ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Viral Video: ಇಲಿ ಮರಿಗಳ ಗುಂಪಿನಂತೆ ಕಾಣುವ ಇದು ಏನೆಂದು ಗುರುತಿಸುವಿರಾ? ಗೊತ್ತಾದರೆ ನೀವೇ ಬೆಚ್ಚಿಬೀಳುತ್ತೀರಾ !!

Viral Video: ಇದು ಇಲಿಗಳ ವಿಡಿಯೋ ಅಂದುಕೊಂಡಿರಾ? ಇಲಿಗಳಿಗಿಂತಲೂ ನೂರಾರು, ಸಾವಿರಾರು ಪಟ್ಟು ದೊಡ್ಡದಾಗಿರುವ, ದೈತ್ಯಾಕಾರವಾಗಿರುವ ಆನೆಗಳ ಹಿಂಡು.
12:43 PM Jun 25, 2024 IST | ಸುದರ್ಶನ್
UpdateAt: 02:10 PM Jun 25, 2024 IST
Advertisement

Viral Video: ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗೋ ಕೆಲವು ವಿಶೇಷವಾದ ವಿಡಿಯೋಗಳು ನಿಜಕ್ಕೂ ಮೈ ರೋಮಾಂಚನಗೊಳಿಸುತ್ತವೆ. ಅದು ವೈರಲ್ ಆಗೋದು ಮುಖ್ಯವಲ್ಲ, ಅವುಗಳನ್ನು ಸೆರೆಹಿಡಿಯುತ್ತಾರಲ್ಲಾ? ಅವರು ನಿಜಕ್ಕೂ ಗ್ರೇಟ್!! ಅಂತೆಯೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ, ಅದೂ ನಿನ್ನೆಯಿಂದ ಒಂದು ವಿಡಿಯೋ ಭಾರೀ ವೈರಲ್(Viral Video) ಆಗ್ತಿದ ಅದನ್ನು ಕಂಡರೆ ಎಂತವರೂ ಮೂಕವಿಸ್ಮಿತರಾಗುತ್ತಾರೆ.

Advertisement

Nandini Milk Price: ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ; ನಂದಿನಿ ಹಾಲಿನ ದರ ಹೆಚ್ಚಳ- ಕೆಎಂಎಫ್‌

Advertisement

ವೈರಲ್ ಆದ ವಿಡಿಯೋ ನೋಡಿದರೆ ಕಂಡಿತಾ ನೀವು ಮೊದಲು ಊಹಿಸುವುದು ಇದು ಇಲಿಗಳ ಗುಂಪು, ಅವು ನೀರಿನಲ್ಲಿ ಈಜುತ್ತಾ ದಡ ಸೇರುತ್ತಿವೆ ಎಂದು. ಇದು ನಿಮ್ಮ ಕಣ್ತಪ್ಪಿನ ಸಮಸ್ಯೆ ಅಲ್ಲ. ಪ್ರತಿಯೊಬ್ಬರಿಗೂ ಹಾಗೆ ಅನಿಸುವುದು. ಆದರೆ ಇದು ಇಲಿಗಳಲ್ಲ. ಇಲಿಗಳಿಗಿಂತಲೂ ನೂರಾರು, ಸಾವಿರಾರು ಪಟ್ಟು ದೊಡ್ಡದಾಗಿರುವ, ದೈತ್ಯಾಕಾರವಾಗಿರುವ ಆನೆಗಳ ಹಿಂಡು.

