ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Vijayapur: ಬರೋಬ್ಬರಿ 18 ಲಕ್ಷಕ್ಕೆ ಮಾರಾಟವಾಯ್ತು ಒಂದೇ ಒಂದು ಎತ್ತು - ನಿಮ್ಮನ್ನೇ ದಂಗು ಬಡಿಸುತ್ತೆ ಇದರ ವಿಶೇಷತೆ !!

Vijayapur: ಎತ್ತು ಬರೋಬ್ಬರಿ 18 ಲಕ್ಷ 1 ಸಾವಿರಕ್ಕೆ ಮಾರಾಟವಾಗಿದ್ದು, ಜಾನುವಾರುಗಳ ಮಾರಾಟದಲ್ಲಿ ಇದುವರೆಗೂ ದಾಖಲೆ ಮೊತ್ತಕ್ಕೆ ಮಾರಾಟವಾದ ಎತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
02:04 PM Jul 02, 2024 IST | ಸುದರ್ಶನ್
UpdateAt: 02:04 PM Jul 02, 2024 IST
Advertisement

Vijayapur: ದೇಶದ ಬೆನ್ನೆಲುಬಾದ ರೈತನಿಗೆ ಹೋರಿಗಳು, ಎತ್ತುಗಳೇ ಬೆನ್ನೆಲುಬು. ಆತನ ಜೀವನ ಹಸನಾಗಿಸುವುದೇ ಈ ಎತ್ತುಗಳು. ಅವುಗಳಿಗೆ ಬೆಲೆಕಟ್ಟಲಾಗುವುದಿಲ್ಲ. ಆದರೀಗ ಅಚ್ಚರಿ ಎಂಬಂತೆ ಒಂದೇ ಎತ್ತು ಬರೋಬ್ಬರಿ 18 ಲಕ್ಷ 1 ಸಾವಿರಕ್ಕೆ ಮಾರಾಟವಾಗಿದ್ದು, ಜಾನುವಾರುಗಳ ಮಾರಾಟದಲ್ಲಿ ಇದುವರೆಗೂ ದಾಖಲೆ ಮೊತ್ತಕ್ಕೆ ಮಾರಾಟವಾದ ಎತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

Reels And Short Videos: ರೀಲ್ಸ್ ಕ್ರೇಜಿನಿಂದ ಬಸ್ ಸ್ಟಾಂಡಿನಲ್ಲಿ ಬೆತ್ತಲಾದ ಯುವಕ – ಮುಂದೆ ಏನಾಯಿತೆಂದು ನೀವೆ ನೋಡಿ

Advertisement

ಹೌದು, ವಿಜಯಪುರ(Vijayapur) ಜಿಲ್ಲೆ ಬಬಲೇಶ್ವರ(Babaleshwar) ತಾಲೂಕಿನ ಬಬಲಾದಿ ಗ್ರಾಮದ ರಾಮನಗೌಡ ಪಾಟೀಲ್ ಎಂಬುವರರ ಎತ್ತನ್ನು ಬರೋಬ್ಬರಿ 18 ಲಕ್ಷ 1 ಸಾವಿರ ಕೊಟ್ಟು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಿಟ್ನಾಳ ಗ್ರಾಮದ ಸದಾಶಿವ ಡಾಂಗೆ ಎಂಬುವರು ಖರೀದಿ ಮಾಡಿದ್ದಾರೆ.

ಏನಿದರ ವಿಶೇಷತೆ?
ಹಿಂದೂಸ್ತಾನ್ HP ಹೆಸರಿನ ಎತ್ತು ಇದಾಗಿದ್ದು. ಎಲ್ಲರೂ ಹುಬ್ಬೇರಿಸೋ ಮೊತ್ತಕ್ಕೆ ಎತ್ತು ಮಾರಾಟವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಾರ ಹುಣ್ಣಿಮೆ ಸಮಯದಲ್ಲಿ ಎತ್ತುಗಳ ಓಟ ಸ್ಪರ್ಧೆ ನಡೆಯುತ್ತದೆ. ಮತ್ತು ಬೇಸಿಗೆ ಕಾಲದಲ್ಲೂ ಎತ್ತುಗಳ ಓಟ ಸ್ಪರ್ಧೆ ಆಯೋಜಿಸಲಾಗಿರುತ್ತದೆ. ಈ ತೆರಬಂಡಿ ಓಟ ಸ್ಪರ್ಧೆ ಮೂಲಕ ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿತ್ತು 18 ಲಕ್ಷಕ್ಕೆ ಮಾರಾಟವಾದ ಈ ಎತ್ತು. ತೆರಬಂಡಿ ಸ್ಪರ್ಧೆಯಲ್ಲಿ ಈ ಎತ್ತು ಹಲಾವರು ಬಹುಮಾನಗಳನ್ನು ಗೆದ್ದು ಬೀಗಿದೆಯಂತೆ.

ಅಂದಹಾಗೆ ಐದು‌ವರೆ ಅಡಿ ಎತ್ತರವಿರೋ ಇದು ಉತ್ತರ ಕರ್ನಾಟಕ ಭಾಗದ ಯಾವುದೇ ಜಿಲ್ಲೆಯಲ್ಲಿ ತೆರಬಂಡಿ ಸ್ಪರ್ಧೆ ನಡೆದರೂ, ಈ ಎತ್ತು ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿತ್ತು. ಎತ್ತು ಇಲ್ಲಿಯವರೆಗೆ 15 ಲಕ್ಷ ರೂ. ಹಣ, 40 ಗ್ರಾಂ ಚಿನ್ನ, ಎರಡು ಬೆಳ್ಳಿ ಗದೆ, 4 ಬೈಕ್ ಗೆದ್ದಿದೆ.

Schools Holiday: ಜುಲೈ 4 ರಂದು ದೇಶಾದ್ಯಂತ ಶಾಲಾ-ಕಾಲೇಜು ಬಂದ್‌!

Advertisement
Advertisement