For the best experience, open
https://m.hosakannada.com
on your mobile browser.
Advertisement

Viral video: ಟಿವಿ ಶೋನಲ್ಲಿ ನಿರೂಪಕನಿಗೆ ಮರ್ಯಾದೆ ಇಲ್ವಾ..ಎನ್ನುತ್ತಾ ಹಿಗ್ಗಾಮುಗ್ಗ ಥಳಸಿದ ಗಾಯಕಿ- ಅಷ್ಟಕ್ಕೂ ಆತ ಕೇಳಿದ್ದೇನು?

10:02 AM Feb 29, 2024 IST | ಹೊಸ ಕನ್ನಡ
UpdateAt: 10:16 AM Feb 29, 2024 IST
viral video  ಟಿವಿ ಶೋನಲ್ಲಿ ನಿರೂಪಕನಿಗೆ ಮರ್ಯಾದೆ ಇಲ್ವಾ  ಎನ್ನುತ್ತಾ ಹಿಗ್ಗಾಮುಗ್ಗ ಥಳಸಿದ ಗಾಯಕಿ  ಅಷ್ಟಕ್ಕೂ ಆತ ಕೇಳಿದ್ದೇನು
Advertisement

Viral video: ರಿಯಾಲಿಟಿ ಶೋನಲ್ಲಿ ಅದೊಂದು ಪ್ರಶ್ನೆ ಕೇಳಿದ್ದಕ್ಕೆ ಗಾಯಕಿಯೊಬ್ಬರು ನಿರೂಪಕನಿಗೆ ಕೆನ್ನೆಗೆ ಬಾರಿಸಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

Advertisement

https://www.instagram.com/reel/C3uxSL8pglq/?igsh=djg5ZmZuam8zZ3Jx

ಇದನ್ನೂ ಓದಿ: Karnataka Politics: 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡಿದ ಸರಕಾರ

Advertisement

ಹೌದು, ಕಾರ್ಯಕ್ರಮದ ಸಹ ನಿರೂಪಕನಾಗಿದ್ದ ಹಾಸ್ಯ ಕಲಾವಿದ ಶೆರ್ರಿ ನನ್ಹಾ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಜಿಯಾ ಮಂಜೂರ್‌(Shajiya manjoor) ಅವರ ಹನಿಮೂನ್‌ ಕುರಿತಾಗಿ ಕಾಮೆಂಟ್‌ ಮಾಡಿದ್ದರು. ನಮ್ಮ ಮದುವೆಯಾದ ಬಳಿಕ ನಿಮ್ಮನ್ನು ನೇರವಾಗಿ ಮಾಂಟೆ ಕಾರ್ಲೋಗೆ ಹನಿಮೂನ್‌ಗೆ ಕರೆದುಕೊಂಡು ಹೋಗುತ್ತೇನೆ. ನೀವು ಯಾವ ಕ್ಲಾಸ್‌ನ ವಿಮಾನದ ಟಿಕೆಟ್‌ನಲ್ಲಿ ಪ್ರಯಾಣ ಮಾಡಲು ಇಚ್ಛಿಸ್ತಿರೀ ಅಂತಾ ತಿಳಿಸ್ತೀರಾ' ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದ್ದಾರೆ. ಆದರೆ ಇದು ಶಾಜಿಯಾ ಮಂಜೂರ್‌ಗೆ ತಮಾಷೆಯಾಗಿ ಕಂಡಿಲ್ಲ. ಆಗ ಸಿಟ್ಟಾದ ಆಕೆ, ನಿರೂಪಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಮಾತ್ರವಲ್ಲದೆ, ನಿರೂಪಕನ ಕೆನ್ನೆಗೂ ಬಾರಿಸಿ ಹಲ್ಲೆ ಮಾಡಿದ್ದಾರೆ.

ಅಂದಹಾಗೆ ಇದೇ ಶೋನಲ್ಲಿ ಹಿಂದೊಮ್ಮೆ ಬಂದಿದ್ದ ಶಾಜಿಯಾ ಮಂಜೂರ್‌ ಆಕರ್ಷಕವಾಗಿ ತಮಾಷೆ ಮಾಡಿದ್ದರು. ಈ ಬಾರಿಯೂ ಕೂಡ ಇದು ತಮಾಷೆಯಾಗಿರಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಈ ಬಾರಿ ಹೀಗೆ ನಡೆಯಲಿಲ್ಲ. ಒಟ್ಟಿನಲ್ಲಿ ಈ ಘಟನೆ ಇದು ಪ್ರಧಾನ ನಿರೂಪಕ ಹೈದರ್‌ ಮಾತ್ರವಲ್ಲದೆ, ಸೆಟ್‌ನಲ್ಲಿದ್ದ ಎಲ್ಲರಿಗೂ ಆಘಾತ ನೀಡಿತ್ತು.

ಸದ್ಯ ಪಾಕಿಸ್ತಾನದ ಗಾಯಕಿ ಶಾಜಿಯಾ ಮಂಜೂರ್‌ ಅವರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌(Viral video)ಆಗಿದೆ.

Advertisement
Advertisement
Advertisement