ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Parliament: ಮೋದಿ ಪ್ರಮಾಣವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ ಮಾಡಿದ್ದೇನು? ಕೈಯಲ್ಲಿ ತೋರಿಸಿದ್ದೇನು?

Parliament: 18ನೇ ಲೋಕಸಭಾ ಅಧಿವೇಶನ(Parliament Session) ನಿನ್ನೆ(ಜೂ 24)ಯಿಂದ ಶುರುವಾಗಿದೆ. ಚುನಾಯಿತ ಸಂಸದರು ನೂತನ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ.
08:25 AM Jun 25, 2024 IST | ಸುದರ್ಶನ್
UpdateAt: 08:25 AM Jun 25, 2024 IST
Advertisement

Parliament: 18ನೇ ಲೋಕಸಭಾ ಅಧಿವೇಶನ(Parliament Session) ನಿನ್ನೆ(ಜೂ 24)ಯಿಂದ ಶುರುವಾಗಿದೆ. ಚುನಾಯಿತ ಸಂಸದರು ನೂತನ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಅಂತೆಯೇ ಮೊದಲಿಗೆ ಪ್ರಧಾನಿ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

Advertisement

Viral Video: ಸಾಕಿ ಸಲಹಿದ ಮಾವುತನನ್ನೇ ತುಳಿದು ಕೊಂದ ಆನೆ – ಭಯಾನಕ ವಿಡಿಯೋ ವೈರಲ್!!

Advertisement

ಹೌದು, ಎಲ್ಲ ಸಂಸದರಿಗೂ ಮೊದಲನೆಯಾವರಾಗಿ ಪ್ರಧಾನಿ ಮೋದಿವರು (PM Modi) ಪ್ರಮಾಣವಚನ ಸ್ವೀಕರಿಸಿದ್ದು ಈ ವೇಳೆ ಮೋದಿ ಮೋದಿ ಎಂಬ ಘೋಷಣೆಗಳು ಮೊಳಗಿವೆ. ಆದರೆ ಈ ಸಮಯದಲ್ಲಿ ವಿಪಕ್ಷನಾಯಕನ ಸ್ಥಾನದಲ್ಲಿ ಕುಳಿತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಪಾಕೆಟ್ ಸಂವಿಧಾನವನ್ನು ಎತ್ತಿ ಹಿಡಿದು ಮೋದಿಗೆ ಪ್ರದರ್ಶಿಸಿದ್ದಾರೆ. ಅವರೊಂದಿಗೆ ಕೆಲ ಕಾಂಗ್ರೆಸ್ ನಾಯಕರೂ ರಾಹುಲ್ ಗಾಂಧಿಯನ್ನು ಅನುಸರಿಸಿದ್ದಾರೆ. ಜೊತೆಗೆ ಒಬ್ಬರ ಮುಖ ಒಬ್ಬರು ನೋಡಿಕೊಂಡು ನಕ್ಕಿದ್ದಾರೆ.

ಮೋದಿಯವರು ಡಯಾಸ್ ಮುಂದೆ ಬರುತ್ತಿದ್ದಂತೆ ರಾಹುಲ್ ಸಂವಿಧಾನವನ್ನು ಪ್ರದರ್ಶಿಸಿದ್ದನ್ನು ಕಂಡ ಬಿಜೆಪಿ (BJP) ಸಂಸದರು ಎದ್ದು ನಿಂತು ಮೇಜು ಬಡಿದು ಮೋದಿ ಮೋದಿ ಎಂದು ಬೊಬ್ಬೆ ಹಾಕಿದ್ದಾರೆ. ಮೋದಿಯವರು ಕೂಡ ರಾಹುಲ್ ಗಾಂಧಿ ಕಡೆಗೆ ಓರೆ ಗಣ್ಣಲ್ಲಿ ನೋಡಿ ಕಿರುನಗೆ ಬೀರಿದ್ದಾರೆ.

Kabab Colour Ban: ಗೋಬಿ ಬೆನ್ನಲ್ಲೇ ರಾಜ್ಯದಲ್ಲಿ ಕೆಂಪು ಕೆಂಪು ಕಬಾಬ್ ಕೂಡ ಬ್ಯಾನ್ !!

Advertisement
Advertisement