For the best experience, open
https://m.hosakannada.com
on your mobile browser.
Advertisement

SSLC ಯ ನಂತರ ಯಾವ ಕೊರ್ಸ್ ಮಾಡಬೇಕು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ !

SSLC: ಹತ್ತನೇ ತರಗತಿಯ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ಕೋರ್ಸ್‌ಗಳ ವಿವರಗಳನ್ನು ನೋಡೋಣ. ಇಂಟರ್‌ಗೆ ಸೇರುವುದಾದರೆ, ಇಂಟರ್‌ಮೀಡಿಯೇಟ್ ಅಥವಾ ಪ್ಲಸ್ 2 ಮುಖ್ಯವಾಗಿ ಕಲೆ, ವಿಜ್ಞಾನ, ವಾಣಿಜ್ಯ ಕೋರ್ಸ್‌ಗಳನ್ನು ಒಳಗೊಂಡಿರುತ್ತದೆ.
08:23 AM May 11, 2024 IST | ಸುದರ್ಶನ್ ಬೆಳಾಲು
UpdateAt: 11:09 AM May 11, 2024 IST
sslc ಯ ನಂತರ ಯಾವ ಕೊರ್ಸ್ ಮಾಡಬೇಕು  ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
Image Credit after10what
Advertisement

SSLC: 10ನೇ ತರಗತಿ ನಂತರ ಹಲವು ವಿದ್ಯಾರ್ಥಿಗಳಲ್ಲಿ ಗೊಂದಲವಿರುತ್ತದೆ. ಇಂಟರ್ ಗೆ ಸೇರಬೇಕಾ, ಡಿಪ್ಲೊಮಾಗೆ ಹೋಗಬೇಕಾ, ಎರಡರ ಬದಲು ಬೇಗ ಉದ್ಯೋಗಾವಕಾಶ ಸಿಗುವ ಔದ್ಯೋಗಿಕ ಕೋರ್ಸ್ ಗಳಿಗೆ ಸೇರುವುದು ಒಳ್ಳೆಯದ ಹೀಗೆ ಹಲವು ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ. ತಜ್ಞರ ಪ್ರಕಾರ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಯಾವ್ಯಾವ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದಿದ್ದಾರೆ, ಯಾವ ವಿಷಯಗಳಲ್ಲಿ ಆಸಕ್ತಿ ಮತ್ತು ಪಾಂಡಿತ್ಯವಿದೆ, ಇವು ಮುಂದೆ ತಮ್ಮ ಗುರಿ ತಲುಪಲು ಎಷ್ಟು ಸಹಾಯ ಮಾಡುತ್ತವೆ ಎಂಬ ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು.  ಈಗ ಹತ್ತನೇ ತರಗತಿಯ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ಕೋರ್ಸ್‌ಗಳ ವಿವರಗಳನ್ನು ನೋಡೋಣ.

Advertisement

ಇದನ್ನೂ ಓದಿ: ಪಾತ್ರೆಯಿಂದ ಹಾಲು ಉಕ್ಕಿ ಚೆಲ್ಲುತ್ತೆ ಅನ್ನೋ ಟೆನ್ಷನ್ ಬಿಡಿ! ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

ಇಂಟರ್‌ಗೆ ಸೇರುವುದಾದರೆ, ಇಂಟರ್‌ಮೀಡಿಯೇಟ್ ಅಥವಾ ಪ್ಲಸ್ 2 ಮುಖ್ಯವಾಗಿ ಕಲೆ, ವಿಜ್ಞಾನ, ವಾಣಿಜ್ಯ ಕೋರ್ಸ್‌ಗಳನ್ನು ಒಳಗೊಂಡಿರುತ್ತದೆ.

Advertisement

ವಿಜ್ಞಾನ ವಿಭಾಗದಲ್ಲಿ :
PCMB : Physics, Chemistry , Mathematics & Biology
PCMC : Physics , Chemistry , Mathematics & Computer Science
PCME : Physics , Chemistry , Mathematics & Electronics

ಕಲಾ ವಿಭಾಗದಲ್ಲಿ :
HEPS : History, Economics, Political Science and Sociology
HEPK : History, Economics, Political Science and optional Kannada

ವಾಣಿಜ್ಯ ವಿಭಾಗ :
CEBA : Computer Science, Economics, Business Studies, Accountancy
HEBA : History, Economics, Business Studies, Accountancy
EBAC : Economics, Business Studies, Accountancy, and Computer Science

