ನು ಮರೆಯುತ್ತಾರೆ. ಬಸ್ ಪ್ರಯಾಣದ (Bus Travel)  ವೇಳೆ ಕಿಟಕಿಯ ಹೊರಗೆ ಕೈ, ತಲೆ ಹಾಕಬಾರದು ಎಂಬ ಸೂಚನೆಯನ್ನು ಪಾಲನೆ ಮಾಡಲ್ಲ. ನಿಯಮ ಪಾಲನೆ ಮಾಡದೇ ಬೇಜಾವಾಬ್ದಾರಿ ತೋರಿದ ಪ್ರಯಾಣಿಕನೋರ್ವ ತನ್ನ ಕೈಯನ್ನು ಕಳೆದುಕೊಂಡಿದ್ದಾರೆ.

Advertisement

ಹೌದು, ಪ್ರಯಾಣಿಕನೋರ್ವ ಬಸ್‌ ಕಿಟಕಿ ಬದಿಯ ಆಸನದಲ್ಲಿ ಕುಳಿತುಕೊಂಡು ತನ್ನ ಕೈ ಯನ್ನು ಕಿಟಕಿಯಾಚೆ ಹಾಕಿ ಇದೀಗ ತನ್ನ ಕೈಗಳನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ಸದ್ಯ ಈ ಘಟನೆಯ ದೃಶ್ಯಗಳು ಬಸ್‌ನಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಇದೀಗ  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಯಾಣದ ಸಂದರ್ಭದಲ್ಲಿ ಅಪ್ಪಿತಪ್ಪಿ ಕೈ ಅಥವಾ ತಲೆಯನ್ನು ಹೊರಗೆ ಹಾಕಬೇಡಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

@Deadlykales ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ವಿಡಿಯೋದಲ್ಲಿ ಪ್ರಯಾಣಿಕನೋರ್ವ ಬಸ್‌ ಕಿಟಕಿ ಬದಿಯ ಸೀಟ್ ನಲ್ಲಿ ಕುಳಿತು ತನ್ನ ಎಡಗೈಯನ್ನು ಕಿಟಕಿಯಾಚೆ ಹಾಕಿ ಹೊರಗೆ ನೋಡುತ್ತಿರುತ್ತಾನೆ. ಈ ವೇಳೆ ವೇಗವಾಗಿ ಬಂದ ಮತ್ತೊಂದು ವಾಹನ, ಬಸ್‌ ಬದಿಯಲ್ಲಿಯೇ ಹೋಗಿದೆ. ವಾಹನದ ವೇಗಕ್ಕೆ ಪ್ರಯಾಣಿಕನ ಕೈ ಕಟ್ ಆಗಿದೆ. ಸದ್ಯ ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ.

Ananth Ambani Wedding: ಅನಂತ್‌-ರಾಧಿಕಾ ಸಂಗೀತ್‌ಗೆ ಭಾರತಕ್ಕೆ ಬಂದ ಪಾಪ್‌ ಗಾಯಕ ಜಸ್ಟಿನ್‌ ಬೀಬರ್-83 ಕೋಟಿ ರೂ. ಸಂಭಾವನೆ

Advertisement
Advertisement
Advertisement