ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Weather Update: ಬಿಸಿಲಿನ ಬೇಗೆಗೆ, ಬಸವಳಿದ ಬೆಂಗಳೂರಿಗರಿಗೆ ತಂಪೆರವ ಸುದ್ದಿ ನೀಡಿದ ಹವಾಮಾನ ಇಲಾಖೆ

Weather Update: ನೆಲದ ಮೇಲೆ ಹೆಜ್ಜೆ ಇಡದಷ್ಟರ ಮಟ್ಟಿಗೆ ಕಾವು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಅವಮಾನ ಇಲಾಖೆ ಬೆಂಗಳೂರಿಗರಿಗೆ ತಂಪೆರೆಯುವ ಸುದ್ದಿ ನೀಡಿದೆ.
11:16 AM Apr 05, 2024 IST | ಸುದರ್ಶನ್
UpdateAt: 11:19 AM Apr 05, 2024 IST
Advertisement

Weather Update: ಬಿರು ಬೇಸಿಗೆಯ ಕಾವು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ನೆಲದ ಮೇಲೆ ಹೆಜ್ಜೆ ಇಡದಷ್ಟರ ಮಟ್ಟಿಗೆ ಕಾವು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಅವಮಾನ ಇಲಾಖೆ ಬೆಂಗಳೂರಿಗರಿಗೆ ತಂಪೆರೆಯುವ ಸುದ್ದಿ ನೀಡಿದೆ.

Advertisement

ಇದನ್ನೂ ಓದಿ: Puttur: ಪ್ರೀತಿ-ಪ್ರೇಮ ವಿಚಾರ; ಹುಡುಗಿ ವಿಷಯಕ್ಕೆ ಬರಬೇಡ ಎಂದು ಯುವಕನಿಗೆ ಹಲ್ಲೆ, ಜೀವಬೆದರಿಕೆ; ಪ್ರಕರಣ ದಾಖಲು

ಬೇಸಿಗೆಯ ಕಾವಿಗೆ ನಲುಗುತ್ತಿರುವ ಬೆಂಗಳೂರಿಗರಿಗೆ ಹವಾಮಾನ ಇಲಾಖೆಯು ಒಂದಷ್ಟು ಸಮಾಧಾನ ತರುವಂತಹ ಸುದ್ದಿಯನ್ನು ನೀಡಿದೆ. ಇನ್ನೇನು ಯುಗಾದಿ ಹಬ್ಬ ಸಮೀಪಿಸುತ್ತಿದ್ದು, ಯುಗಾದಿ ಬಳಿಕ ಏಪ್ರಿಲ್ 13 ಮತ್ತು 14 ರ ಬಳಿಕ‌ ನಗರದಾದ್ಯಂತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ: Road Accident: ಬೆಂಗಳೂರಿನಲ್ಲಿ ಭಯಾನಕ ಆಕ್ಸಿಡೆಂಟ್‌; ಸ್ಕೂಟರ್‌ ಸವಾರನ ಮೇಲೆ ಎರಗಿದ ಕೋಲೆ ಬಸವ

ಇತ್ತೀಚೆಗೆ ರಾಜ್ಯದ ಹಲವು ಕಡೆ ಮಳೆರಾಯನ ದರ್ಶನವಾಗಿದ್ದು, ಇದೀಗ ಬೆಂಗಳೂರಿನಲ್ಲಿಯೂ ಮಳೆರಾಯನ ಆಗಮನದ ನಿರೀಕ್ಷೆ ದಟ್ಟವಾಗಿದೆ. ಈ ಮೂಲಕ ಸಿಲಿಕಾನ್ ಸಿಟಿ ಮಂದಿ ತಣ್ಣನೆಯ ನಿಟ್ಟುಸಿರು ಬಿಡುವಂತಾಗಿದೆ.

ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಬುಧವಾರದಂದು ಮಳೆಯಾಗಿದೆ ಇನ್ನು ದಾವಣಗೆರೆ, ಧಾರವಾಡ, ಚಿಕ್ಕಮಂಗಳೂರು, ಬೀದರ್, ಮೈಸೂರು ಭಾಗಗಳು ವರ್ಷದ ಮೊದಲ ಮಳೆಯನ್ನು ಕಂಡಿವೆ. ಕೊಡಗು ಚಿಕ್ಕಮಗಳೂರು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ ಇನ್ನು ಏಪ್ರಿಲ್ ತಿಂಗಳಲ್ಲಿ ಉತ್ತಮ ಮಳೆ ಆಗುವ ಸಾಧ್ಯತೆ ಇದೆ.

ಇನ್ನು ಏಪ್ರಿಲ್ 14 ರ ನಂತರ ಅಶ್ವಿನಿ ಮಳೆ ಆರಂಭವಾಗಲಿದ್ದು ಬೆಂಗಳೂರಿನಲ್ಲಿ ವರ್ಷದ ಮೊದಲ ಮಳೆ ಆಗುವ ಸಾಧ್ಯತೆ ಇದೆ

Related News

Advertisement
Advertisement