Viral Video: ಏನಿದು ಆಶ್ಚರ್ಯ.. ಸೈಕಲ್ ಹೊಡೆಯುವ ಹಸು, ವಿಡಿಯೋ ನೋಡಿದ್ರೆ ನೀವೇ ಬೆರಗಾಗ್ತೀರಾ !!
Viral Video: ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗೋ ಕೆಲವು ವಿಶೇಷವಾದ ವಿಡಿಯೋಗಳು ನಿಜಕ್ಕೂ ಮೈ ರೋಮಾಂಚನಗೊಳಿಸುತ್ತಾ ಅಚ್ಚರಿ ಉಂಟುಮಾಡುತ್ತದೆ. ಅಂತೆಯೇ ಇದೀಗ ನಾವು ಹೇಳ ಹೊರಟಿರುವ, ತೋರಿಸಲು ಹೊರಟಿರುವ ವಿಡಿಯೋ ಬಗ್ಗೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಅನಿಸ್ಬೋದು.
ಹೌದು, ಇನ್ಸ್ಟಾಗ್ರಾಮ್(Instagram) ನಲ್ಲಿ ವೈರಲ್ ಆದ ವಿಡಿಯೋ ಒಂದರಲ್ಲಿ ಹಸುವೊಂದು ಸೈಕಲ್ ಹೊಡೆಯುತ್ತಿದೆ. ಸಿಂಧಿ ಹಸುವೊಂದು ಸೈಕಲ್ ಏರಿಕೊಂಡು, ಪೆಡಲ್ ತುಳಿಯುತ್ತಾ, ತನ್ನ ಕತ್ತಿನಲ್ಲಿ ಹ್ಯಾಂಡಲ್ ಹಿಡಿದು, ಸಖತ್ ಬ್ಯಾಲೆನ್ಸ್ ನಲ್ಲಿ ಸೈಕಲ್ ಹೊಡೆಯುತ್ತಾ ಜಾಲಿ ರೇಡ್ ಹೊಡೆಯುತ್ತಿರುವುದುನ್ನು ಕಾಣಬಹುದು.
ಆದರಿದು ನಿಜವಾದ ವಿಡಿಯೋ ಅಲ್ಲದಿರಬಹುದು. ಯಾಕೆಂದರೆ ಹಸುವೊಂದು ಹಾಗೆ ಸೈಕಲ್ ಏರಿ ಬ್ಯಾಲೆನ್ಸ್ ಮಾಡಲು ಸಾಧ್ಯವೇ ಇಲ್ಲ ಬಿಡಿ. ಸೈಕಲ್ ಏರುವುದಾದರೂ ಹೇಗೆ ಹೇಳಿ? ಹೀಗಾಗಿ ಇದೊಂದು ಫೇಕ್ ಆದ, ಎಡಿಟ್ ಮಾಡಿದ ವಿಡಿಯೋ ಆಗಿದೆ. ನೆಟ್ಟಿಗರೂ ಕೂಡ ಇದನ್ನು ನಂಬಲು ಸಾದ್ಯವೇ ಇಲ್ಲ ಬಿಡಿ ಎಂದಿದ್ದಾರೆ. ಆದರೆ ಅಪ್ಲೋಡ್ ಆದ ಕೆಲವೇ ಸಮಯದಲ್ಲಿ ಲಕ್ಷಗಟ್ಟಲೆ ವೀವ್ಸ್, ಲೈಕ್ ಪಡೆದುಕೊಂಡಿದೆ ಈ ವಿಡಿಯೋ.