ಪಾಲಿಟೆಕ್ನಿಕ್ ಕೋರ್ಸ್‌ಗಳು :
ಡಿಪ್ಲೊಮಾ ಕೋರ್ಸ್‌ಗಳು ತಾಂತ್ರಿಕ, ತಾಂತ್ರಿಕೇತರ ಮತ್ತು ಕೃಷಿ ವಿಭಾಗಗಳಲ್ಲಿ ಮೂರು ವರ್ಷಗಳ ಅವಧಿಯೊಂದಿಗೆ ಲಭ್ಯವಿದೆ. ಪಾಲಿಟೆಕ್ನಿಕ್ ಕೋರ್ಸ್‌ಗಳಿಗೆ ಪ್ರವೇಶಗಳು ESET ಪರೀಕ್ಷೆಯ ಮೂಲಕ ಪಾಲಿಟೆಕ್ನಿಕ್ ಮುಗಿದ ನಂತರ ಎರಡನೇ ವರ್ಷದಲ್ಲಿ ಬಿ.ಟೆಕ್ ಅಥವಾ ಬಿಇಗೆ ನೇರ ಪ್ರವೇಶವಿದೆ. ತಾಂತ್ರಿಕ ವಿಭಾಗದಲ್ಲಿ ಸಿವಿಲ್, ಎಲೆಕ್ಟಿಕಲ್. ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್, ಆಟೋಮೊಬೈಲ್ ಇತ್ಯಾದಿ ಕೋರ್ಸ್‌ಗಳು ಲಭ್ಯವಿದೆ.

ತಾಂತ್ರಿಕೇತರ ವಿಭಾಗ :
ಡಿಪ್ಲೊಮಾ ಇನ್ ಟ್ರಾವೆಲ್ ಅಂಡ್ ಟೂರಿಸಂ, ಡಿಪ್ಲೊಮಾ ಇನ್ ಫುಡ್ ಟೆಕ್ನಾಲಜಿ,
ಡಿಪ್ಲೊಮಾ ಇನ್ ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್, ಡಿಪ್ಲೊಮಾ ಇನ್ ಡೈರಿ ಟೆಕ್ನಾಲಜಿ ಇತ್ಯಾದಿ ಕೋರ್ಸ್‌ಗಳಿವೆ.
ಕೃಷಿ ಇಲಾಖೆಯು ಡಿಪ್ಲೊಮಾ ಇನ್ ಆಗ್ರಿಕಲ್ಡರ್, ಡಿಪ್ಲೊಮಾ ಇನ್ ಸೀಡ್ ಟೆಕ್ನಾಲಜಿಯಂತಹ ಕೋರ್ಸ್‌ಗಳನ್ನು ಹೊಂದಿದೆ.

ಐಟಿಐ ಕೋರ್ಸ್‌ಗಳು :
ಎರಡು ವರ್ಷಗಳ ಐಟಿಐ ಕೋರ್ಸ್‌ಗಳನ್ನು ಸರ್ಕಾರವು ಪ್ಲಸ್ 2 ಗೆ ಸಮಾನವಾದ ಕೋರ್ಸ್‌ಗಳಾಗಿ ಗುರುತಿಸಿದೆ. ಐಟಿಐನಲ್ಲಿ ಎಲೆಕ್ನಿಷಿಯನ್, ಫಿಟ್ಟರ್, ಡೀಸೆಲ್ ಮೆಕ್ಯಾನಿಕ್, ಪ್ಲಂಬರ್, ವೆಲ್ಡರ್ ಮತ್ತಿತರ ಕೋರ್ಸ್‌ಗಳು ಲಭ್ಯವಿವೆ. ಎರಡು ವರ್ಷಗಳ ಕೋರ್ಸ್ ನಂತರ ಆಯಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ. ಅಥವಾ ಆಯಾ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗಕ್ಕೆ ಯೋಜನೆ ರೂಪಿಸಬಹುದು.

ವೃತ್ತಿಪರ ಕೋರ್ಸ್‌ಗಳು :
ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್, ಎಕ್ಸ್ ರೇ ಟೆಕ್ನಿಷಿಯನ್, ಕ್ಲಿನಿಕಲ್ ಅಸಿಸ್ಟೆಂಟ್, ಹಾಸ್ಪಿಟಲ್ ಅಡ್ಮಿನಿಸ್ಟೇಷನ್, ಇಂಡಸ್ಟ್ರಿಯಲ್ ಮ್ಯಾನೇಜ್‌ಮೆಂಟ್, ಆಫೀಸ್ ಅಸಿಸ್ಟೆಂಟ್, ಡೆಂಟಲ್ ಟೆಕ್ನಿಷಿಯನ್ ಇತ್ಯಾದಿ ಕೋರ್ಸ್‌ಗಳು ಲಭ್ಯವಿದೆ. ಕೋರ್ಸ್‌ಗೆ ಅನುಗುಣವಾಗಿ, ಇವುಗಳ ಅವಧಿಯು ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಬದಲಾಗುತ್ತದೆ. ಈ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ತಕ್ಷಣ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Free Ration: ರೇಷನ್ ಕಾರ್ಡ್’ದಾರರಿಗೆ ಇನ್ಮುಂದೆ ಕಾಂಡೋಮ್ ಸೇರಿ ಈ 46 ವಸ್ತು ಉಚಿತ !

Advertisement
Advertisement
Advertisement