ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Virat Kohli: ಪಂಚೆ ಉಟ್ಟವರಿಗೆ ಕೊಹ್ಲಿ ರೆಸ್ಟೋರೆಂಟ್'ಗೆ ಇಲ್ಲ ಪ್ರವೇಶ- ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ರಾ ಟೀಂ ಇಂಡಿಯಾ ಆಟಗಾರ ?!

04:57 PM Dec 05, 2023 IST | ಅಶ್ವಿನಿ ಹೆಬ್ಬಾರ್
UpdateAt: 04:58 PM Dec 05, 2023 IST
Advertisement

Virat Kohli: ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಮಾತ್ರವಲ್ಲದೇ ಅನೇಕ ಜಾಹೀರಾತು ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅಷ್ಟೆ ಅಲ್ಲದೇ, ವಿರಾಟ್ ಕೊಹ್ಲಿ ದೇಶದ ವಿವಿಧ ನಗರಗಳಲ್ಲಿ ಹಲವು ರೆಸ್ಟೊರೆಂಟ್‌ಗಳನ್ನು (Restaurants) ನಡೆಸುತ್ತಿದ್ದಾರೆ. ಇವುಗಳಲ್ಲಿ ಮುಂಬೈನಲ್ಲಿರುವ One8 ಹೆಸರಿನ ರೆಸ್ಟೊರೆಂಟ್‌ ಕೂಡ ಒಂದಾಗಿದ್ದು, ಇದೀಗ ಈ ರೆಸ್ಟೊರೆಂಟ್ನಲ್ಲಿ ನಡೆದಿರುವ ಘಟನೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

Advertisement

ಮುಂಬೈನಲ್ಲಿರುವ ಒನ್ 8 ಹೆಸರಿನ ರೆಸ್ಟೊರೆಂಟ್ಗೆ ವ್ಯಕ್ತಿಯೊಬ್ಬ ಭಾರತದ ಸಾಂಪ್ರದಾಯಿಕ ಉಡುಗೆಯನ್ನು(Indian Traditional Dress)ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಬಂದಿದ್ದಾರೆ. ಆದರೆ ಈ ಸಂದರ್ಭ ಆ ವ್ಯಕ್ತಿ ಧರಿಸಿದ ಉಡುಗೆ ರೆಸ್ಟೊರೆಂಟ್ ಡ್ರೆಸ್ ಕೋಡ್ ನಿಯಮಾವಳಿಗೆ ವಿರುದ್ದವಾಗಿದೆ ಎಂದು ಅಲ್ಲಿನ ಸೆಕ್ಯೂರಿಟಿ ಗಾರ್ಡ್ಗಳು ಆ ವ್ಯಕ್ತಿಯನ್ನು ರೆಸ್ಟೊರೆಂಟ್ ಒಳಗೆ ಪ್ರವೇಶಿಸಲು ಅನುವು ಮಾಡಿಕೊಟ್ಟಿಲ್ಲ ಎನ್ನಲಾಗಿದೆ.

Advertisement

ಇದನ್ನು ಓದಿ: Gruha Lakshmi Scheme: ಗೃಹಲಕ್ಷ್ಮೀ ಹಣ ವರ್ಗಾವಣೆಯಲ್ಲಿ ಹೊಸ ಟ್ವಿಸ್ಟ್- ಬೇಗ ಹಣ ಪಡೆಯಲು ಮಹಿಳೆಯರೇ ಹೀಗೆ ಮಾಡಿ

ರೆಸ್ಟೊರೆಂಟ್ ಸೆಕ್ಯೂರಿಟಿ ಗಾರ್ಡ್ ನಡೆಯಿಂದ ಬೇಸರ ಮಾಡಿಕೊಂಡ ಆ ವ್ಯಕ್ತಿ ರೆಸ್ಟೊರೆಂಟ್ ಗೇಟ್ ಮುಂದೆ ನಿಂತು ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಇದೀಗ ವಿರಾಟ್ ಕೊಹ್ಲಿ ವಿರುದ್ಧ ಪರ ಕೆಲವರು ಬ್ಯಾಟ್ ಮಾಡಿದರೆ, ಮತ್ತೆ ಕೆಲವರು ಕೊಹ್ಲಿ ವಿರುದ್ದ ಕಿಡಿಕಾರಿದ್ದಾರೆ.

https://x.com/Sandy_Offfl/status/1730799067205447961?s=20

Related News

Advertisement
Advertisement