For the best experience, open
https://m.hosakannada.com
on your mobile browser.
Advertisement

Vijayapura: ಸಾವು ಗೆದ್ದ ಸಾತ್ವಿಕ್‌; ಈತನ ಹೆಸರು ಇನ್ನು ಸಿದ್ದಲಿಂಗ

Vijayapura: ಕೊಳವೆ ಬಾವಿಗೆ ಬಿದ್ದು ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಬಂದ ಬಾಲಕ ಎರಡು ವರ್ಷದ ಸಾತ್ವಿಕ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
09:09 AM Apr 05, 2024 IST | ಸುದರ್ಶನ್
UpdateAt: 09:39 AM Apr 05, 2024 IST
vijayapura  ಸಾವು ಗೆದ್ದ ಸಾತ್ವಿಕ್‌  ಈತನ ಹೆಸರು ಇನ್ನು ಸಿದ್ದಲಿಂಗ
Advertisement

Vijayapura: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದು ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಬಂದ ಬಾಲಕ ಎರಡು ವರ್ಷದ ಸಾತ್ವಿಕ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Advertisement

ಇದನ್ನೂ ಓದಿ: Mangaluru Food Poisoning: ಮಂಗಳೂರಿನಲ್ಲಿ ಫೂಡ್‌ಪಾಯಿಸನ್‌ಗೆ ತುತ್ತಾದ ನೂರಾರು ಮಂದಿ

ತಾಯಿ ಪೂಜಾ ಅವರು ತನ್ನ ಏಕೈಕ ಕರುಳಕುಡಿಯನ್ನು ಸುರಕ್ಷತೆಗಾಗಿ ಹಲವು ದೇವರಿಗೆ ಹರಕೆ ಹೇಳಿಕೊಂಡಿದ್ದು, ಇದರಲ್ಲಿ ಮಗುವಿನ ಹೆಸರು ಬದಲಾವಣೆ ಕೂಡಾ ಇದೆ. ಹೌದು. ದೇವರಲ್ಲಿ ಮಗುವನ್ನು ಬದುಕಿಸಿಕೊಡು ಎಂದು ತಾಯಿ ಹರಕೆ ಹೊತ್ತಿದ್ದು, ಮನೆಯಿಂದ ಮಠದವರೆಗೆ ದೀಡ ನಮಸ್ಕಾರ ಹಾಕಿ, ಮಗುವಿಗೆ ಮರು ನಾಮಕರಣ ಮಾಡುವುದಾಗಿ ಹೇಳಿದ್ದರೆಂದು ವರದಿಯಾಗಿದೆ.

Advertisement

ಇದನ್ನೂ ಓದಿ: Sonu Srinivas Gowda: ಸೋನು ಗೌಡಗೆ ಜಾಮೀನು ಮಂಜೂರು; ಕೋರ್ಟ್‌ ವಿಧಿಸಿದ ಷರತ್ತೇನು?

ಬರುವ 28 ರಂದು ಪೂಜಾ ಅವರು ತಮ್ಮ ಮನೆಯಿಂದ ಲಚ್ಯಾನ್‌ ಸಿದ್ದಲಿಂಗ ಮಹಾರಾಜರ ಮಠದವರೆಗೆ ದೀಡ ನಮಸ್ಕಾರ ಹಾಕಿ ಮಠದಲ್ಲಿ ತೊಟ್ಟಿಲು ಕಟ್ಟಿ ಮರುನಾಮಕರಣ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಅವರ ನಂಬಿಕೆಯಂತೆ ತಮ್ಮ ಮಗು ಸಿದ್ದಲಿಂಗ ಮಹಾರಾಜರ ಪವಾಡದಿಂದ ಬದುಕಿದ್ದಾಗಿಯೂ, ಹೀಗಾಗಿ ಸಾತ್ವಿಕ್‌ ಹೆಸರಿನ ಬದಲಿಗೆ ಇನ್ನು ಮುಂದೆ ಸಿದ್ದಲಿಂಗ ಎಂಬ ಹೆಸರನ್ನು ನಾಮಕರಣ ಮಾಡುತ್ತೇವೆ ಎಂದು ಹೇಳಿದ್ದಾರೆ. ಜೊತೆಗೆ ರಕ್ಷಣೆ ಮಾಡಿದ ಎಲ್ಲಾ ಸಿಬ್ಬಂದಿಗೆ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು, ಆಸ್ಪತ್ರೆ ಸಿಬ್ಬಂದಿಗೂ ಧನ್ಯವಾದ ಹೇಳಿದ್ದಾರೆ.

ಮಗುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ. ಮಗುವಿನ ತೋಳಿಗೆ ಕೊಂಚ ಗಾಯವಾಗಿದ್ದು, ಅದಕ್ಕೆ ಮುಲಾಮು ಹಚ್ಚಲಾಗಿದೆ. ಎಕ್ಸರೇ ಮಾಡಿಸಿದ್ದು, ಸಿಟಿ ಸ್ಕ್ಯಾನ್‌ ಕೂಡಾ ನಾರ್ಮಲ್‌ ಇದೆ. ಮೆದುಳು, ಹೊಟ್ಟೆಯ ಸ್ಕ್ಯಾನ್‌ ಕೂಡಾ ಮಾಡಲಾಗಿದ್ದು, ಎಲ್ಲವೂ ನಾರ್ಮಲ್‌ ಎಂದು ವರದಿಯಾಗಿದೆ.

ಮಗುವಿನ ಎಲ್ಲಾ ರಿಪೋರ್ಟ್‌ ನಾರ್ಮಲ್‌ ಆಗಿದ್ದು, ಸಾತ್ವಿಕ್‌ ಆರೋಗ್ಯವಾಗಿದ್ದಾನೆ ಎಂದು ಡಾಕ್ಟರ್‌ ಹೇಳಿದ್ದಾರೆ. ಕೊಳವೆಬಾವಿಯಲ್ಲಿ ಸಿಲುಕಿದ್ದರಿಂದ ಸಾತ್ವಿಕ್‌ಗೆ ದೇಹದ ಮೇಲೆ ಸಣ್ಣಪುಟ್ಟ ಗಾಯವಾಗಿಲ್ಲ. ಆದರೂ ಮುನ್ನೆಚ್ಚರಿಕಾ ದೃಷ್ಟಿಯಿಂದ ಇಂಡಿ ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ರವಾನೆ ಮಾಡಲಾಗಿದೆ ಎಂದು ವರದಿಯಾಗಿದೆ.

ಮಗು ಆರೋಗ್ಯವಾಗಿದ್ದು, ಯಾವುದೇ ರೀತಿಯ ಮೂಳೆ ಮತ್ತು ಮುರಿತ ಗಾಯವಾಗಿಲ್ಲ. ನಿಗಾ ಇಡುವುದಕ್ಕೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್‌ ಹೇಳಿದ್ದಾರೆ.

Advertisement
Advertisement
Advertisement