ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mangaluru: ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ಪಕ್ಷಿಗಳಿಗೆ ನೀರುಣಿಸಿ : ಆದೇಶ ಹೊರಡಿಸಿದ ದಕ್ಷಿಣ ಕನ್ನಡ ಡಿಸಿ ಮುಲ್ಲೈ ಮುಗಿಲನ್

Mangaluru: ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಎಲ್ಲಾ ಸರ್ಕಾರಿ ಕಚೇರಿಗಳ ಕಟ್ಟಡಗಳ ಪಕ್ಷಿಗಳಿಗೆ ದಣಿವಾರಿಸಿಕೊಳ್ಳಲು ನೀರಿನ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಿದ್ದಾರೆ.
02:16 PM Apr 09, 2024 IST | ಸುದರ್ಶನ್
UpdateAt: 03:11 PM Apr 09, 2024 IST
Advertisement

Mangaluru: ಈ ಬಿರು ಬೇಸಿಗೆಯ ಸಂದರ್ಭದಲ್ಲಿ ಮನುಷ್ಯರಾದ ನಾವು ನಮಗೆ ಬೇಕಾದ ಹಾಗೆ ನೀರಿನ ಲಭ್ಯತೆ ಇರುವ ಹಾಗೆ ನೋಡಿಕೊಳ್ಳುತ್ತೇವೆ. ಆದರೆ ಪ್ರಾಣಿ ಪಕ್ಷಿಗಳು ಎಲ್ಲಿ ಹೋಗಬೇಕು? ಅವುಗಳು ತಮ್ಮ ವೇದನೆಯನ್ನು ಯಾರ ಬಳಿ ಹೇಳಬೇಕು? ಅಲ್ಲವೇ.

Advertisement

ಪ್ರಾಣಿ-ಪಕ್ಷಿಗಳ ಕುರಿತು ಅಪಾರ ಪ್ರೀತಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈ ಬೇಸಿಗೆಯ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳ ಕಟ್ಟಡಗಳ ಮೇಲೆ ನೆರಳು ಇರುವ ಜಾಗಗಳಲ್ಲಿ ಟಬ್‌, ಪಾತ್ರೆ ಮತ್ತು ಮಡಕೆಗಳಲ್ಲಿ ನೀರು ತುಂಬಿಸಿಡುವ ಮೂಲಕ ಪಕ್ಷಿಗಳಿಗೆ ದಣಿವಾರಿಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಿದ್ದಾರೆ.

ಈ ಬಾರಿ ಅತಿಯಾದ ಬಿಸಿಲಿನಿಂದಾಗಿ ಎಲ್ಲೆಡೆ ಬರ ಪರಿಸ್ಥಿತಿ ಆವರಿಸಿದೆ. ಅನೇಕ ಕಡೆ ಬೋರ್ವೆಲ್ ಗಳು ಬತ್ತಿ ಹೋಗಿ ನೀರು ಕುಡಿಯಲು ಸಹ ಇಲ್ಲದಂತಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಉಷ್ಣಾಂಶ ಹೆಚ್ಚುತ್ತಿದ್ದು, ಪ್ರಾಣಿ ಪಕ್ಷಿಗಳಿಗೆ ಸರಿಯಾಗಿ ಕುಡಿಯಲು ನೀರು ಸಿಗದೆ ಸಾಯುವ ಅಪಾಯವಿದೆ.

Advertisement

ಇದನ್ನೂ ಓದಿ: Weather Report: ಬಿಸಿಲಿನಿಂದ ಒದ್ದಾಡುವವರಿಗೆ ಗುಡ್ ನ್ಯೂಸ್! ಸದ್ಯದಲ್ಲೇ ಬರಲಿದೆ ಮಳೆ

ಈ ಬಿರು ಬೇಸಿಗೆಯಲ್ಲಿ ಅಧಿಕ ತಾಪಮಾನದಿಂದ ಪ್ರಾಣಿ ಪಕ್ಷಿಗಳಿಗೆ ಹೆಚ್ಚಿನ ನೀರಿನ ಅಗತ್ಯತೆ ಇದ್ದು, ಬಿಸಿಲಿನ ಶಾಖದಿಂದ ಅವು ತಮ್ಮನ್ನು ರಕ್ಷಿಸಿಕೊಳ್ಳಲು, ಅವಳು ಅವುಗಳಿಗೆ ಕುಡಿಯಲು ನೀರು ಸಿಗುವಂತೆ ಮಾಡಬೇಕು ಎಂದು ಡಿಸಿ ಮುಲ್ಲೈ ಮುಗಿಲನ್ ಸುತ್ತೋಲೆ ಹೊರಡಿಸಿದ್ದಾರೆ

ಇದನ್ನೂ ಓದಿ:  Karnataka Postal Department: ಇನ್ಮುಂದೆ ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೇ ಬರುತ್ತೆ ತಾಜಾ ಮಾವಿನ ಹಣ್ಣು - ಹೀಗೆ ಬುಕ್ ಮಾಡಿ !!

Advertisement
Advertisement