For the best experience, open
https://m.hosakannada.com
on your mobile browser.
Advertisement

Weight Loss Tips: ಈರುಳ್ಳಿಯ ಈ ಭಾಗವನ್ನು ತಿಂದರೆ ವಾರ ಬೇಡ, ಕೆಲವೇ ದಿನಗಳಲ್ಲಿ ತೂಕ ಇಳಿದು ಹೋಗುತ್ತೆ !!

03:19 PM Dec 06, 2023 IST | ಕಾವ್ಯ ವಾಣಿ
UpdateAt: 03:44 PM Dec 06, 2023 IST
weight loss tips  ಈರುಳ್ಳಿಯ ಈ ಭಾಗವನ್ನು ತಿಂದರೆ ವಾರ ಬೇಡ  ಕೆಲವೇ ದಿನಗಳಲ್ಲಿ ತೂಕ ಇಳಿದು ಹೋಗುತ್ತೆ

Weight Loss Tips: ಇತ್ತೀಚೆಗೆ ಬಹುತೇಕರಿಗೆ ತೂಕ ಕರಗಿಸುವ ಚಿಂತೆ ಹೆಚ್ಚಾಗಿದೆ. ಯಾಕೆಂದರೆ ಆಹಾರದಲ್ಲಿ ಕೆಲವು ಪದಾರ್ಥ ವನ್ನು ಯಾವ ರೀತಿ ಬಳಸಬೇಕು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಅದರಲ್ಲೂ ಕೊಂಚ ಘಾಟು ಪರಿಮಳದ ಈರುಳ್ಳಿ ಹೂವನ್ನು ಈ ರೀತಿ ಉಪಯೋಗಿಸಿ ದೇಹವನ್ನು ಕರಗಿಸಲು (Weight Loss with Spring Onions) ಸಾಧ್ಯವಿದೆ ಎನ್ನುವುದು ನಿಮಗೆ ತಿಳಿದಿದೆಯೇ.
ಹೌದು, ಈರುಳ್ಳಿ ಹೂವು ಅಥವಾ ಸ್ಪ್ರಿಂಗ್‌ ಆನಿಯನ್ ತೂಕ ಇಳಿಸುವ ಪ್ರಯತ್ನದಲ್ಲಿ ಇರುವವರಿಗೆ ಇದು ಸೂಕ್ತವಾದ ತರಕಾರಿ.

Advertisement

ಒಟ್ಟಿನಲ್ಲಿ ಕೊಂಚ ಘಾಟು ಘಮವಿರುವ ಹೂವಿದು. ಹಾಗಾಗಿ ಹಸಿಯಾಗಿ ತಿನ್ನಬಹುದಾದ ಕೋಸಂಬರಿ, ಸಲಾಡ್‌ಗಳಿಗೆ ಹೊಂದುತ್ತದೆ. ಸಾರು, ಸೂಪ್‌ಗಳಿಗೆ ಬಳಸಿದರೆ ರುಚಿಗೆ ಮೋಸವಿಲ್ಲ. ಯಾವುದೇ ತರಕಾರಿಗಳ ಪಲ್ಯಗಳ ಜತೆ ಇದನ್ನು ಉಪಯೋಗಿಸಬಹುದು. ಹುಳಿ, ಸಾಂಬಾರ್‌ ಗೆ ಇದು ಬೆಸ್ಟ್ ಆಗಿದೆ .

ನಾರು :
ಒಂದು ಕಪ್‌ ಕತ್ತರಿಸಿದ ಈರುಳ್ಳಿ ಹೂವಿನಲ್ಲಿ 1.8 ಗ್ರಾಂನಷ್ಟು ನಾರು ದೊರೆಯುತ್ತದೆ. ಇದೀಗ ದೇಹದ ಚಯಾಪಚಯವನ್ನು ಹೆಚ್ಚಿಸುವುದಕ್ಕೆ ಸಹಕಾರಿ. ದೀರ್ಘ ಕಾಲದವರೆಗೆ ಹಸಿವು ಮುಂದೂಡಲು ನೆರವಾಗುತ್ತದೆ. ಕಳ್ಳ ಹಸಿವನ್ನು ದೂರ ಮಾಡಿ, ಸಿಕ್ಕಿದ್ದನ್ನೆಲ್ಲಾ ತಿನ್ನದಂತೆ ಬಾಯಿ ಕಟ್ಟಲು ಸಹಾಯ ಮಾಡುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಇದು ಉಪಕಾರಿ.

