BJP ಯಿಂದ ಈಶ್ವರಪ್ಪ ಉಚ್ಛಾಟನೆ - ವಿಜಯೇಂದ್ರ, ಯಡಿಯೂರಪ್ಪ ಹೇಳಿದ್ದೇನು ?
BJP: ಸ್ವ ಪಕ್ಷದ ವಿರುದ್ಧವೇ ಬಂಡಾಯವೆದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧೆಗಿಳಿದಿರುವ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ(K S Eshwarappa) ನವರನ್ನು ರಾಜ್ಯ ಬಿಜೆಪಿ(BJP) ಶಿಸ್ತುಪಾಲನಾ ಸಮಿತಿಯು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ. ಇದೀಗ ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ(B Y Vijayendra) ಹಾಗೂ ಬಿಜೆಪಿ ವರಿಷ್ಠ ಯಡಿಯೂರಪ್ಪನವರು(B S Yadiyurappa) ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Tan Remove: ಬೇಸಿಗೆಗೆ ಮುಖ, ಕೈ, ಕಾಲು ಎಲ್ಲಾ ಟ್ಯಾನ್ ಆಗಿದ್ಯಾ? ಡೋಂಟ್ ವರಿ, ಈ ಟಿಪ್ಸ್ ಫಾಲೋ ಮಾಡಿ
ಯಡಿಯೂರಪ್ಪನವರ ಪ್ರತಿಕ್ರಿಯೆ:
ಬಿಜೆಪಿಯಿಂದ ಹೊರ ಹೋಗುವುದು ಈಶ್ವರಪ್ಪನವರಿಗೆ ಬೇಕಾಗಿತ್ತು. ಹೀಗಾಗಿ ಈಶ್ವರಪ್ಪನವರು ಅಪೇಕ್ಷೆ ಪಟ್ಟಂತೆ ಉಚ್ಚಾಟನೆ ಆಗಿದೆ. ಅದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ರಾಜ್ಯದ ನಾಯಕರು ಯಾರೂ ಹಸ್ತಕ್ಷೇಪ ಮಾಡಿಲ್ಲ. ಬಿಜೆಪಿಗೆ ರಾಜ್ಯದಲ್ಲಿ ಪೂರಕ ವಾತಾವರಣವಿದೆ. 28 ಸ್ಥಾನಗಳನ್ನು ಗೆಲ್ಲಲಿದ್ದೇವೆ. ನರೇಂದ್ರ ಮೋದಿ ಪರ ಅಲೆ ನೆರವಿನಿಂದ ಬಿಜೆಪಿಗೆ ಹೆಚ್ಚು ಸ್ಥಾನ ಪಡೆಯಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: Plastic Water can: ನೀವು ಯಾವಾಗಲೂ ನೀರಿನ ಕ್ಯಾನ್‌ಗಳಿಂದ ನೀರು ಕುಡಿಯುತ್ತೀರಾ? : ಕ್ಯಾನ್ಸರ್, ಮಧುಮೇಹ ಸಮಸ್ಯೆಗಳು ಬರಬಹುದು
ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ:
ಕೆ.ಎಸ್.ಈಶ್ವರಪ್ಪ ಅವರನ್ನು ಉಚ್ಚಾಟನೆ ಮಾಡುವ ಮುನ್ನ ಅವರಿಗೆ ಸಾಕಷ್ಟು ಅವಕಾಶ ನೀಡಲಾಗಿತ್ತು. ಪ್ರತಿ ರಾಜ್ಯದಲ್ಲಿ ಇರುವಂತೆ ಶಿಸ್ತು ಸಮತಿ ನಮ್ಮ ರಾಜ್ಯದಲ್ಲೂ ಇದೆ. ಈಶ್ವರಪ್ಪ ತಿದ್ದಿಕೊಳ್ಳದ ಕಾರಣ ಶಿಸ್ತು ಕ್ರಮ ಜರುಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಕಾರ್ಯಕರ್ತರು ಹೆಚ್ಚಿನ ಶ್ರಮ ಪಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಈಗ ಪೂರಕವಾದ ವಾತಾವರಣವಿದೆ. ಜನ ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.