ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Weird News: ಮೈ ಒರೆಸುವ ಟವೆಲ್​, ಕಾಲಿಗೆ ಹಾಕೋ ಚಪ್ಪಲಿಗೂ ಕೂಡಾ ಎಕ್ಸ್‌ಪೈರಿ ಡೇಟ್ ಇದೆಯಂತೆ! ವಿಚಿತ್ರ ಆದ್ರು ಸತ್ಯ

Weird News ವಿಶೇಷ ಅಂದರೆ ಕಾಲಿಗೆ ಧರಿಸುವ ಚಪ್ಪಲಿ ಶೂ ಗಳಿಂದ ಹಿಡಿದು, ಮುಖ, ದೇಹ ಒರೆಸುವ ಟವೆಲ್​ ಗು ಕೂಡಾ ಎಕ್ಸ್‌ಪೈರಿ ಡೇಟ್ ಇದೆಯಂತೆ.
10:12 AM Jul 12, 2024 IST | ಕಾವ್ಯ ವಾಣಿ
UpdateAt: 10:12 AM Jul 12, 2024 IST
Advertisement

Weird News: ನಿಮಗೊಂದು ವಿಲಕ್ಷಣ ಸುದ್ದಿ (Weird News) ಇಲ್ಲಿದೆ ನೋಡಿ. ಸಾಮಾನ್ಯವಾಗಿ ಎಕ್ಸ್​​ಪೈರಿ ಡೇಟ್​ ಮುಗಿದ ಬಳಿಕ ಯಾವುದೇ ವಸ್ತು ಆಗಲಿ, ಆಹಾರವಾಗಲಿ ಅದು ಅಪ್ರಯೋಜಕ ಮತ್ತು ಅದರಿಂದ ಅಪಾಯವೇ ಹೆಚ್ಚು. ವಾಸ್ತವವಾಗಿ, ಎಲ್ಲಾ ವಸ್ತುಗಳು ಎಕ್ಸ್​​ಪೈರಿ ಡೇಟ್ ಹೊಂದಿವೆ. ಇದು ಒಂದು ಐಟಂ ಅನ್ನು ಎಷ್ಟು ದಿನಗಳವರೆಗೆ ಬಳಸಬಹುದು ಎಂದು ಅದು ಹೇಳುತ್ತದೆ. ವಿಶೇಷ ಅಂದರೆ ಕಾಲಿಗೆ ಧರಿಸುವ ಚಪ್ಪಲಿ ಶೂ ಗಳಿಂದ ಹಿಡಿದು, ಮುಖ, ದೇಹ ಒರೆಸುವ ಟವೆಲ್​ ಗು ಕೂಡಾ ಎಕ್ಸ್‌ಪೈರಿ ಡೇಟ್ ಇದೆಯಂತೆ. ಹೌದು, ಏನಿದು ವಿಚಿತ್ರ ಅಲ್ವಾ? ಬನ್ನಿ ನೀವು ಊಹಿಸದೆ ಇರುವ ಯಾವ ವಸ್ತುವಿಗೆಲ್ಲ ಎಕ್ಸ್‌ಪೈರಿ ಡೇಟ್ ಇದೆ ನೋಡೋಣ.

Advertisement

ಕೆಲವು ವಿಧದ ವಸ್ತುಗಳ ಮೇಲೆ ನಾವು ಎಕ್ಸ್‌ಪೈರಿ ಡೇಟ್ ನೋಡೋದಿಲ್ಲ. ವಾಸ್ತವವಾಗಿ ಅವುಗಳಿಗೆ ಎಕ್ಸ್‌ಪೈರಿ ಡೇಟ್ ಇದೆ ಎಂದು ಯಾರೂ ಭಾವಿಸುವುದಿಲ್ಲ. ಉದಾಹರಣೆಗೆ ಅಡುಗೆಮನೆಯಲ್ಲಿ ಬಳಸುವ ಸ್ಕ್ರಬ್ಬಿಂಗ್​ಗಳು ಸಹ ಎಕ್ಸ್​ಪೈರಿ ಡೇಟ್​ ಹೊಂದಿದ್ದು. ಇದನ್ನು ಬಳಸಲು ಕೇವಲ 6 ತಿಂಗಳು ಮಾತ್ರ ಅವಕಾಶ.

