For the best experience, open
https://m.hosakannada.com
on your mobile browser.
Advertisement

Voting by a Minor: ಅಪ್ರಾಪ್ತ ಮಗನಿಂದ ವೋಟ್ ಮಾಡಿಸಿದ ಬಿಜೆಪಿ ನಾಯಕ !!

Voting by a Minor: ಬಿಜೆಪಿ(BJP) ನಾಯಕನೊಬ್ಬನ ತನ್ನ ಅಪ್ರಾಪ್ತ ಮಗನಿಂದ ಮತದಾನ(Voting by a Minor) ಮಾಡಿಸಿದ್ದಾನೆ. ಇಷ್ಟೇ ಅಲ್ಲದೆ ಇದನ್ನು ವಿಡಿಯೋ ಮಾಡಿಕೊಂಡು, ಪೋಸ್ಟ್ ಕೂಡ ಮಾಡಿದ್ದಾನೆ.
08:34 AM May 11, 2024 IST | ಸುದರ್ಶನ್
UpdateAt: 08:34 AM May 11, 2024 IST
voting by a minor  ಅಪ್ರಾಪ್ತ ಮಗನಿಂದ ವೋಟ್ ಮಾಡಿಸಿದ ಬಿಜೆಪಿ ನಾಯಕ
Advertisement

Voting by a Minor: ಕೆಲವು ಘಟನೆ, ಸನ್ನಿವೇಶಗಳನ್ನು ನೋಡಿದಾಗ ನಮ್ಮ ದೇಶದಲ್ಲಿ ಬಡವರಿಗೆ, ಸಿರಿವಂತರಿಗೆ, ನಾಯಕರಿಗೆ ಒಂದು ಕಾನೂನು ಅನಿಸುತ್ತದೆ. ಕಾನೂನು ಇರುವುದೇ ಬಡವರು, ಸಾಮನ್ಯ ವರ್ಗದವರು ಪಾಲಿಸಲು ಅನಿಸುತ್ತದೆ. ಹಣವಂತರು ಹೇಗಾದರು ಇರಬಹುದು. ಕೆಲವೊಮ್ಮೆ ಜನ ಸಾಮಾನ್ಯರಿಗೆ ಸಿಗದ ವಿಶೇಷ ಸವಲತ್ತುಗಳು ಅವರಿಗೆ ಸಿಕ್ಕಿಬಿಡುತ್ತವೆ. ಅದು ಕಾನೂನು ಬಾಹಿರ ಆದರೂ ಕೂಡಾ! ಅಂಥದ್ದೇ ಒಂದು ಘಟನೆ ಮಧ್ಯ ಪ್ರದೇಶದಲ್ಲಿ(Madhyapradesh) ನಡೆದಿದ್ದು, ಬಿಜೆಪಿ(BJP) ನಾಯಕನೊಬ್ಬನ ತನ್ನ ಅಪ್ರಾಪ್ತ ಮಗನಿಂದ ಮತದಾನ(Voting by a Minor) ಮಾಡಿಸಿದ್ದಾನೆ. ಇಷ್ಟೇ ಅಲ್ಲದೆ ಇದನ್ನು ವಿಡಿಯೋ ಮಾಡಿಕೊಂಡು, ಪೋಸ್ಟ್ ಕೂಡ ಮಾಡಿದ್ದಾನೆ.

Advertisement

ಹೌದು, ಮಧ್ಯಪ್ರದೇಶದ ಭೋಪಾಲ್ನ ಬೆರಾಸಿಯಾ(Berasiya) ಮತಗಟ್ಟೆಯಲ್ಲಿ ಬಿಜೆಪಿ ನಾಯಕನ ಅಪ್ರಾಪ್ತ ಮಗ ಮತ ಚಲಾಯಿಸುತ್ತಿರುವ ವಿಡಿಯೋ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 14 ಸೆಕೆಂಡುಗಳ ಈ ವಿಡಿಯೋವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರ ಮೆಹರ್ ಅವರ ಫೇಸ್ಬುಕ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: SSLC ಯ ನಂತರ ಯಾವ ಕೊರ್ಸ್ ಮಾಡಬೇಕು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ !

Advertisement

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಬಿಜೆಪಿ ಪಂಚಾಯತ್ ಮುಖಂಡ ವಿನಯ್ ಮೆಹರ್ ಅವರ ಪುತ್ರ ಎಂದು ಹೇಳಲಾದ ಬಾಲಕ ತನ್ನ ತಂದೆಯ ಪರವಾಗಿ ಇವಿಎಂನಲ್ಲಿ ಮತ ಚಲಾಯಿಸುತ್ತಿರುವುದು ಕಂಡುಬಂದಿದೆ. ಬಿಜೆಪಿ ನಾಯಕ ಹುಡುಗನ ಜೊತೆಗಿದ್ದರು ಎನ್ನಲಾಗಿದೆ. ಬಾಲಕ ಇವಿಎಂ ಯಂತ್ರದಲ್ಲಿ ಗುಂಡಿ ಒತ್ತುವ ಮೂಲಕ ಮತದಾನ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಭಾರೀ ವಿವಾದದ ಅಲೆ ಎಬ್ಬಿಸಿದೆ.

ಇಷ್ಟೇ ಅಲ್ಲದೆ 14 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಇವಿಎಂ(EVM) ಯಂತ್ರದಲ್ಲಿ ಕಮಲದ ಚಿಹ್ನೆ ಪಕ್ಕ ಇರುವ ಬಟನ್‌ ಅನ್ನು ಬಾಲಕ ಒತ್ತುವ ದೃಶ್ಯ ಮಾತ್ರವಲ್ಲ, ವಿವಿ ಪ್ಯಾಟ್ ಯಂತ್ರದಲ್ಲಿ ಕಮಲದ ಚಿಹ್ನೆ ಮೂಡುವ ದೃಶ್ಯವೂ ಇದೆ. ಇದಾದ ಬಳಿಕ ಮತ ಹಾಕಿದ ಕೆಲಸ ಮುಗಿಯಿತು ಎಂದು ಬಿಜೆಪಿ ನಾಯಕ ವಿನಯ್ ಮೆಹೆರ್ ಹೇಳುವ ಆಡಿಯೋ ಕೂಡಾ ರೆಕಾರ್ಡ್‌ ಆಗಿದೆ.

ಇದನ್ನೂ ಓದಿ: Free Ration: ರೇಷನ್ ಕಾರ್ಡ್’ದಾರರಿಗೆ ಇನ್ಮುಂದೆ ಕಾಂಡೋಮ್ ಸೇರಿ ಈ 46 ವಸ್ತು ಉಚಿತ !

Advertisement
Advertisement
Advertisement