ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Vijayapura: ತೆರೆದ ಕೊಳವೆ ಬಾವಿಗೆ ಬಿದ್ದ ಮಗು; ನನಗೆ ಒಂದೇ ಕರುಳಕುಡಿ, ಉಳಿಸಿಕೊಡಿ-ತಾಯಿ ಪೂಜಾ

Vijayapura: ವಿಫಲ ಕೊಳವೆ ಬಾವಿಗೆ ಬಿದ್ದಿರುವ ಲಚ್ಯಾಣದ ಸಾತ್ವಿಕ್‌ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ
08:42 AM Apr 04, 2024 IST | ಸುದರ್ಶನ್
UpdateAt: 08:45 AM Apr 04, 2024 IST
Advertisement

Vijayapura: ವಿಫಲ ಕೊಳವೆ ಬಾವಿಗೆ ಬಿದ್ದಿರುವ ಲಚ್ಯಾಣದ ಸಾತ್ವಿಕ್‌ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಆದರೆ 10 ಅಡಿ ಆಳದಲ್ಲಿ ಇರುವ ಭಾರೀ ಗಾತ್ರದ ಬಂಡೆಗಲ್ಲು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ.

Advertisement

ಇದನ್ನೂ ಓದಿ: RCB: ಆರ್‌ಸಿಬಿಯ ನಿರಂತರ ಸೋಲಿಗೆ ಕೊಯ್ಲಿಯೇ ನೇರ ಹೊಣೆ : ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದ ಹಳೆಯ ಕ್ರಿಕೆಟ್ ದಿಗ್ಗಜ

Advertisement

ಎರಡು ವರ್ಷದ ಮಗು ಸಾತ್ವಿಕ್‌ 16 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಈಗಾಗಲೇ ಸುಮಾರು 20 ಅಡಿ ದೂರದಿಂದ 10 ಅಡಿ ಆಳದವರೆಗೂ ಭೂಮಿ ಅಗೆದಿರುವ ರಕ್ಷಣಾ ಕಾರ್ಯಾಚರಣೆ ತಂಡ ಸಾತ್ವಿಕ್‌ ಸಿಲುಕಿರುವ ಸ್ಥಳದತ್ತ ಹೊರಟಿದ್ದಾರೆ. ಇದೀಗ ಈ ಭಾರೀ ಗಾತ್ರದ ಬಂಡೆಕಲ್ಲು ದೊರಕಿದ್ದು, ಸ್ಟೋನ್‌ ಬ್ರೇಕರ್‌ ಯಂತ್ರದ ಸಹಾಯದಿಂದ ಬಂಡೆಗಲ್ಲು ಒಡೆಯುವ ಕೆಲಸದಲ್ಲಿ ತೊಡಗಿದ್ದು, ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಶೇ.30ರಷ್ಟು ಮಾತ್ರ ಬಂಡೆಗಲ್ಲು ಒಡೆಯಲಾಗಿತ್ತು.

ಇದನ್ನೂ ಓದಿ: KPSC: ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಮಾಡಿದ KPSC : ಏಪ್ರಿಲ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ

ಕತ್ತಲು ಆವರಿಸಿದ ಸಮಯದಲ್ಲೀ ಜನರು ಸ್ಥಳಕ್ಕೆ ಬರುತ್ತಿರುವುದನ್ನು ಪೊಲೀಸರಿಗೆ ನಿವಾರಿಸುವುದು ತಲೆನೋವಾಗಿದ್ದು, ವಿಜಯಪುರ ಮಾತ್ರವಲ್ಲದೇ ನೆರೆಯ ಕಲಬುರಗಿ, ಮಹಾರಾಷ್ಟ್ರ ರಾಜ್ಯದಿಂದ ಕೂಡಾ ಜನ ತಂಡೋಪತಂಡವಾಗಿ ಸ್ಥಳಕ್ಕೆ ಬಂದಿದ್ದರು.

ಬಾಲಕನ ತಂದೆ ಸತೀಶ ಅವರು ಮಗುವಿನ ಕಾಲಿಗೆ ಕಟ್ಟಿರುವ ಗೆಜ್ಜೆ ಸದ್ದಿನಿಂದ ಪತ್ತೆ ಮಾಡಿದೆವು ಎಂದು ಹೇಳಿದ್ದಾರೆ. ಇತ್ತ ತಾಯಿ ನನಗಿರುವುದು ಒಬ್ಬನೇ ಮಗ. ದಯವಿಟ್ಟು ನನ್ನ ಕರುಳ ಕುಡಿ ಉಳಿಸಿಕೊಡಿ ಎಂದು ಅಂಗಲಾಚುತ್ತಿದ್ದಾರೆ. ಹೇಗಾದರೂ ಮಾಡಿ ನನ್ನ ಮಗನನ್ನು ಸುರಕ್ಷಿತವಾಗಿ ನಮ್ಮ ಉಡಿಗೆ ಹಾಕಲಿ ಎಂದು ಪೋಷಕರು ಬೇಡಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ಜಿಲ್ಲಾಡಳಿತ ಸಾತ್ವಿಕನನ್ನು ಕೊಳವೆ ಬಾವಿಯಿಂದ ಸುರಕ್ಷಿತವಾಗಿ ಹೊರಗೆ ತರಲು ಕಾರ್ಯಾಚರಣೆ ನಡೆಸುತ್ತಿದೆ.

Advertisement
Advertisement