For the best experience, open
https://m.hosakannada.com
on your mobile browser.
Advertisement

Vitla Bank Theft Case: ಕರ್ನಾಟಕ ಬ್ಯಾಂಕ್‌ ಕಳ್ಳತನ ಪ್ರಕರಣ; ಮಹತ್ವದ ಮಾಹಿತಿ ಬಹಿರಂಗ

09:55 AM Mar 07, 2024 IST | ಹೊಸ ಕನ್ನಡ
UpdateAt: 10:27 AM Mar 07, 2024 IST
vitla bank theft case  ಕರ್ನಾಟಕ ಬ್ಯಾಂಕ್‌ ಕಳ್ಳತನ ಪ್ರಕರಣ  ಮಹತ್ವದ ಮಾಹಿತಿ ಬಹಿರಂಗ

Vitla: ಅಡ್ಯನಡ್ಕದ ಕರ್ನಾಟಕ ಬ್ಯಾಂಕ್‌ ಶಾಖೆಯೊಂದರಲ್ಲಿ ಲಾಕರ್‌ ಬ್ರೇಕ್‌ ಮಾಡಿ ನಗ ನಗದು ದೋಚಿದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಮಹತ್ವದ ಮಾಹಿತಿಯೊಂದು ಬಹಿರಂಗಗೊಂಡಿದೆ. ಕಳ್ಳರು ಕೃತ್ಯ ಹಾಗೂ ಕಳ್ಳತನ ಮಾಡಿದ ನಗ, ನಗದನ್ನು ಕೇರಳ ರಾಜ್ಯದ ಮೈದಾನವೊಂದರಲ್ಲಿ ಹೂತಿಟ್ಟಿರುವುದಾಗಿ ಹಾಗೂ ಕೃತ್ಯದ ಸಂದರ್ಭ ಲಾಕರ್‌ ತುಂಡರಿಸಲು ವೆಲ್ಡಿಂಗ್‌ ಕೆಲಸದಲ್ಲಿ ನೈಪುಣ್ಯತೆಯನ್ನು ಹೊಂದಿದ ವ್ಯಕ್ತಿಯನ್ನು ಬಳಸಿಕೊಂಡಿರುವ ಮಾಹಿತಿಯೊಂದು ವರದಿಯಾಗಿದೆ. ಈ ಕುರಿತು ಆರೋಪಿಗಳು ಪೊಲೀಸರ ಬಳಿ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ: Bengaluru: ಹಣಕ್ಕಾಗಿ ತಮ್ಮದೇ ಪೋರ್ನ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಬೆಂಗಳೂರು ಜೋಡಿ - ಗೊತ್ತಾಗಿದ್ದೇಗೆ?

ಈ ಬ್ಯಾಂಕ್‌ ಕಳ್ಳತನ ಪ್ರಕರಣಕ್ಕೆ ಕುರಿತಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಪೊಲೀಸ್‌ ಇಲಾಖೆ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಕೇರಳ ರಾಜ್ಯದ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಂಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಹೂತಿಟ್ಟಿರುವುದಾಗಿ ಹೇಳಿದ್ದಾರೆ ಆರೋಪಿಗಳೆಂದು ವರದಿಯಾಗಿದೆ.

Advertisement

ಕಳೆದೆರಡು ದಿನಗಳೀಮದ ಪ್ರಕ್ರಿಯೆ ನಡೆದಿದ್ದು, ಕಳ್ಳರು ತೋರಿಸಿದ ಜಾಗದಲ್ಲಿ ಭೂಮಿಯನ್ನು ಅಗೆದು ಶೋಧ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಯಾವುದೇ ಉಪಯೋಗವಾಗಿಲ್ಲ ಎನ್ನಲಾಗಿದೆ.

ಪೊಲೀಸರಿಗೆ ಲಾಕರ್‌ಗಳನ್ನು ತುಂಡರಿಸಿದ ಶೈಲಿಯನ್ನು ಗಮನಿಸಿದಾಗ ಇದು ಕಬ್ಬಿಣ ತುಂಡರಿಸುವಲ್ಲಿ ನೈಪುಣ್ಯತೆಯನ್ನು ಹೊಂದಿರುವ ಕೆಲಸ ಎಂದು ಅಂದಾಜಾಗಿದೆ. ವೆಲ್ಡರ್‌ ಹಾಗೂ ಬ್ಯಾಂಕ್‌ನಲ್ಲಿ ಈ ಹಿಂದೆ ಇದ್ದ ಅಧಿಕಾರಿಯೋರ್ವರು ಸಂಬಂಧಿಕರಾಗಿದ್ದು, ಅವರಿಂದ ಈ ಕಳ್ಳತನ ಕೃತ್ಯ ಎಸಗಲು ಮಾಹಿತಿಯನ್ನು ಪಡೆಯಲಾಗಿತ್ತೇ? ಈ ಹಿಂದೆ ಬ್ಯಾಂಕ್‌ನ ಕೆಲವು ವೆಲ್ಡಿಂಗ್‌ ಕೆಲಸ ಮಾಡಲು ಇದೇ ವ್ಯಕ್ತಿಯನ್ನು ಬರ ಹೇಳಿದ್ದಾರಾ? ಎನ್ನುವ ಸಂಶಯವೊಂದು ಇದೀಗ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ.

ಬ್ಯಾಂಕ್‌ ಲಾಕರ್‌ ಬ್ರೇಕ್‌ ನಂತರ ಬಾಯಾರಿಯ ವ್ಯಕ್ತಿ ಶ್ರೀಮಂತರು ಖರ್ಚು ಮಾಡುವ ರೀತಿಯಲ್ಲಿ ಯಥೇಚ್ಛವಾಗಿ ಹಣ ಖರ್ಚು ಮಾಡುವುದು ಕಂಡು ಬಂದಿದೆ. ಗೃಹಪಯೋಗಿ ಸಾಮಾಗ್ರಿ ಖರೀದಿ, ಸ್ನೇಹಿತರ ಜೊತೆ ಇದ್ದಾಗ ವಿಪರೀತ ಖರ್ಚು, ವಾಲೀಬಾಲು ಆಡುವ ಸಂದರ್ಭದಲ್ಲಿ ಸಾವಿರಾರು ಹಣ ಬೆಟ್ಟಿಂಗ್‌ ಕಟ್ಟುವುದು, ಇದೆಲ್ಲ ನೋಡಿ, ಅನುಮಾನಗೊಂಡು ಕೆಲವರು ಈತನನ್ನು ಪ್ರಶ್ನೆ ಮಾಡಿದಾಗ ತನಗೆ ಲಾಟರಿಯಲ್ಲಿ ಹಣ ಬಂದಿದೆ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.

ಇದರಿಂದ ಸಂಶಯಗೊಂಡ ಒಂದಿಬ್ಬರು ಈತನಿಗೆ ಬಾರ್‌ನಲ್ಲಿ ಕಂಠಪೂರ್ತಿ ಕುಡಿಸಿ ಬಾಯಿಬಿಡಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಈ ವ್ಯಕ್ತಿ ಬ್ಯಾಂಕ್‌ ಕಳ್ಳತನದ ಮಾಹಿತಿಯನ್ನು ಹೇಳಿದ್ದಾನೆ. ಇದನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಈಗ ಈತ ಪೊಲೀಸರ ವಶದಲ್ಲಿದ್ದಾನೆ ಎನ್ನಲಾಗಿದೆ. ಈತ ಈ ಹಿಂದೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ವರದಿಯಾಗಿದೆ.

Advertisement
Advertisement