Advertisement

ಕ್ಯಾಲರಿ ಕಡಿಮೆ:
ಸುಮಾರು 100 ಗ್ರಾಂನಷ್ಟು ಕತ್ತರಿಸಿದ ಈರುಳ್ಳಿ ಹೂವಿನಲ್ಲಿ ಇರುವುದು 31 ಕ್ಯಾಲರಿಗಳು ಮಾತ್ರ. ಅದರಲ್ಲೂ ೦.1ರಷ್ಟು ಕ್ಷೀಣವಾದ ಕೊಬ್ಬಿನಂಶ. ಹಾಗಾಗಿ ಹಸಿರು ತರಕಾರಿಗಳನ್ನು ಉಪಯೋಗಿಸುವ ಎಲ್ಲಾ ಅಡುಗೆಗಳಲ್ಲಿ ಈರುಳ್ಳಿ ಹೂವನ್ನು ಧಾರಾಳವಾಗಿ ಬಳಸಬಹುದು.

ಇದನ್ನು ಓದಿ: KMFGhee: 'ನಂದಿನಿ ತುಪ್ಪ'ಕ್ಕೆ ಮತ್ತೆ ಬಿಗ್ ಶಾಕ್- ಎಷ್ಟೇ ಪ್ರಯತ್ನಿಸಿದ್ರು ತಿರುಪತಿಗೆ ನೋ ಎಂಟ್ರಿ ಎಂದ TTD

ಚಯಾಪಚಯ ಹೆಚ್ಚಳ:
ಈರುಳ್ಳಿ ಹೂವಿನಲ್ಲಿನ ಅಲ್ಲಿಸಿನ್‌ ಅಂಶಕ್ಕೆ ದೇಹದ ಚಯಾಪಚಯವನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ದೇಹಕ್ಕೆ ಬೇಕಾಗುವ ಶಕ್ತಿಗಿಂತ ಕಡಿಮೆಯೇ ಶಕ್ತಿ ಒದಗಿಸಿದರೆ ಮತ್ತು ದೊರೆಯುವ ಶಕ್ತಿಗಿಂತ ಹೆಚ್ಚಿನ ಕ್ಯಾಲರಿಗಳು ಖರ್ಚಾದರೆ ತೂಕ ಇಳಿಸುವುದು ಕಷ್ಟವಾಗುವುದಿಲ್ಲ.

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ:
ಜಠರ ಮತ್ತು ಕರುಳುಗಳಲ್ಲಿ ಇರಬೇಕಾದ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಪ್ರೊಬಯಾಟಿಕ್‌ ಎಷ್ಟು ಮುಖ್ಯವೊ ಪ್ರಿಬಯಾಟಿಕ್‌ ಆಹಾರಗಳೂ ಅಷ್ಟೇ ಮುಖ್ಯ. ಈರುಳ್ಳಿ ಹೂವು ಒಳ್ಳೆಯ ಪ್ರಿಬಯಾಟಿಕ್‌ ಸತ್ವಗಳನ್ನು ಹೊಂದಿದ್ದು, ಜೀರ್ಣಾಂಗಗಳ ಆರೋಗ್ಯ ವೃದ್ಧಿಗೆ ಅನುಕೂಲ ಒದಗಿಸುತ್ತದೆ.

ಡೈಯುರೇಟಿಕ್‌:
ದೇಹದಲ್ಲಿರುವ ಹೆಚ್ಚುವರಿ ನೀರನ್ನು ಹೊರಹಾಕುವ ಸಾಮರ್ಥ್ಯ ಈರುಳ್ಳಿ ಹೂವಿಗಿದೆ. ದೇಹ ಉಬ್ಬರಿಸಿದಂತೆ ಅನಿಸುವುದು, ಹೊಟ್ಟೆ ಉಬ್ಬರದ ಭಾವ- ಇಂಥವುಗಳು ಕಡಿಮೆಯಾಗಿ ದೇಹಕ್ಕಿರುವ ಅನಗತ್ಯ ತೂಕ ಇಳಿಯುತ್ತದೆ.

Advertisement
Advertisement