ಇನ್ನು ಪ್ರತಿಯೊಬ್ಬರ ಮುಖ, ದೇಹ ಒರೆಸಲೆಂದು ಟವೆಲ್​ ಬಳಸುತ್ತಾರೆ. ಆದರೆ ಟವೆಲ್‌ಗಳಿಗೆ ಮುಕ್ತಾಯ ದಿನಾಂಕವಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಒಂದು ಟವೆಲ್ ಅನ್ನು 1 ರಿಂದ 3 ವರ್ಷಗಳವರೆಗೆ ಮಾತ್ರ ಬಳಸಬೇಕು ಎಂದು ತಜ್ಞರು ಹೇಳುತ್ತಾರೆ. ಎಷ್ಟೇ ಸ್ವಚ್ಛವಾಗಿ ಬಳಸಿದರೂ ಅದಕ್ಕಿಂತ ಹೆಚ್ಚು ಬಳಸಬಾರದು ಎನ್ನುತ್ತಾರೆ ತಜ್ಞರು.

Advertisement

ಇನ್ನು ಅನೇಕ ಜನರು ವರ್ಷಗಳಿಂದ ಒಂದೇ ಹಲ್ಲುಜ್ಜುವ ಬ್ರಷ್‌ಗಳನ್ನು ಬಳಸುತ್ತಿರುತ್ತಾರೆ. ಅದು ಎಷ್ಟೇ ಸವೆದರೂ ಬಳಸುತ್ತಲೇ ಇರುತ್ತಾರೆ. ವಾಸ್ತವವಾಗಿ ಬ್ರಷ್‌ನ ಜೀವಿತಾವಧಿ ಕೇವಲ 3 ತಿಂಗಳುಗಳು. ಇದನ್ನು ಹೆಚ್ಚು ದಿನ ಬಳಸಿದರೆ ಹಲ್ಲಿನ ಸಮಸ್ಯೆ ಕಾಡುತ್ತದೆ ಎನ್ನುತ್ತಾರೆ ತಜ್ಞರು.

 ಅಲ್ಲದೆ ಸ್ನಾನಗೃಹದ ಟೈಲ್ಸ್, ಅಡುಗೆಮನೆಯ ಟೈಲ್ಸ್, ಗ್ಲಾಸ್, ಟಿವಿ ಇತ್ಯಾದಿಗಳನ್ನು ಸ್ವಚ್ಛಗೊಳಿಸಲು ಬಳಸುವ ಸಾಬೂನು ನೀರನ್ನು 3 ತಿಂಗಳವರೆಗೆ ಮಾತ್ರ ಬಳಸಬೇಕು. ಅದರ ನಂತರ ಅದು ತನ್ನ ಸುಗಂಧ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಇದನ್ನು ಕೇವಲ 3 ತಿಂಗಳು ಮಾತ್ರ ಬಳಸಬೇಕು ಎನ್ನಲಾಗಿದೆ.

ಇನ್ನು ಅನೇಕ ಜನರು ಜಿಮ್, ಜಾಗಿಂಗ್ ಮತ್ತು ಆರೋಗ್ಯಕ್ಕಾಗಿ ಓಡುತ್ತಾರೆ. ಇದಕ್ಕಾಗಿ ರನ್ನಿಂಗ್ ಶೂಗಳನ್ನು ಸಹ ಬಳಸಲಾಗುತ್ತದೆ. ವರ್ಷಗಟ್ಟಲೆ, ಶೂ ಸವೆದು ಹೋದ್ರೂ ಅದನ್ನೇ ಬಳಸುತ್ತಿರುತ್ತಾರೆ. ಆದ್ರೆ ತಜ್ಞರ ಪ್ರಕಾರ, ಶೂ ಅನ್ನು ಒಂದು ವರ್ಷ ಮಾತ್ರ ಬಳಸಬೇಕಂತೆ. ಇನ್ನು ರಬ್ಬರ್​ ರೀತಿಯ ಚಪ್ಪಲಿಗಳು 6 ತಿಂಗಳಷ್ಟು ಎಕ್ಸ್​​ಪೈರಿ ಡೇಟ್​​ ಹೊಂದಿರುತ್ತದೆಯಂತೆ.

Kannada Anchor Aparna: ಅಪರ್ಣಾ ವೈಯಕ್ತಿಕ ಜೀವನದ ಮಾಹಿತಿ; ಮಕ್ಕಳು…ಪತಿ…ಹುಟ್ಟಿದ ಊರು

Related News

Advertisement
Advertisement