ನೀವು ಆನೆಗಳನ್ನು(Elephant)ಕಾಡಿನಲ್ಲಿ, ಝೂ ನಲ್ಲಿ ಓಡಾಡುವುದನ್ನು ನೋಡಿದ್ದೀರ. ಈಗೀಗ ಊರುಗಳಲ್ಲೂ ತೋಟಗಳಲ್ಲೂ ಅವುಗಳ ಆರ್ಭಟ ವಿಪರೀತವಾಗಿದೆ ಬಿಡಿ. ಆದರೆ ನೂರಾರು ಆನೆಗಳ ಇಡೀ ಹಿಂಡೊಂದು ಒಟ್ಟಿಗೆ ಈಜುತ್ತಾ ನದಿ ದಾಟುತ್ತದೆ ಎಂಬುದನ್ನು ನೀವು ಊಹಿಸಿರಲೂ ಸಾಧ್ಯವಿಲ್ಲ. ಅದು ಬಹುಶಃ ಕಲ್ಪನೆಗೆ ಮೀರಿದ್ದು. ಆದರೆ ಇದನ್ನು ನೀವೀಗ ನೋಡಬಹುದು. ನೋಡಿ ಅಚ್ಚರಿ ಪಡಬಹುದು.


ಹೌದು, ಅಸ್ಸಾಂನಲ್ಲಿ(Assam) ಛಾಯಾಗ್ರಾಹಕರೊಬ್ಬರು ಆನೆಗಳ ವಿಡಿಯೋ ಚಿತ್ರೀಕರಿಸಿದ್ದಾರೆ. ಆ ವೀಡಿಯೋ ನೋಡಿದರೆ ಬೆಚ್ಚಿ ಬೀಳುತ್ತೀರಿ. ಅದರಲ್ಲಿ ಆನೆಗಳ ಗುಂಪೊಂದು ಈಜುತ್ತಾ ನದಿ ದಾಟುತ್ತಿರುವ ಅದ್ಭುತ ದೃಶ್ಯ ಸೆರೆಯಾಗಿದೆ. ಅಸ್ಸಾಂನ ಪ್ರಮುಖ ನದಿ ಬಂದರುಗಳಲ್ಲಿ ಒಂದಾದ ನಿಮತಿ ಘಾಟ್‌ನಲ್ಲಿ(Nimati Ghat) ಚಿತ್ರೀಕರಿಸಲಾದ ಈ ಡೋನ್ ದೃಶ್ಯಗಳು ಆನೆಗಳ ಹಿಂಡು ಬ್ರಹ್ಮಪುತ್ರ ನದಿಯನ್ನು ದಾಟುತ್ತಿರುವುದನ್ನು ತೋರಿಸುತ್ತದೆ.

ಆನೆಗಳನ್ನು ಯಾವಾಗಲೂ ಭೂಮಿಯಲ್ಲಿ ವಾಸಿಸುವ ಭವ್ಯ ಜೀವಿಗಳಾಗಿ ನೋಡಲಾಗಿದ್ದರೂ, ಈ ವೀಡಿಯೊ ಅವರ ಈಜು ಕೌಶಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಛಾಯಾಗ್ರಾಹಕ ಸಚಿನ್ ಭಾರಾಲಿ ಅವರು ಸೆರೆಹಿಡಿದಿರುವ ಈ ವಿಡಿಯೋದಲ್ಲಿ ಆನೆಗಳು ನೀರಿನಲ್ಲಿ ಈಜುತ್ತಿರುವುದನ್ನು ಕಾಣಬಹುದು. ಅವರ ದೇಹದ ಮೇಲಿನ ಭಾಗ ಮಾತ್ರ ನೀರಿನ ಮೇಲೆ ಗೋಚರಿಸುತ್ತದೆ.

ಸಚಿನ್ ಸೆರೆ ಹಿಡಿದ ಈ ವಿಡಿಯೋ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದೆ. ನೋಡಿದಷ್ಟೂ ನೋಡಬೇಕೆನಿಸುತ್ತದೆ. ಮೆಚ್ಚುಗೆಯ ಸುರಿಮಳೆಗಳೇ ಇದಕ್ಕೆ ಬಂದಿದೆ. ಸದ್ಯ ಇದು ಎಲ್ಲೆಡೆ ಭಾರೀ ವೈರಲ್ ಆಗ್ತಿದೆ.

Udupi: ಗರುಡ ಗ್ಯಾಂಗ್‌ ವಾರ್‌ ಆರೋಪಿಗಳಿಂದ ಜೈಲಿನಲ್ಲೇ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ; ದೂರು ದಾಖಲು

Related News

Advertisement
Advertisement