ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

White Hair: ಒಂದು ಬಿಳಿ ಕೂದಲು ಕಿತ್ತರೆ ಸುತ್ತ ಮುತ್ತ ಕೂದಲು ಬಿಳಿಯಾಗುತ್ತಾ? ವೈದ್ಯರು ಹೇಳೋದೇನು?

White Hair: ತಮ್ಮ ಕೇಶ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಆದರೆ ಏನು ಮಾಡೋದು, ಹಲವರಿಗೆ ಈ ಬಿಳಿ ಕೂದಲು(White Hair) ಎಂಬ ಪಿಶಾಚಿ ಎಲ್ಲದಕ್ಕೂ ಅಡ್ಡಪಡಿಸುತ್ತದೆ. 
01:35 PM Apr 04, 2024 IST | ಸುದರ್ಶನ್
UpdateAt: 01:40 PM Apr 04, 2024 IST

White Hair: ಹರೆಯದ ಹುಡುಗ, ಹುಡುಗಿಯರಿಗೆ ತಾವು ಸದಾ ಸುಂದದರವಾಗಿರಬೇಕು, ಇತರರಿಗಿಂತ ಚಳ್ದ ಕಾಣಬೇಕು ಎಂದು ಆಸೆ. ಹೀಗಾಗಿ ತಮ್ಮ ಕೇಶ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಆದರೆ ಏನು ಮಾಡೋದು, ಹಲವರಿಗೆ ಈ ಬಿಳಿ ಕೂದಲು(White Hair) ಎಂಬ ಪಿಶಾಚಿ ಎಲ್ಲದಕ್ಕೂ ಅಡ್ಡಪಡಿಸುತ್ತದೆ.

Advertisement

ಇದನ್ನೂ ಓದಿ: RCB ಪುರುಷರ ತಂಡಕ್ಕೆ ಶ್ರೇಯಾಂಕ ಪಾಟೀಲ್ ಸೇರ್ಪಡೆ? : ಐಪಿಎಲ್ ಇತಿಹಾಸದಲ್ಲಿಯೇ ಹೊಸ ಬದಲಾವಣೆ?

ಹೌದು, ಬಿಳಿ ಕೂದಲು ಎಂಬುದು ಇಂದು ಯುವ ಜನತೆಗೆ ದೊಡ್ಡ ಪಿಡುಗಾಗಿದೆ. ದೇಹದಲ್ಲಿನ ಕೆಲವು ವಿಟಮಿನ್ ಕೊರತೆಯಿಂದ ಯಾರ ಅನುಮತಿಯೂ ಇಲ್ಲದೆ, ಬೇಡ ಅಂದರೂ ಬಂದು ವಕ್ಕರಿಸಿಬಿಡುತ್ತವೆ. ಹೀಗೆ ಹಲವರ ತಲೆಯಲ್ಲಿ ಬಿಳಿಕೂದನ್ನು ಕಂಡು, ನಮಗೂ ಹೀಗೆ ಆಗಬಹುದೆಂದು ಅನೇಕರು ಭಯಭೀತರಾಗಿ ತಲೆಯಲ್ಲಿ ಒಂದೆರಡು ಬಿಳಿ ಕೂದಲು ಕಂಡ ತಕ್ಷಣ ಕಿತ್ತು ಹಾಕಿಬಿಡುತ್ತಾರೆ. ಆದರೆ ಇದನ್ನು ಕಂಡವರು ಬಿಳಿ ಕೂದಲು ಕೀಳಬಾರದು, ಕಿತ್ತರೆ ಮತ್ತೆ ಹೆಚ್ಚು ಬಿಳಿಕೂದಲು ಬಂದುಬಿಡುತ್ತವೆ ಎಂದು ಹೆದರಿಸುತ್ತಾರೆ. ಹಾಗಿದ್ರೆ ಇದು ನಿಜವಾ? ಒಂದು ಬಿಳಿ ಕೂದಲು ಕಿತ್ತರೆ ಹೆಚ್ಚು ಹೆಚ್ಚು ಬಿಳಿಕೂದಲು ಬರುತ್ತದೆಯಾ? ವೈದ್ಯರು ಏನು ಹೇಳ್ತಾರೆ ?

Advertisement

ಇದನ್ನೂ ಓದಿ: Vijayapura: ಫಲಿಸಿದ ಸಾವಿರಾರ ಜನರ ಪ್ರಾರ್ಥನೆ; ಬೋರ್‌ವೆಲ್‌ನಿಂದ ಜೀವಂತವಾಗಿ ಹೊರಬಂದ ಸಾತ್ವಿಕ್

ಬಿಳಿ ಕೂದಲು ಕಿತ್ತರೆ ಹೆಚ್ಚಾಗುತ್ತಾ?

ತಜ್ಞ ವೈದ್ಯರ ಪ್ರಕಾರ ಒಂದು ಬಿಳಿ ಕೂದಲನ್ನು ಕೀಳುವುದರಿಂದ ಸುತ್ತಮುತ್ತಲಿನ ಕೂದಲೂ ಬೆಳ್ಳಗಾಗುವುದಿಲ್ಲ. ಬಿಳಿ ಕೂದಲನ್ನು ಕೀಳುವುದರಿಂದ ಪಕ್ಕದಲ್ಲಿರುವ ಕಪ್ಪು ಕೂದಲಿನ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ. ಆದರೆ ತಜ್ಞರು ಹೇಳುವಂತೆ ಬಿಳಿ ಕೂದಲನ್ನು ಕೀಳುವುದರಿಂದ ಕೋಶಕಕ್ಕೆ ಶಾಶ್ವತ ಹಾನಿಯಾಗಬಹುದು ಅಷ್ಟೆ. ಇದರ ಹೊರತಾಗಿ ಯಾವುದೇ ಕೂದಲು ಮತ್ತೆ ಬೆಳೆಯುವುದಿಲ್ಲ.

ಬಿಳಿ ಕೂದಲು ಆಗುವುದೇಕೆ?

ಕೂದಲಿನ ಕಿರುಚೀಲಗಳು ವರ್ಣದ್ರವ್ಯ ಕೋಶಗಳನ್ನು ಹೊಂದಿದ್ದು, ಅದು ಮೆಲನಿನ್ ಎಂಬ ರಾಸಾಯನಿಕವನ್ನು ಉತ್ಪತ್ತಿ ಮಾಡುತ್ತದೆ, ಇದು ಕೂದಲು ಬಿಳಿಯಾಗುವಂತೆ ಮಾಡುತ್ತದೆ. ಅಕಾಲಿಕ ಬಿಳಿ ಕೂದಲಾಗಲು ಸಾಮಾನ್ಯ ಕಾರಣಗಳೆಂದರೆ ಜೆನೆಟಿಕ್ಸ್, ಒತ್ತಡ, ಥೈರಾಯ್ಡ್ ಕಾಯಿಲೆ, ವಿಟಮಿನ್ ಬಿ -12 ಕೊರತೆ ಮತ್ತು ಧೂಮಪಾನ. ಕೂದಲು ಬಿಳಿಯಾಗಲು ಇದೇ ನಿಜವಾದ ಕಾರಣ.

Advertisement
Advertisement
Next Article