Vijayapura: ಕೊಳವೆ ಬಾವಿಗೆ ಬಿದ್ದ ಮಗು ಪ್ರಕರಣ; ಅಪರೇಷನ್ ಸಕ್ಸಸ್; ಸಾವು ಗೆದ್ದು ಬಂದ ಪುಟ್ಟ ಕಂದ
Vijayapura: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಬಾಲಕ ಸಾತ್ವಿಕ್ ರಕ್ಷಣಾ ಕಾರ್ಯಾಚಾರಣೆ ಮುಗಿದಿದ್ದು, ಮಗುವನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: Home Tips: ಈ ಬೇಸಿಗೆ ಕಾಲದಲ್ಲಿ ನಿಮ್ಮ ಮನೆಯನ್ನು ಎಸಿ ಅಥವಾ ಕೂಲರ್ ಇಲ್ಲದೆ ಕೂಡಾ ತಂಪಾಗಿರಿಸಬಹುದು; ಈ ಸಲಹೆ ಅನುಸರಿಸಿ
19 ಗಂಟೆಗಳ ನಿರಂತರ ಎಸ್‌ಡಿಆರ್‌ಎಫ್ ಹಾಗೂ ಕೇಂದ್ರದ ಎನ್‌ಡಿಆರ್‌ಎಫ್ ತಂಡ ಕಾರ್ಯಚರಣೆ ಮಾಡಿ ಮಗುವಿನ ರಕ್ಷಣೆ ಮಾಡಿದೆ. ಮಗು ಬದುಕಿ ಬರಲಿ ಎಂದು ಇಡೀ ವಿಜಯಪುರ ಮಾತ್ರವಲ್ಲದೇ ಇಡೀ ಕರುನಾಡಿನ ಜನತೆ ದೇವರಲ್ಲಿ ಪ್ರಾರ್ಥನೆ ಮಾಡಿತ್ತು. ಈ ಫಲದಿಂದ ಆ ಪುಟ್ಟ ಜೀವ ಬದುಕುಳಿದಿದೆ.
ಇದನ್ನೂ ಓದಿ: White Hair: ಒಂದು ಬಿಳಿ ಕೂದಲು ಕಿತ್ತರೆ ಸುತ್ತ ಮುತ್ತ ಕೂದಲು ಬಿಳಿಯಾಗುತ್ತಾ? ವೈದ್ಯರು ಹೇಳೋದೇನು?
ಮಗು ಹೊರಗೆ ಬಂದ ಕೂಡಲೇ ಅಲ್ಲಿ ನೆರೆದಿದ್ದ ಸಾವಿರಾರು ಜನರು ಸಿಳ್ಳೆ ಕೇಕೆ ಹಾಕಿ ವಿಜಯೋತ್ಸವ ಆಚರಿಸಿತು. ಇಡೀ ರಕ್ಷಣಾ ಕಾರ್ಯಾಚರಣೆ ಮಾಡಿದ ತಂಡಕ್ಕೆ, ಪೊಲೀಸರಿಗೆ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ.
ಮಗು ಸಾತ್ವಿಕ್‌ನನ್ನು ರಕ್ಷಣೆ ಮಾಡಿ ಸ್ಟ್ರೆಚರ್ ಮೇಲೆ ಹೊರಗೆ ತರುವ ಸಮಯದಲ್ಲಿ ಮಗು ಆರೋಗ್ಯವಾಗಿರುವುದು ಕಂಡು ಬಂದಿದೆ. ಸ್ಟ್ರೆಚರ್ ಮೇಲೆ ಮಗುವನ್ನು ತೆಗೆದುಕೊಂಡು ಬರುವಾಗ ಮತ್ತೆಲ್ಲಿ ಬೀಳುವೆನೋ ಎಂದು ಸ್ಟ್ರೆಚರ್ ಅನ್ನು ಮಗು ಗಟ್ಟಿಯಾಗಿ ಹಿಡಿದು ಅಮ್ಮಾ ಎಂದು ಅಳುವ ದೃಶ್ಯ ಕಂಡಿದೆ.
ಮಗು ಹೊರಗೆ ತೆಗೆದ ಕೂಡಲೇ ಪ್ರಥಮ ಚಿಕಿತ್ಸೆಯನ್ನು ವೈದ್ಯರು ನೀಡಿದ್ದು, ನಂತರ ಆಂಬುಲೆನ್ಸ್‌ನಲ್ಲಿ ಮಗುವನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.